ತುರುಕನಡೋಣಿಯಲ್ಲಿ ಜೋಡೆತ್ತುಗಳ ಪರಿಶ್ರಮಕ್ಕೆ ಭವ್ಯ ಮೆರವಣಿಗೆ: ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಹರಗಿದ ಎತ್ತುಗಳು

 


ತುರುಕನಡೋಣಿಯಲ್ಲಿ ಜೋಡೆತ್ತುಗಳ ಪರಿಶ್ರಮಕ್ಕೆ ಭವ್ಯ ಮೆರವಣಿಗೆ: 

ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಹರಗಿದ ಎತ್ತುಗಳು

ರಾಯಚೂರು,ನ.17- ತಾಲೂಕಿನ ತುರುಕನಡೋಣಿಯಲ್ಲಿ ಜೋಡೆತ್ತುಗಳು ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಕುಂಟೆ ಹೊಡೆದಿದ್ದರಿಂದ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.

ಗ್ರಾಮದ  ಯುವ ರೈತ ಅಬ್ರಾಹಂ ತಂದೆ ಸ್ವಾಮಿದಾಸ್ ಅವರ ಎತ್ತುಗಳು ಇಂದು ಬೆಳಿಗಿನ ಜಾವಾ ಅದೇ ಗ್ರಾಮದ ದೊಡ್ಡ ಯಲ್ಲಪ್ಪ ಎನ್ನುವವರ ಲೀಜ್ ಪಡೆದ ೧೬ ಎಕರೆ ಹತ್ತಿ ಹೊಲದಲ್ಲಿ ಪೈರಿಗೆ ಹಾನಿಯಾಗದಂತೆ ಕೇವಲ ೯ ತಾಸು ೨೦ ನಿಮಿಷದಲ್ಲಿ ಹರಗಿದ ಎತ್ತುಗಳ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ದಿನಕ್ಕೆ ೨ರಿಂದ ೩ ಎಕರೆ ಹತ್ತಿ ಹೊಲ ಹರಗುವುದು ವಾಡಿಕೆ. ಆದರೆ, ಅಬ್ರಾಹಂ ತನ್ನ ಎತ್ತುಗಳ ಮೂಲಕ ೧೬ ಎಕರೆ ಹೊಲ ಕುಂಟೆ ಹರಗಿ ಭಲೆ ಎನ್ನಿಸಿಕೊಂಡಿದ್ದಾರೆ.

ಜಮೀನು ಅರಗಿ ಊರಿಗೆ ಬಂದಾಗ ಗ್ರಾಮದಲ್ಲಿ ರೈತರು ಅಬ್ರಾಹಂ ಮತ್ತು ಅವರ ಎತ್ತುಗಳಿಗೆ ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಮನೆಗೆ  ತಲುಪಿಸಿ ರೈತ ಮತ್ತು ಎತ್ತುಗಳ ಪರಿಶ್ರಮಕ್ಕೆ ಗೌರವ ಸಲ್ಲಿಸಿದ್ದಾರೆ.

ನೋಡಲು ಸೊಣಕಲಾಗಿರುವ ಎತ್ತುಗಳು ಒಂಬತ್ತು ತಾಸಿನಲ್ಲಿ ೧೬ ಎಕರೆ ಹತ್ತಿ ಹೊಲ ಕುಂಟೆ ಅರಗಿದ್ದು ಅಚ್ಚರಿ ಮೂಡಿಸಿದೆ. ಬಯಲು ಭೂಮಿ ಅರಗುವುದು ಸುಲಭ, ಹತ್ತಿಘಿ, ಬೆಳೆ ಇದ್ದ ಭೂಮಿ ಅರಗುವುದು ಸುಲಭವಲ್ಲ ಎಂದು ಹೊಲದ ಗುತ್ತಿಗೆದಾರ ದೊಡ್ಡ ಯಲ್ಲಪ್ಪ , ಸುಮಿತ್ರಾ, ಶಿವುಕುಮಾರ ಎತ್ತುಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.


ಬೇರೆಯವರ ಎತ್ತುಗಳು ಕುಂಟೆ ಹರಗಿದ್ದು ಟಿವಿಯಲ್ಲಿ, ಪತ್ರಿಕೆಗಳಲ್ಲಿ ನೋಡಿದ್ದೆ. ನಮ್ಮ ಎತ್ತುಗಳು ಕಡಿಮೆ ಅಲ್ಲ ಎಂದು ಈ ಕಾರ್ಯಕ್ಕೆ ಮುಂದಾದೆ. ಯಾರಿಗೂ ಹೇಳದೆ ಯಲ್ಲಪ್ಪನವರಿಗೆ ತಿಳಿಸಿ ಕುಂಟೆ ಕಟ್ಟಿದ್ದೆ ಉಳಿದವರಿಗೆ ಗೊತ್ತಾಗಿ ಬಂದು ನೋಡಿ ನನ್ನ ಎತ್ತುಗಳ ಜೊತೆ ಮೆರವಣಿಗೆ ಮಾಡಿದ್ದು ಮರೆಯದ ಕ್ಷಣವಾಗಿದೆ ಎಂದು ಎತ್ತುಗಳ ಮಾಲಿಕ ಅಬ್ರಾಹಂ

ಒಟ್ಟಾರೆ ರೈತನ ಹೆಗಲಿಗೆ ಆಸರೆಯಾಗುವ ಎತ್ತುಗಳ ಈ ಸಾಧನೆ ಗ್ರಾಮಸ್ಥರ ಮಧ್ಯೆ ಚರ್ಚೆಗೆ ಗ್ರಾಸವಾಗಿದೆ

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ