ಮತದಾರರ ಗುಪ್ತ ಮಾಹಿತಿ ಕಳ್ಳತನ ಆರೋಪ: ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ.
ಮತದಾರರ ಗುಪ್ತ ಮಾಹಿತಿ ಕಳ್ಳತನ ಆರೋಪ:
ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ.
ರಾಯಚೂರು,ನ.24- ಮತದಾರರ ಗುರುತಿನ ಚೀಟಿಯ ಗುಪ್ತ ಮಾಹಿತಿ ಕಳ್ಳತನ ಆರೋಪ ಹಿನ್ನಲೆ ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ, ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ, ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ನೇತೃತ್ವದ ನಿಯೋಗ ದೆಹಲಿಯಲ್ಲಿರುವ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಚುನಾವಣಾ ಆಯುಕ್ತರಿಗೆ ದೂರು ನೀಡಿ, ಕರ್ನಾಟಕದಲ್ಲಿ ಚುನಾವಣಾ ದತ್ತಾಂಶ ಕಳ್ಳತನ, ಮತದಾರರ ಮಾಹಿತಿನ್ನು ಬಹಿರಂಗಪಡಿಸಿ ಗುಪ್ತ ಮಾಹಿತಿಯನ್ನು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಇದರಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಮತದಾರರ ಹೆಸರುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಮತದಾರರ ಪಟ್ಟಿಯಿಂದ 'ಫಾರ್ಮ್ 7' ಕಡ್ಡಾಯವಾಗಿದ್ದರೂ, ಯಾವುದೇ ಕಡ್ಡಾಯ ಕಾರ್ಯವಿಧಾನವನ್ನು ಅನುಸರಿಸದೆ 27 ಲಕ್ಷ ಹೆಸರುಗಳನ್ನು ತೆಗೆದುಹಾಕಿರುವುದರಲ್ಲಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಈ ಅರ್ಜಿಗಳಿಗೆ ಸಹಿ ಹಾಕಿ ಅಧಿಕಾರ ನೀಡಿದ ಅಧಿಕಾರಿ ಯಾರು ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್, ನಜೀರ್ ಅಹಮದ್, ಪ್ರಿಯಾಂಕ ಖರ್ಗೆ, ನಾಸೀರ್ ಹುಸೀನ್ ಉಪಸ್ಥಿತರಿದ್ದರು.
Comments
Post a Comment