ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ: ಶ್ರುತಿ ಸಾಹಿತ್ಯ ಮೇಳದಿಂದ ಅಭಿನಂದನೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ: ಶ್ರುತಿ ಸಾಹಿತ್ಯ ಮೇಳದಿಂದ ಅಭಿನಂದನೆ
ರಾಯಚೂರು,ನ.18- ಡಿಸೆಂಬರ್ 10 ಮತ್ತು 11ರಂದು ಲಿಂಗಸುಗೂರು ಪಟ್ಟಣದಲ್ಲಿ ಜರುಗುತ್ತಿರುವ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ಸಾಹಿತಿ ವೀರ ಹನುಮಾನ್ ಅವರಿಗೆ ಸಾಂಸ್ಕೃತಿಕ, ಸಾಹಿತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದೆ.
ವೀರ ಹನುಮಾನವರು ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸೇವೆಯನ್ನು ಸಲ್ಲಿಸಿದ್ದಾರೆ.ಇವರು ಒಂಬತ್ತು ಹಯ್ಕುಗಳು ಒಂದು ಕವನ ಸಂಕಲನ ಹಲವಾರು ಕಥಾ ಸಂಕಲನ ಜೊತೆಗೆ ದಮ್ಮ ಎಂಬ ಬೃಹತ್ ಗ್ರಂಥವನ್ನು ರಚಿಸಿದ್ದಾರೆ ಈ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗದಿಂದ ಉತ್ತಮ ಕೃತಿ ಪ್ರಶಸ್ತಿ ಲಭಿಸಿದೆ.
ಚೆಲುವೆ ಎಂಬ ಇವರ ಕಥೆ ದೂರದರ್ಶನದಲ್ಲಿ ಪ್ರಸಾರವಾಗಿದೆ. ಹಲವಾರು ಕನ್ನಡ ಪರ ,ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿರುವ ಇವರು ಕ್ರಿಯಾಶೀಲ ಸಾಹಿತಿಗಳಾಗಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನ ಶ್ರೀ ವೀರ ಹನಮಾನವರಿಗೆ ಲಭಿಸಿದ್ದು ತುಂಬಾ ಸಂತೋಷವಾಗಿದೆ. ಸಾಧನೆಗೆ ಸಂದ ಗೌರವವೆಂದು, ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು, ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ, ಉಪಾಧ್ಯಕ್ಷ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್, ಕಾರ್ಯದರ್ಶಿಗಳಾದ ರಮೇಶ ಕುಲಕರ್ಣಿ, ಜೆ ಎಂ ವೀರೇಶ್, ಸದಸ್ಯರುಗಳಾದ ರಮಾಕಾಂತ್ ಕುಲಕರ್ಣಿ, ಸುರೇಶ್ ಕಲ್ಲೂರ್, ವಸುದೇಂದ್ರ ಸಿರವಾರ್, ವೇಣುಗೋಪಾಲ್ ವರಪ್ಪ, ರವೀಂದ್ರ ಕುಲಕರ್ಣಿ, ಪ್ರಾಣೇಶ್ ಫಟ್ನೀಸ್, ವಿಜಯಲಕ್ಷ್ಮಿ ಸೇಡಂಕರ್, ವೈ ಕೆ ಯಶೋಧ, ಶ್ರೀಮತಿ ಮೀರಾ ಕೊನಾಪುರ್, ಕೆ ಪದ್ಮಜಾ, ಶ್ರೀಪಾದ್ ದಾಸ,ಗೋಪಾಲ್ ಗುಡಿ ಬಂಡಿ, ಇವರು ಅಭಿನಂದನೆ ಸಲ್ಲಿಸಿದ್ದಾರೆ.
Comments
Post a Comment