ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸುಧಾಮೂರ್ತಿ ಭೇಟಿ.
ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸುಧಾಮೂರ್ತಿ ಭೇಟಿ. ರಾಯಚೂರು,ನ.17- ಇನ್ಫೋಸಿಸ್ ಸಂಸ್ಥಾಪಕರಾದ ಸುಧಾ ನಾರಾಯಣ ಮೂರ್ತಿ ಯವರು ಬುಧವಾರ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ದೇವದುರ್ಗ ತಾಲೂಕಿನ ಗಬ್ಬೂರಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಇತಿಹಾಸ ತಿಳಿದುಕೊಂಡು ದೇವಸ್ಥಾನ ಅಭಿವೃದ್ದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಅರ್ಚಕರು ಇದ್ದರು. ಅದೇ ರೀತಿ ಮಾನ್ವಿಯ ಜಗನ್ನಾಥ ದಾಸರ ದೇವಸ್ಥಾನಕ್ಕೆ ಭೇಟಿ ನೀಡಿ ಜಗನ್ನಾಥ ದಾಸರ ದರ್ಶನ ಪಡೆದು ದೇವಸ್ಥಾನದ ಬಗ್ಗೆ ತಿಳಿದುಕೊಂಡರು.
Comments
Post a Comment