ನಗರದಲ್ಲಿ ಭಗವದ್ಗೀತಾ ಸಮರ್ಪಣೆ ಕಾರ್ಯಕ್ರಮ ಸಂಪನ್ನ: ಭಗವದ್ಗೀತೆಯಿ0ದ ಜಗತ್ತಿಗೆ ಜ್ಞಾನದ ಬೆಳಕು-ಅಭೀನವ ರಾಚೋಟಿ ಶ್ರೀಗಳು

 


ನಗರದಲ್ಲಿ ಭಗವದ್ಗೀತಾ ಸಮರ್ಪಣೆ ಕಾರ್ಯಕ್ರಮ ಸಂಪನ್ನ:

ಭಗವದ್ಗೀತೆಯಿ0ದ ಜಗತ್ತಿಗೆ ಜ್ಞಾನದ ಬೆಳಕು-ಅಭೀನವ ರಾಚೋಟಿ ಶ್ರೀಗಳು

ರಾಯಚೂರು,ಡಿ.೨೬-ನಗರದಲ್ಲಿ ಶ್ರೀ ಭಗವದ್ಗೀತ ಸಮರ್ಪಣ ಅಭಿಯನ ಯಶಸ್ವಿಯಾಗಿ ನೆರವೇರಿತು. ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆಯನ್ನು ಸೋಮವಾರಪೇಟೆ ಹೀರೆ ಮಠದ ಅಭೀನವ ರಾಚೋಟಿವೀರ ಶಿವಾಚಾರ್ಯ ಶ್ರೀಗಳು ನೆರವೇರಿಸಿ ಶ್ರೀಭಗವದ್ಗೀತೆ ಜಗತ್ತಿಗೆ ಕೃಷ್ಣ ನೀಡಿದ ಮಾಹಾನ ಕೊಡುಗೆಯಾಗಿದ್ದು ಪ್ರತಿಯೊಬ್ಬರು ತಮ್ಮ ಕರ್ಮಗಳನ್ನು ಮಾಡಿ ಫಲವನ್ನು ಭಗವಂತನಿಗೆ ಬಿಡಬೇಕೆಂದ ಅವರು ಭಗವದ್ಗೀತೆ ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತದೆ ಎಂದು ಆಶೀವರ್ಚನ ನೀಡಿದರು.


ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇ0ದ್ರ ಸರಸ್ವತಿ ಶ್ರೀಗಳು  ದೃಶ್ಯ ಸಂದೇಶ ನೀಡಿ ರಾಯಚೂರಿನ ಭಗವದ್ಗೀತೆಯ ಭಕ್ತರು ಗೀತೆಯ ಸಮರ್ಪಣೆ ಮಾಡಿದ್ದು ಸಂತೋಷದ ಸಂಗತಿ ನಾವು ಈ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳುಲು ಆಗದಿರುವ ಕಾರಣ ಈ ದೃಶ್ಯ ಸಂದೇಶ ನೀಡುತ್ತಿದ್ದು ಗೀತೆಯ ಪ್ರತಿಯೊಂದು ಸಂದೇಶ ಮನುಕುಲಕ್ಕೆ ದಾರಿದೀಪವಾಗಿದೆ ಗೀತೆಯ ಎಲ್ಲ ಶ್ಲೋಕಗಳು ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತದೆ ಎಂದ ಅವರು ಭಗವದಗೀತೆ ಜ್ಞಾನದ ಜ್ಯೋತಿಯಾಗಿದೆ ಕರ್ಮದ ಮೂಲಕ ಸನ್ಯಾಸಿಗಳು ತಮ್ಮ ಕಾರ್ಯ ನೆರವೇರಿಸಬೇಕು ರಾಗ ಮತ್ತು ದ್ವೇಷದ ಬಗ್ಗೆ ನಮ್ಮಲ್ಲಿ ಸುಳಿಯದಿದ್ದಾಗೆ ನಮ್ಮಲ್ಲಿ ಸನ್ಯಾಸ ದೀಕ್ಷೆ ನೆಲೆಗೊಂಡAತೆ ಎಂದರು. 


ಕರ್ಮಯೋಗದಿಂದ ಜ್ಞಾನಯೋಗ ಪ್ರಾಪ್ತಿಯಾಗುತ್ತದೆ ಎಂಬ ದೃಶ್ಯ ಸಂದೇಶ ಸಭೀಕರು  ಆಲಿಸಿ ಆಶೀರ್ವಾದ ಪಡೆದರು. 

ಅತಿಥಿಗಳಾಗಿ ಆಗಮಿಸಿದ್ದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪವನಾಚಾರ್ ಕುರ್ಡಿ ಮಾತನಾಡಿ ಭಗವದ್ಗೀತೆಯಲ್ಲಿ ಇಡಿ ಜಗತ್ತಿನ ಸಾರ ಅಡಗಿದೆ ನಾವೆಲ್ಲರು ಹೇಗೆ ಜೀವಿಸಬೇಕು ನಮ್ಮ ನಮ್ಮ ಕರ್ಮಗಳನ್ನು ಮಾಡಿ ಫಲಾಫಲಗಳನ್ನು ದೇವರಿಗೆ ಬಿಡಬೇಕೆಂಬ ಸಂದೇಶ ಅಡಗಿದ್ದು ಭಗವದ್ಗೀತೆಯ ಸಂದೇಶವನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.


ಚಿಕ್ಕ ಮಕ್ಕಳಿಂದ ಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧೀಸುವ ಸನ್ನಿವೇಶ ಸರ್ವರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಸರ್ವರಿಂದ ಶ್ರೀ ಭಗವದ್ಗೀತೆಯ ೫ ನೇ ಅಧ್ಯಾಯ ಸಾಮೂಹಿಕ ಪಠಣ ನೆರವೇರಿತು. ಶ್ರೀಭಗವದ್ಗೀತಾ ಸಮರ್ಪಣ ಅಭೀಯಾನ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಾ.ಆನಂದತೀರ್ಥ ಫಡ್ನೀಸ್ ಸ್ವಾಗತಿಸಿದರು. ವೇದಿಕೆ ಮೇಲೆ ಮುಖಂಡರಾದ ಕಡಗೋಲ ಆಂಜಿನೇಯ, ಪೆಪ್ಸಿ ಗೋವಿಂದ್, ನಗರಸಭೆ ಸದಸ್ಯ ಈ.ಶಶಿರಾಜ, ಗೀತಾ ಪ್ರಶಿಕ್ಷಕಿಯರ ಪ್ರತಿನಿಧಿಯಾಗಿ ಬಾಗೋಡಿ ಇನ್ನಿತರರು ಉಪಸ್ಥಿತರಿದ್ದರು. 

ಈಶ್ವರ ಹೆಗಡೆ ವಂದಿಸಿದರು ಪ್ರಸಾದ ವಿತರಣೆ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

 


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ