ಜಿಲ್ಲೆಯಲ್ಲಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆಯಿಂದ 154 ಪ್ರಕರಣಗಳ ಪತ್ತೆ: ಜಪ್ತಿಯಾದ 4.17 ಕೋಟಿ. ರೂ ಮೊತ್ತದ ಸ್ವತ್ತು ವಾರಸುದಾರರಿಗೆ - ಎಸ್ಪಿ ನಿಖಿಲ್
ಜಿಲ್ಲೆಯಲ್ಲಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆಯಿಂದ 154 ಪ್ರಕರಣಗಳ ಪತ್ತೆ:
ಜಪ್ತಿಯಾದ 4.17 ಕೋಟಿ. ರೂ ಮೊತ್ತದ ಸ್ವತ್ತು ವಾರಸುದಾರರಿಗೆ - ಎಸ್ಪಿ ನಿಖಿಲ್
ರಾಯಚೂರು,ಡಿ.೩೧- ಜಿಲ್ಲೆಯಾದ್ಯಂತ ಪೊಲೀಸರ ಮಿಂಚಿನ ಕಾರ್ಯಚರಣೆ ಪರಿಣಾಮ 154 ಪ್ರಕರಣಗಳ ಪತ್ತೆ ಮಾಡಿ ಕಳ್ಳತನ ಮಾಡಿದ ಸುಮಾರು 4.17 ಕೋಟಿ ರೂ. ಮೊತ್ತದ ಸ್ವತ್ತುಗಳನ್ನು ವಾರಸುದಾರರಿಗೆ ಹಂತಿರುಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು.
ಅವರಿಂದು ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಪ್ತಿ ಮಾಡಲಾದ ಸ್ವತ್ತನ್ನು ಹಿಂತಿರುಗಿಸುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯಾದ್ಯಂತ ಕಳ್ಳತನವಾದ ಒಟ್ಟು ೩೮೩ ಸ್ವತ್ತಿನ ಪ್ರಕರಣಗಳಲ್ಲಿ ಕಳುವಾದ ಒಟ್ಟು ಸುಮಾರು ೬.೩೩ ಕೋಟಿ ರೂ ಗಳ ಮೌಲ್ಯದ ಪೈಕಿ ೧೫೪ ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು ೪.೧೭ ಕೋಟಿ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಎಲ್ಲ ಪ್ರಕರಣದಲ್ಲಿ ಭಾಗಿಯಾದ 148 ಆರೋಪಿಗಳನ್ನು ಬಂಧಿಸಿ ಅವರಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಸ್ವತ್ತನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತೆ0ದ ಅವರು ಸಿಂಧನೂರು ವಿಭಾಗದಲ್ಲಿ ೨ ಕೋಟಿ .ರೂ ಮೌಲ್ಯದ ಸ್ವತ್ತು, ಲಿಂಗಸ್ಗೂರು ವಿಭಾಗದಲ್ಲಿ ೧.೧೭ ಕೋಟಿ .ರೂ ಮೌಲ್ಯದ ಸ್ವತ್ತು, ರಾಯಚೂರು ವಿಭಾಗದಲ್ಲಿ ೧ ಕೋಟಿ .ರೂ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದ್ದು ಅವುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದರು.
ಬೈಕ್ ಗಳು, ಟ್ಯಾಕ್ಟರ್ , ಕಾರು, ಬೆಳ್ಳಿ ಬಂಗಾರ, ಕಂಪ್ಯೂಟರ್, ಲ್ಯಾಪಟಾಪ್,ಕೃಷಿ ಮೋಟರ್ ಪಂಪ ಸೆಟ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದ ಅವರು ಅಕ್ರಮ ಗಾಂಜಾ ಬೆಳೆಯನ್ನು ಜಪ್ತಿ ಮಾಡಲಾಗಿದ್ದು ೧೧ ಜನರನ್ನು ಗಡಿ ಪಾರು ಮಾಡಲಾಗಿದೆ, ಸೈಬರ್ ಕ್ರೆöÊಮ್ ಸಹ ಬೇಧಿಸಿ ೧೭ ಲಕ್ಷ ರೂ ಜಪ್ತಿ ಮಾಡಲಾಗಿದೆ
ಎಂದರು.
ಜಿಲ್ಲೆಯಲ್ಲಿ ಅಪಘಾತ ತಡೆಗಟ್ಟಲು ರಸ್ತೆ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು ವಾಹನ ಚಾಲಕರಿಗೆ ತಿಳಿವಳಿಕೆ ನೀಡಲಾಗಿದ್ದು ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗಿದೆ ಎಂದ ಅವರು ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಸಂಬ0ಧಪಟ್ಟ ಇಲಾಖೆಗೆ ಸೂಚಿಸಲಾಗಿದೆ ಎಂದ ಅವರು ಕುಡಿದು ವಾಹನ ಚಲಾಯಿಸುವವರಿಗೆ, ಟ್ರಿಪಲ್ ಚಾಲನೆ ಮಾಡುವವರಿಗೆ ದಂಡ ವಿದಿಸಲಾಗಿದ್ದು ರಸ್ತೆ ನಿಯಮಗಳನ್ನು ಪಾಲಿಸದ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ ಮತ್ತು ಪೊಲೀಸರು ಸೇರಿದಂತೆ ಸಾರ್ವಕನಿಕರು ಕಡ್ಡಾಯವಾಗಿ ಹೆಲ್ಮೇಟ್ ಧಾರಣೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ ೯೦ ದಿನಗಳ ಸ್ಕಿಲ್ ಡೆವಲಪಮೆಂಟ್ ತರಬೇತಿ ನೀಡಿ ಅವರಿಗೆ ಟೈಲರಿಂಗ ಮುಂತಾದ ಕಲಿಕೆ ಮೂಲಕ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದರು.
ನಗರದ ಹಲವೆಡೆ ಪಾದಚಾರಿ ಪಥ ಅತಿಕ್ರಮಣ ಮತ್ತು ಅನಿಧಿಕೃತ ವಾಹನ ನಿಲುಗಡೆ ಸ್ಥಳಗಳನ್ನು ತೆರವುಗೊಳಿಸಲಾಗುತ್ತದೆ ಹೋಟೆಲ್, ಶಾಪಿಂಗ್ ಮಾಲಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದ ಅವರು ಮಾಧ್ಯಮ ಮಿತ್ರರ ವಾಹನಗಳಿಗೆ ಕ್ಯೂ.ಆರ್ ಕೋಡ್‌ವುಳ್ಳ ಗುರುತುನ ಚಿಟಿ ನೀಲಾಗುತ್ತದೆ ಎಂದರು.
ಪೊಲೀಸರು ಜನಸ್ನೇಹಿಯಾಗಿದ್ದು ಸಾರ್ವಜನಿಕರು ಸಹ ಪೊಲೀಸರಿಗೆ ಸಹಕರಿಸಬೇಕೆಂದ ಅವರು ಅಪರಾಧ ಕೃತ್ಯಗಳ ತಡೆಗಟ್ಟಲು ಪೊಲೀಸರು ನೀಡುವ ಸುರಕ್ಷತಾ ಸಲಹೆಗಳನ್ನು ಪಾಲಿಸಬೇಕೆಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಶಿವಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.
Comments
Post a Comment