ರಾಷ್ಟ್ರೀಯ ಹೆದ್ದಾರಿ 167 ಕೃಷ್ಣ ಬ್ರಿಡ್ಜ್ ಕಾಮಗಾರಿಯನ್ನು ಪರಿಶೀಲಿಸಿದ ಅಮರೇಶ್ವರ ನಾಯಕ

 


ರಾಷ್ಟ್ರೀಯ ಹೆದ್ದಾರಿ 167  ಕೃಷ್ಣ ಬ್ರಿಡ್ಜ್ ಕಾಮಗಾರಿಯನ್ನು ಪರಿಶೀಲಿಸಿದ ಅಮರೇಶ್ವರ ನಾಯಕ

ರಾಯಚೂರು,ಡಿ.30- ಇಂದು  ಬೆಳಿಗ್ಗೆ ಲೋಕಸಭಾ ಸದಸ್ಯರಾದ  ರಾಜಾ ಅಮರೇಶ್ವರ ನಾಯಕ್ ಇವರು ರಾಷ್ಟ್ರೀಯ ಹೆದ್ದಾರಿ -167 ವಲಯ ವ್ಯಾಪ್ತಿಯ  ಕೃಷ್ಣ ನದಿಗೆ ಅಡ್ಡಲಾಗಿ ನಡೆಯುತ್ತಿರುವ ಕೃಷ್ಣ ಬ್ರಿಡ್ಜ್ ಹೊಸ ಕಾಮಗಾರಿ ಸ್ಥಳ ಪರಿಶೀಲಿಸಿದರು.                ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಸಂಬಂಧಿತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮಾನ್ಯ ಲೋಕಸಭಾ ಸದಸ್ಯರಿಗೆ ಕಾಮಗಾರಿಯ ಬಗ್ಗೆ ವಿವರಣೆ ನೀಡಿದರು. ಕಾಮಗಾರಿಯು ಮಂದಗತಿಯಲ್ಲಿ ಪ್ರಗತಿಯಲ್ಲಿರುವ ಬಗ್ಗೆ ಸಂಸದರು ಪರಿಶೀಲಿಸಿದಾಗ ಕಾಮಗಾರಿಯ ಗುತ್ತಿಗೆದಾರರ ಪ್ರತಿನಿಧಿಯವರು ಈಗಾಗಲೇ ಬೆಡ್ ಬ್ಲಾಕ್ ವರೆಗೆ ಪೂರ್ಣಗೊಂಡಿರುವ ಎರಡು ಬದಿಯ ಅಪೆಟ್ ಮೆ0ಟ್ ಗಳ ಮೇಲೆ ಫ್ರೀ ಕಾಸ್ಟ್ ಮಾಡಿದ ಪಿ ಎಸ್ ಸಿ ಗಿರ್ಡರುಗಳನ್ನು ಅಳವಡಿಸಿ ನದಿಯ ಕೊಳವೆಯಲ್ಲಿ ಎಲ್ಲಾ 9 ಪಿಯರ್ ಗಳನ್ನು ಪಿಯರ್ ಕ್ಯಾಪ್ ಲೆವೆಲ್ ವರೆಗೆ ಮಾರ್ಚ್ 2023 ಮಾಸ ಅಂತ್ಯದಲ್ಲಿ ಪೂರ್ಣಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿ ಕೊಂಡಿರುವುದಾಗಿ ತಿಳಿಸಿದರು. ಅದರಂತೆ ಮಾನ್ಯ ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ವಾರಕ್ಕೊಮ್ಮೆ ಪ್ರಗತಿಪರಶೀಲನೆ ಸಭೆ ಜರುಗಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.


ಈಗಾಗಲೇ ಚಾಲ್ತಿ ಯಲ್ಲಿರುವ ಹಳೆಯ ಸೇತುವೆ  ಕಾಮಗಾರಿಯ ಬಗ್ಗೆ ಮಾನ್ಯ ಸಂಸದರು ಪರಿಶೀಲಿಸಿದಾಗ ಸೇತುವೆಯ ಪೂರ್ಣ ಕ್ಯಾರೇಜ್ 5.5೦ ಮೀಟರ್ ಅಗಲಕ್ಕೆ ಹಾಗೂ ಪೂರ್ಣ ಉದ್ದಕ್ಕೆ ಮೇಂಟೆನೆನ್ಸ್ ಅಡಿ ಡಾಂಬರೀಕರಣ ಗೊಳಿಸಲು ಸೇತುವೆಯ ಎರಡು ಬದಿಯಲ್ಲಿ ವಾಹನ ಚಾಲನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿದ್ದು,  ಸದರಿ ವಿಷಯದ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋರಿ ಕೊಂಡಿರುವುದಾಗಿ ಹೆದ್ದಾರಿ ಇಲಾಖೆ  ಅಧಿಕಾರಿಗಳು ತಿಳಿಸಿದರು.


ಸದರಿ ಡಾಂಬರೀಕರಣದ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳವರ ಸಮನ್ವಯದೊಂದಿಗೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಮಾನ್ಯ ಸಂಸದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿವೀಕ್ಷಣೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖಂಡರು,ಅಧಿಕಾರಿಗಳು, ಶಕ್ತಿನಗರ ಗ್ರಾಮ ಪಂಚಾಯತ್ ಸದಸ್ಯರು, ಗುತ್ತಿಗೆದಾರರು ಉಪಸ್ಥಿತ ದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್