ಕಾಂಗ್ರೆಸ್ ಭಾರತ ಜೋಡೊ ಯಾತ್ರೆ ಸಾಗಿದ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಶುರು : ಟಿಕೆಟ್ ಪಡೆಯಲು ಬಣ ರಾಜಕೀಯ ಮುನ್ನೆಲೆಗೆ : ಹೈ ಕಮಾಂಡ್ ಚಿತ್ತ ಯಾರತ್ತ?

 


ಕಾಂಗ್ರೆಸ್ ಭಾರತ ಜೋಡೊ ಯಾತ್ರೆ ಸಾಗಿದ ನಗರ ಮತ್ತು  ಗ್ರಾಮೀಣ ಕ್ಷೇತ್ರದಲ್ಲಿ  ಟಿಕೆಟ್‌ಗಾಗಿ ಪೈಪೋಟಿ ಶುರು :

ಟಿಕೆಟ್ ಪಡೆಯಲು ಬಣ ರಾಜಕೀಯ ಮುನ್ನೆಲೆಗೆ : ಹೈ ಕಮಾಂಡ್ ಚಿತ್ತ ಯಾರತ್ತ?



-ಜಯಕುಮಾರ್ ದೇಸಾಯಿ ಕಾಡ್ಲೂರು.

ರಾಯಚೂರು,ಡಿ.೧೫-ಜಿಲ್ಲೆಯು ಏಳು ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ಜಿಲ್ಲೆಯಾಗಿದ್ದು ಕಲ್ಯಾಣ ಕರ್ನಾಟದ ಪ್ರಮುಖ ಜಿಲ್ಲೆಯಾಗಿರುವ ರಾಯಚೂರು ಜಿಲ್ಲೆಯ ರಾಜಕೀಯ ಇತಿಹಾಸ ಮೆಲಕು ಹಾಕಿದರೆ ಇಲ್ಲಿಯ ಮತದಾರ ಪ್ರಭುಗಳು ಪ್ರಬುದ್ಧರಾಗಿದ್ದು ಸುಲಭದಲ್ಲಿ ಯಾವುದೆ ಪಕ್ಷ ಜನರನ್ನು ಯಾಮಾರಿಸಲು  ಸಾಧ್ಯವಿಲ್ಲವೆಂಬದು ಈಗಾಗಲೆ ನಡೆದಿರುವ ಅನೇಕ ಚುನಾವಣೆಗಳಲ್ಲಿ ಸಾಬೀತಾಗಿದೆ.

 ಈ ಬಾರಿಯ ಚುನಾವಣೆ ಕಾವು ಬೇಸಿಗೆ ಮುನ್ನದ ಬಿಸಿಲು ಏರುವ ರೀತಿಯಲ್ಲಿ ಕೊಂಚ ಹೆಚ್ಚುತ್ತಿದ್ದು ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೆ ಟಿಕೆಟ್ ಗಾಗಿ ಅಕಾಂಕ್ಷಿಗಳು ಮುನ್ನೆಲೆಗೆ ಬರುತ್ತಿದ್ದು ಸದ್ಯ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಹವಣಿಕೆಯಲ್ಲಿದ್ದು ಜಿಲ್ಲೆಯ ಮಟ್ಟಿಗೆ ಅದರಲ್ಲೂ ನಗರ ಮತ್ತು ಗ್ರಾಮೀಣ ಕ್ಷೇತ್ರದ ಮಟ್ಟಿಗೆ ನೋಡುವುದಾದರೆ ನಗರ ಕ್ಷೇತ್ರಕ್ಕೆ ಅನೇಕರು ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಿಸಿ ಅರ್ಜಿ ಹಾಕಿದ್ದು ತಮ್ಮ ಗಾಡ್ ಫಾದರ ಮೂಲಕ ಹೈ ಕಮಾಂಡ ಮಟ್ಟದಲ್ಲಿ ಟಿಕೆಟ್ ಪಡೆಯುವ ಕಸರತ್ತು ಪ್ರಾರಂಭಿಸಿದ್ದು ಒಂದಡೆಯಾದರೆ ಇನ್ನೊಂದೆಡೆ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕರ ಸ್ಪರ್ದೆಗೆ ಅದೆ ಪಕ್ಷದ ಕೆಲ ಮುಖಂಡರು ಅಪಸ್ವರ ಎತ್ತುತ್ತಿದ್ದು ಹಾಲಿ ಶಾಸಕರ ಪಕ್ಷ ನಿಷ್ಟೆ ಬಗ್ಗೆ ಧ್ವನಿ ಎತ್ತಿದ್ದು ಅಲ್ಲದೆ ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿಲ್ಲವೆಂದು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲಿ ಎಂಬ ಆಗ್ರಹ, ಸವಾಲುಗಳು ಕೇಳಿಬರುತ್ತಿವೆ.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ ಗಾಂಧಿ  ಮೂರು ದಿನಗಳ ಕಾಲ ಭಾರತ ಜೋಡೊ ಯಾತ್ರೆ ಮೂಲಕ ಸಾಗಿದ್ದು ಅಂದು ಕಾರ್ಯಕರ್ತರು ಒಗ್ಗೂಡಿ ನಗರದಲ್ಲಿ ಸಮಾವೇಶ ನಡೆಸಿದ್ದು ವಾಲ್ಕಟ್ ಮೈದಾನದಲ್ಲಿ ಕಿಕ್ಕಿರದ ಸಮಾವೇಶದಲ್ಲಿ ಎಲ್ಲರೂ ಒಗ್ಗಟ್ಟಿನ ಮಂತ್ರಿ ಜಪಿಸಿದ್ದು ನಂತರ ಆ ಒಗ್ಗಟ್ಟು ಟಿಕೆಟ್ ಪಡೆಯುವ ವಿಷಯದಲ್ಲಿ  ಹಿನ್ನಲೆಗೆ ಸರಿದಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಈಗಾಗಲೆ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಿಸಿ ನಗರ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಸುಮಾರು ೧೫ ಜನರು ಅರ್ಜಿ ಸಲ್ಲಿಸಿದ್ದು ಅವರೆಲ್ಲರೂ ತಮ್ಮ ನಾಯಕರ ಮೂಲಕ ಟಿಕೆಟ್‌ಗಾಗಿ ಪ್ರಯತ್ನ ಪಡುವವರಾಗಿದ್ದು ಕೆಲವರು ತಮ್ಮ ನಾಯಕರ ಅಣಿತಿ ಮೇರೆಗೆ ಅರ್ಜಿ ಹಾಕಿರಬಹುದೆಂಬ ಮಾತುಗಳು ಕೇಳಿಬಂದಿವೆ.


ಗ್ರಾಮೀಣ ಕ್ಷೇತ್ರದಲ್ಲಿಯೂ ಟಿಕೆಟ್ ಪೈಪೋಟಿ ಶುರುವಾಗಿದ್ದು ಹಾಲಿ ಶಾಸಕ ಬಸನಗೌಡ ದದ್ದಲ್ ಸ್ಥಳೀಯರಲ್ಲ ಅವರಿಗೆ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ನೀಡದಂತೆ ಕೆಲ ಕಾಂಗ್ರೆಸ್ ಪಕ್ಷದ ಮುಖಂಡರು  ಪತ್ರಿಕಾ ಗೋಷ್ಟಿ ಮತ್ತು ಬಹಿರಂಗವಾಗಿ ಹೇಳಿಕೆ ನೀಡುವುದರ ಮೂಲಕ ಹೈ ಕಮಾಂಡಗೆ  ಒತ್ತಾಯ ಮಾಡುತ್ತಿದ್ದಾರೆ ಬಹಿರಂಗ ಸಭೆ ನಡೆಸಿ ಹಾಲಿ ಶಾಸಕರು ಬಿಜೆಪಿ ಪಕ್ಷದ ಆಮೀಷಕ್ಕೊಳಗಾಗಿದ್ದರು ಅವರಿಗೆ ಟಿಕೆಟ್ ನೀಡಿದರೆ ಸೋಲು ನಿಶ್ಚಿತವೆಂಬ ಮಾತುಗಳನ್ನಾಡುತ್ತಿದ್ದು ಇದಕ್ಕೆ ಪ್ರತಿಯಾಗಿ ಹಾಲಿ ಶಾಸಕರ ಅಭಿಮಾನಿಗಳು, ಕಾರ್ಯಕರ್ತರು ಶಾಸಕರ ಪಕ್ಷ ನಿಷ್ಟೆ ಪ್ರಶ್ನಿಸುವವರು ತಮ್ಮ ಪಕ್ಷ ನಿಷ್ಟೆ ಬಗ್ಗೆ ಮೊದಲು ಜನರಿಗೆ ತಿಳಿಸಲಿ ಎಂದು ಪ್ರತಿ ಸವಾಲು ಹಾಕುತ್ತಿದ್ದು ಅತ್ತ ಹಾಲಿ ಶಾಸಕ ಬಸನಗೌಡ ದದ್ದಲ ಕಾಲಿಗೆ ಚಕ್ರ ಕಟ್ಟಿಕೊಂಡವರ0ತೆ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರು, ಶಾಲಾ ಕೊಠಡಿಗಳ ನಿರ್ಮಾಣ ಅಡಿಗಲ್ಲು, ನೀರಿನ ಪೈಪ್ ಲೈನ್ ಭೂಮಿ ಪೂಜೆ ಹಾಗೂ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಪುತ್ಥಳಿ ಸ್ಥಾಪನೆಯಲ್ಲಿ ಭಾಗಿಯಾಗುವ ಮೂಲಕ ಸದಾ ಕ್ಷೇತ್ರದ ಜನರ ಸಂಪರ್ಕದಲ್ಲಿರುವ ಪ್ರಯತ್ನದಲ್ಲಿದ್ದು ಮತ್ತೊಮ್ಮೆ ಟಿಕೆಟ್ ತಮಗೆ ಲಭಿಸಲಿದ್ದು ಗ್ರಾಮೀಣ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಮಾಡಲು ತಮಗೆ ಅಶೀರ್ವದಿಸಬೇಕೆಂಬ ಕೋರಿಕೆ ಮಾಡುತ್ತಿದ್ದಾರೆ .

ಇತ್ತ ಬಿಜೆಪಿ ಪಕ್ಷವು ಈಗಾಗಲೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್‌ರವರ ನೇತೃತ್ವದಲ್ಲಿ ರಾಯರು ಧ್ಯಾನಿಸಿದ ಪುಣ್ಯ ಕ್ಷೇತ್ರವಾದ ಗಾಣಧಾಳ ಸಮೀಪದ  ಗಿಲ್ಲೆಸುಗೂರಿನಲ್ಲಿ ಜನ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ಆಯೋಜಿಸಿದ್ದು ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೆöÊ ಆದಿಯಾಗಿ ಘಟಾನುಘಟಿಗಳು ಸಮಾವೇಶದಲ್ಲಿ ಭಾಗಿಯಾಗಿ ತಿಪ್ಪರಾಜುರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದ್ದಾರೆ ಅಲ್ಲದೆ ಗ್ರಾಮೀಣ ಕ್ಷೇತ್ರದಲ್ಲಿ  ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಮತ್ತು ಕ್ಷೇತ್ರದಲ್ಲಿ ತಾವು ಈ ಹಿಂದೆ ಮಾಡಿರುವ ಅಭಿವೃದ್ದಿ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಬಿಜೆಪಿಗೆ ಗ್ರಾಮೀಣದ ಜನರು ಮನ್ನಣೆ ನೀಡಬೇಕೆಂಬ ಮನವಿ ಮಾಡುತ್ತಿದ್ದು ನಗರದಲ್ಲಿ ಭವ್ಯವಾದ ಜಿಲ್ಲಾ ಬಿಜೆಪಿ ಕಾರ್ಯಲಯ ಉದ್ಘಾಟನೆ ನೆರವೇರಿಸುವ ಮೂಲಕ ಚುನಾವಣೆಗೆ ಸಕಲ ರೀತಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದು ಕಾರ್ಯಕರ್ತರ ಪಡೆಯೆ ಸೋಲು ಗೆಲವಿನ ಜೀವಾಳ ಅದಕ್ಕೆ ಮತದಾರರು ಸಹ ಸಹಮತ ವ್ಯಕ್ತಪಡಿಸುತ್ತಾರೆಂಬ ಆಶಾಭಾವನೆಯಲ್ಲಿದ್ದಾರೆ.

ನಗರ ಕ್ಷೇತ್ರದಲ್ಲಿ ಹಾಲಿ ಶಾಸಕರಾದ ಡಾ.ಶಿವರಾಜ ಪಾಟೀಲರಿಗೆ ಪರ್ಯಾಯವಾಗಿ ಇದುವರಗೂ ಅಕಾಂಕ್ಷಿಗಳು ಹೆಸರು ಮುನ್ನಲೆಗೆ ಬಂದಿಲ್ಲ ಚುನಾವಣೆ ಸಮೀಸುತ್ತಿದ್ದಂತೆ ರಾಜಕೀಯ ಚಿತ್ರಣ ಹೀಗೆ ಇರುತ್ತದೆ ಎಂಬುದನ್ನು ಹೇಳಲು ಬರುವುದಿಲ್ಲ ಆದರೆ ಜಿಲ್ಲೆಯ ಇನ್ನಿತರ ಕ್ಷೇತ್ರಗಳಗೆ ಹೋಲಿಸಿದರೆ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕರೆ ಏಕೈಕ ಸ್ಪರ್ದಾಳುವಾಗಿದ್ದು ಬಿಜೆಪಿ ಹೈಕಮಾಂಡ್ ಸಹ ಅದಕ್ಕೆ ಪುರಸ್ಕರಿಸಬಹುದಾದ ವಾತಾವರಣ ಈವರಗೂ ಇದ್ದು ರಾಜಕೀಯದಲ್ಲಿ ಚುನಾವಣೆ ಹೊಸ್ತಿಲಲ್ಲಿ ನಿರೀಕ್ಷೆ ಮೀರಿ ರಾಜಕೀಯ ಸನ್ನಿವೇಶಗಳು ಎದುರಾಗಿದ್ದಕ್ಕೆ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ.


ಜೆಡಿಎಸ್ ಪಕ್ಷವು ಸಹ ಈ ಬಾರಿ ಪ್ರಭಲ ಸ್ಪರ್ದೆಯೊಡ್ಡುವ ಮುನ್ಸೂಚನೆ ನೀಡಿದ್ದು ಅಲ್ಲಿಯೂ ಸಹ ಗ್ರಾಮೀಣ ಕ್ಷೇತ್ರದಲ್ಲಿ ಸಣ್ಣ ನರಸಿಂಹ ನಾಯಕ ಪ್ರಮುಖ ಆಕಾಂಕ್ಷಿಯಾಗಿದ್ದು ಈಗಾಗಲೆ ಅವರ ನೇತೃತ್ವದಲ್ಲಿ ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂರನ್ನು ಕರೆಯಿಸಿ ಸಮಾವೇಶ ಮಾಡಿದ್ದು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ನಗರ ಕ್ಷೇತ್ರದಲ್ಲಿಯೂ ಜೆಡಿಎಸ್ ಟಿಕೆಟ್ ಯಾರಿಗೆ ಎಂಬುದು ಇನ್ನು ತಿಳಿದಿಲ್ಲ ಅಲ್ಲಿಯೂ ಅನೇಕರು ಸೇವಾಕಾಂಕ್ಷಿಗಳಿದ್ದು ಇನ್ನು ಸ್ವಲ್ಪ ದಿನದಲ್ಲೆ ಜೆಡಿಎಸ್ ಪಂಚರತ್ನ ಯಾತ್ರೆ ಜಿಲ್ಲೆಗೆ ಆಗಮಿಸಲಿದ್ದು ಆ ವೇಳೆಗೆ ಜೆಡಿಎಸ್ ಟಿಕೆಟ್ ಯಾರಿಗೆ ಸಿಗಬಹುದೆಂಬ ಸೂಚನೆ ಸಿಗುವ ನೀರಿಕ್ಷೆ ಆ ಪಕ್ಷದ ಕಾರ್ಯಕರ್ತರಲ್ಲಿದೆ.

 ರಾಜಕೀಯ ವಿಶ್ಷೇಷಕರು ಹೇಳುವಂತೆ ರಾಜಕೀಯದಲ್ಲಿ ನಿಖರವಾಗಿ ಹೀಗೆ ನಡೆಯುತ್ತದೆ ಎಂಬುದು ಹೇಳುವುದು ಅಸಾಧ್ಯ...ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ತೀರ್ವ ಹಣಾಹಣೆಯಿಂದ ನಡೆಯುವುದಂತು ನಿಶ್ಚಿತವಾಗಿದೆ.


" ಮುಖಂಡರಲ್ಲಿ ಬಿನ್ನಾಭಿಪ್ರಾಯವಿರಬಹುದು ಆದರೆ ಕಾರ್ಯಕರ್ತರು ಒಗ್ಗಟ್ಟಿನಿಂದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳು ಸಮಾನ್ಯವಾಗಿ ಇರುತ್ತಾರೆ ಅದನ್ನು ಅಲ್ಲಗಳೆಯಲು ಆಗುವುದಿಲ್ಲ ಅಂತಿಮವಾಗಿ ಹೈ ಕಮಾಂಡ್ ಟಿಕೆಟ್ ನೀಡುತ್ತದೆ ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಟರು ಸಮರ್ಥರಿದ್ದಾರೆ".

-ಸುಧೀಂದ್ರ ಜಾಗೀರದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಯಚೂರು ಗ್ರಾಮೀಣ ಕ್ಷೇತ್ರ.


"ನಾನು ಸಹ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೆ ಅರ್ಜಿಯನ್ನು ಕೆಪಿಸಿಸಿಗೆ ಸಲ್ಲಿಸಿದ್ದು ಹೈ ಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತೇವೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ"

- ರಜಾಕ್ ಉಸ್ತಾದ್ , ಕಾಂಗ್ರೆಸ್ ಮುಖಂಡರು ಹಾಗೂ ಟಿಕೆಟ್ ಬಯಿಸಿ ಅರ್ಜಿ ಹಾಕಿದವರು.



 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ