ಮುಂದಿನ ಬಾರಿಯೂ ನಮ್ಮದೆ ಸರ್ಕಾರ... ನಾನೇ ಎಂಎಲ್‌ಎ- ಡಾ.ಶಿವರಾಜ ಪಾಟೀಲ.

 


ನಗರದಲ್ಲಿ ಡಿ.೨೫ ರಂದು ಮೆಣಸಿನಕಾಯಿ ಮಾರಕಟ್ಟೆ ಸ್ಥಾಪನೆ, ಶೀಘ್ರದಲ್ಲೆ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ:

ಮುಂದಿನ ಬಾರಿಯೂ ನಮ್ಮದೆ ಸರ್ಕಾರ... ನಾನೇ ಎಂಎಲ್‌ಎ-ಡಾ.ಶಿವರಾಜ ಪಾಟೀಲ.

ರಾಯಚೂರು,ಡಿ.೧೮-ಮುಂದಿನ ಬಾರಿಯೂ ನಮ್ಮದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರಲಿದ್ದು ನಾನೇ ಮತ್ತೊಮ್ಮೆ ಎಂಎಲ್‌ಎ ಆಗಿರುತ್ತೇನೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು. 

ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ದಲ್ಲಿ ಮೋದಿರವರ ಆಡಳಿತ ಮತ್ತು ರಾಜ್ಯದಲ್ಲಿ ಬೊಮ್ಮಾಯಿಯವರ ಕೊಡುಗೆಯಿಂದ ರಾಜ್ಯದಲ್ಲಿ ಮತ್ತೊಮೆ ಬಿಜೆಪಿ ಪಕ್ಷವೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದ ಅವರು ನಾನೆ ಶಾಸಕನಾಗಿರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊಸ ಹತ್ತಿ ಮಾರುಕಟ್ಟೆಯಲ್ಲಿ ಡಿ.೨೫ ರಿಂದ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಯಾಗಲಿದ್ದು ಮೆಣಸಿನಕಾಯಿ ಆವಕ ನೋಡಿಕೊಂಡು ಮಾರುಕಟ್ಟೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದ ಅವರು ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಭಾಗದಲ್ಲಿ ಮೆಣಸಿನಕಾಯಿ ಹೆಚ್ಚು ಬೆಳೆಯಲಾಗುತ್ತದೆ ಅದರೆ ನಮ್ಮ ಜಿಲ್ಲೆಯ ರಾಯಚೂರು, ದೇವದುರ್ಗ,  ಮಾನ್ವಿ ಸುತ್ತಮುತ್ತಲಿನ ನೀರಾವರಿ ಪ್ರದೇಶದಲ್ಲಿಯೂ ಸುಮಾರು ೪೦೦ ಹೆಕ್ಟೇರ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೆಣಸಿಕಾಯಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದ್ದು ಈಗಾಗಲೆ ಮಾರುಕಟ್ಟೆಗೆ ೩೩ ಕೋಟಿ ರೂಪಾಯಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅದು ಮಂಜೂರು ಆಗುವ ಹಂತದಲ್ಲಿದೆ ಎಂದರು.

ಮೆಣಸಿನಕಾಯಿ ಕೇವಲ ಖಾರದ ಪುಡಿಗಾಗಿ ಬಳಕೆ ಮಾಡುವುದಲ್ಲದೆ ಅದನ್ನು ಔಷಧೀಯ ಮತ್ತು ಆಲಂಕಾರಿಕ ತೈಲದಲ್ಲಿಯೂ ಬಳಸಲಾಗುತ್ತದೆ ಮೆಣಸಿನಕಾಯಿ ಕೆಡದಂತೆ ಶೀಥಲೀಕರಣ ಘಟಕಸಹ ಸ್ಥಾಪಿಸಲಾಗುತ್ತದೆ ರೈತರ ಬೆಳೆಯುವ ಮೆಣಸಿನಕಾಯಿಗೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆಯಾದರೆ ಅವರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದ ಅವರು ರೈತರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.


ರಾಯಚೂರಲ್ಲಿ ಮೆಗೆ ಟೆಕ್ಸಟೈಲ್ ಪಾರ್ಕ ಸ್ಥಾಪನೆಗೆ ಜಮೀನ ಕೊರತೆಯಿಲ್ಲ ಜಿಲ್ಲೆಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ ಸ್ಥಾಪನೆ ನಮ್ಮ ಗುರಿಯಾಗಿದೆ ಎಂದ ಅವರು ಜಿಲ್ಲೆಯಲ್ಲಿ ನನ್ನ ಅಧಿಕಾರವಧಿಯಲ್ಲಿ ಅನೇಕ ಅಭೀವೃದ್ದಿ ಕಾರ್ಯ ಮಾಡಿದ್ದೇನೆ ಕೇಂದ್ರ ಸರ್ಕಾರದಿಂದ ಭಾರತ ಮಾಲಾ, ಚತುಷ್ಪಥ ರಸ್ತೆ, ಸೇತುವೆ ಮುಂತಾದವುಗಳಿಗಾಗಿ ಸುಮಾರು ೬ ಸಾವಿರ ಕೋಟಿ ರೂ ಅನುದಾನ ದೊರೆತಿದೆ ಎಂದ ಅವರು ನಗರೋತ್ಥಾನ ಸೇರಿದಂತೆ ವಿವಿಧ ಯೋಜೆನೆಯಡಿ ನಗರದ ಒಳ ರಸ್ತೆಗಳ ಅಭಿವೃದ್ದಿ ಮಾಡಲಾಗಿದೆ ಎಂದರು.

ಯರಮರಸ್ ಬಳಿ ವಿಮಾನ ನಿಲ್ದಾಣಕ್ಕೆ ಜ.೨೬ಕ್ಕೆ ಭೂಮಿಪೂಜೆ ನೆರವೇರಿಸುವ ಉದ್ದೇಶ ಹೊಂದಿದ್ದು ಮಾಲಿನ್ಯ ನಿಯಂಥ್ರಣ ಮಂಡಳಿ ಮತ್ತು ಏರ್‌ಪರ‍್ಟ್ ಅಥಾರಿಟಿ ಕ್ಲಿಯರೆನ್ಸ್ ಸಹ ದೊರಕಲಿದ್ದು ಸಿಎಂ ಆಗಮಿಸಿ ವಿಮಾನ ನಿಲ್ದಾಣ ಭೂಮಿ ಪೂಜೆ ಮತ್ತು ಜಿಲ್ಲಾಡಳಿತ ಭವನ ಉದ್ಘಾಟನೆ ನೆರವೇರಿಸುವ ಬಗ್ಗೆ ಆಲೋಚನೆಯಿದೆ ಎಂದರು.

ನಗರಸಭೆ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಜನ ಸಂಖ್ಯೆಗನುಗುಣವಾಗಿ ಮಹಾನಗರ ಪಾಲಿಕೆಯಾಗುವ ಎಲ್ಲ ಅರ್ಹತೆ ನಗರ ಪಡೆದಿದೆ ಎಂದ ಅವರು ನಗರದ ರಸ್ತೆಗಳಲ್ಲಿ ಬೀದಿ ದೀಪ ಅಳವಡಿಕೆಗಾಗಿ ಎಲ್‌ಇಡಿ ವಿದ್ಯತ್ ದೀಪ ಅಳವಡಿಕೆ ನಡೆಯಲಿದ್ದು ವೈಜ್ಞಾನಿಕ ರೀತಿಯಲ್ಲಿ ಅವುಗಳ ಅಳವಡಿಕೆ ಮಾಡಲಾಗುತ್ತಿದ್ದು ಹೆಚ್ಚು ಬೆಳಕು ನೀಡುವ ದೀಪ ಅವುಗಳಾಗಿದ್ದು ಕಡಿಮೆ ವಿದ್ಯುತ್ ಬಳಸಿ ಪ್ರಖರ ಬೆಳಕು ನೀಡುತ್ತವೆ ಇದರಿಂದ ನಗರದಲ್ಲಿ ಕತ್ತಲೆ ಕವಿದ ರಸ್ತೆಗಳಿಗೆ ಮುಕ್ತಿ ಸಿಗಲಿದೆ ಎಂದರು.

ನಾನು ಬಿಜೆಪಿ ಪಕ್ವನ್ನು ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ ಅನೇಕ ಅಭಿವೃದ್ದಿ ಕೆಲಸ ಮಾಡಿರುವ ನನಗೆ ಜನರು ಮತ್ತೊಮೆ ವಿಧಾನಸಭೆಗೆ ಆರಿಸಿ ಕಳಿಸುತ್ತಾರೆ ಎಂಬ ವಿಶ್ವಾಸವಿದ್ದು ವಿರೋಧ ಪಕ್ಷಗಳ ಯಾವುದೆ ಅರೋಪಗಳಲ್ಲಿ ಎಳ್ಳಷ್ಟು ಹುರುಳಿಲ್ಲವೆಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್, ಎಪಿಎಂಸಿ ಅಧ್ಯಕ್ಷ ಅಚ್ಯುತ್ ರೆಡ್ಡಿ, ಮುಖಂಡರಾದ ಕಡಗೋಲ ಆಂಜಿನೇಯ, ಬಂಗಿ ನರಸರೆಡ್ಡಿ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ