ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಸಾನಿಧ್ಯ , ವಿವಿಧ ಸಾಧಕರಿಗೆ ಸನ್ಮಾನ: ಡಿ.೨೧ ರಂದು ಎಕೆಬಿಎಂಎಸ್ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
ಡಿ.21 ರಂದು ಎಕೆಬಿಎಂಎಸ್ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
ರಾಯಚೂರು,ಡಿ.20-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಡಿ.೨೧ ರಂದು ೨೦೨೩ರ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ ೫.೩೦ಕ್ಕೆ ನಗರದ ಬೋಳಮಾನದೊಡ್ಡಿ ರಸ್ತೆಯ ಶಾರಧಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯ ವಹಿಸುವ ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ.ರವಿರಾಜನ್, ಡಾ.ಸಿ.ಎನ್.ಕುಲಕರ್ಣಿ, ವರದರಾಜ ಕುಲಕರ್ಣಿ ವಂದಲಿ, ಶೋಭಾ ಪ್ರಮೋದ ಕಟ್ಟಿ,ಕೆ.ಪಿ.ವಾಸುದೇವ ರವರನ್ನು ಸನ್ಮಾನಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಸೇತುಮಾಧವ ಕೇರೂರು ಮತ್ತು ಸಂಗಡಿಗರಿAದ ದಾಸವಾಣಿ ನಡೆಯಲಿದ್ದು ವಿಪ್ರ ಬಾಂಧವರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಡಿ.ಕೆ.ಮುರಳಿಧರ್ ವಿನಂತಿಸಿಕೊಳ್ಳುತ್ತಾರೆ.
Comments
Post a Comment