ಎಕೆಬಿಎಂಎಸ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ: ಬ್ರಾಹ್ಮಣರು ಸತ್ಯಮೇವ ಜಯತೆ ವಾಕ್ಯದಡಿ ನಂಬಿಕೆಯುಳ್ಳವರು-ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು
ಎಕೆಬಿಎಂಎಸ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ:
ಬ್ರಾಹ್ಮಣರು ಸತ್ಯಮೇವ ಜಯತೆ ವಾಕ್ಯದಡಿ ನಂಬಿಕೆಯುಳ್ಳವರು- ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು
ರಾಯಚೂರು,ಡಿ.22-ಬ್ರಾಹ್ಮಣರು ಸತ್ಯಮೇವ ಜಯತೆ ಎಂಬ ವಾಕ್ಯದಡಿ ನಂಬಿಕೆಯುಳ್ಳವರಾಗಿದ್ದು ಸತ್ಯವಾದದನ್ನೆ ನುಡಿಯುವದರಿಂದ ನಮ್ಮ ಶ್ರೇಯಸು ಎಂದು ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು ನುಡಿದರು.
ಅವರಿಂದು ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಹೊರತರಲಾದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಬ್ರಾಹ್ಮಣರು ಎಲ್ಲ ರಂಗದಲ್ಲಿ ಮುಂದಿದ್ದಾರೆ ಬ್ರಾಹ್ಮಣರಿಗೆ ವಿದ್ಯೇಯೇ ಭೂಷಣ ಬ್ರಾಹ್ಮಣರು ನಮ್ಮ ಆಚಾರ ವಿಚಾರ ಬಿಡದಂತೆ ಸಮಾಜಕ್ಕೆ ಪರೋಪಕಾರ ಮಾಡುತ್ತ ಸಾಗಬೇಕೆಂದ ಅವರು ಸತ್ಯವೆ ನುಡಿಯಬೇಕು ಸತ್ಯಮೇವ ಜಯತೆ ಎಂಬ ವಾಕ್ಯದಂತೆ ನಾವೆಲ್ಲರು ನಮ್ ನಡೆ ನುಡಿ ಸತ್ಯದಿಂದ ಕೂಡಿರಬೇಕೆಂದರು.
ವಿವಿಧ ರಂಗದಲ್ಲಿ ಅನೇಕ ಬ್ರಾಹ್ಮಣರು ಸಾಧನೆಗೈದಿದ್ದಾರೆ ವಿದ್ಯಾ ದದಾತಿ ವಿನಯಂ ಎಂಬ0ತೆ ನಾವು ಸದಾ ವಿನಯ ಶೀಲರಾಗಿರಬೇಕು ಅನ್ಯ ಸಮಾಜಗಳಿಗೆ ಮಾದರಿಯಾಗಿರಬೇಕು ನಮ್ಮ ತಂದೆ ತಾಯಿಯನ್ನು ವೃದ್ಯಾಪ್ಯದಲ್ಲಿ ವುದ್ಧಾಶ್ರಮಕ್ಕೆ ಸೇರಿಸದೆ ಅವರ ಪಾಲನೆ ಪೋಷಣೆ ಹೊಣೆ ಹೊತ್ತುಕೊಂಡು ವೃದ್ದ್ ತಂದೆ ತಾಯಿ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು ಎಂದ ಅವರು ವಿಶಿಷ್ಟ ಸಾಧನೆಗೈದ ಬ್ರಾಹ್ಮಣ ಸಮಾಜದ ಸಾಧಕರಿಗೆ ಸನ್ಮಾನಿಸಿ ಆಶೀರ್ವದಿಸಿದರು.
ಪ್ರಸ್ತಾವಿಕವಾಗಿ ಎಕೆಬಿಎಂಎಸ್ ಜಿಲ್ಲಾ ಪ್ರಧಾನ ಸಂಚಾಲಕ ಡಿ.ಕೆ.ಮುರಳೀಧರ್ ಮಾತನಾಡಿ ಕಳೆದ ಮೂರು ವರ್ಷದಿಂದ ಬ್ರಾಹ್ಮಣ ಸಮಾಜದ ಕ್ಯಾಲೆಂಡರ್ ಸ್ಥಗಿತಗೊಂಡಿತ್ತು ಅದನ್ನು ಪುನರ್ ಪ್ರಾರಂಬಿಸಿದ್ದು ಕ್ಯಾಲೆಂಡರ್ ಬಿಡುಗಡೆ ಉದ್ದೇಶ ಸಮಾಜದಲ್ಲಿ ಒಗ್ಗಟ್ಟು ಮೂಡಿಸಬೇಕು ಮತ್ತು ನಮ್ಮ ಆಚಾರ ವಿಚಾರ ಪದ್ದತಿಗಳ ಪಾಲನೆ ಗುರಿಯಾಗಿದೆ ಎಂದರು.
ಬ್ರಾಹ್ಮಣ ಸಮಾಜದ ಶಕ್ತಿ ಬಗ್ಗೆ ಇತರರಿಗೆ ತೋರಿಸಬೇಕೆಂದರು ನಾವು ನಮ್ಮ ಆಚಾರ ವಿಚಾರ ನಡೆ ನುಡಿ ಶುದ್ದವಾಗಿರಬೇಕು ಮತ್ತು ರಾಜಕೀಯವಾಗಿ ನಮ್ಮನ್ನು ಎಲ್ಲರು ಪರಿಗಣಿಸಬೇಕೆಂದರೆ ನಮ್ಮ ಶಕ್ತಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ವ್ಯಾಕದಡಿ ಕಾರ್ಯನಿರ್ವಹಿಸಬೇಕೆಂದ ಅವರು ಬ್ರಾಹ್ಮಣ ಸಮಾಜ ಅನಾಥ ವೃದ್ದರಿಗೆ ವೃದ್ದಾಶ್ರಮ ತೆರೆಯುವ ಗುರಿ ಹೊಂದಿದ್ದೇವೆ0ದರು.
ಅಖಿಲ ಭಾರತ ಕಣ್ವ ಪರಿಷತ್ ದಕ್ಷಿಣ ಕೇಂದ್ರ ವಲಯ ಉಪಾಧ್ಯಕ್ಷ ಆರ್.ಲಕ್ಷಿö್ಮÃಕಾಂತ ಮಾತನಾಡಿ ವಿಪ್ರರೆಲ್ಲರೂ ಒಗ್ಗೂಡಬೇಕು ನಮ್ಮಲ್ಲಿರುವ ಭಿನ್ನಭಿಪ್ರಾಯ ಬದಿಗೊತ್ತಿ ಸಮಾಜದ ಒಳತಿಗೆ ಶ್ರಮಿಸಬೇಕೆಂದ ಅವರು ಸಮಾಜದ ಶ್ರೇಯಸ್ಸು ನಮ್ಮ ಗುರಿಯಾಗಿರಬೇಕೆಂದ ಅವರು ಈ ನಿಟ್ಟಿನಲ್ಲಿ ಎಕೆಬಿಎಂಸ್ ಜಿಲ್ಲಾ ಘಟಕ ಕ್ಯಾಲೆಂಡರ್ ಬಿಡುಗಡೆಗೊಳಿಸುವ ಮೂಲಕ ಸಮಾಜವನ್ನು ಸಂಘಟಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಕಾರ್ಯವೆಂದರು.
ಶ್ರೀಗಳಿ0ದ ಸನ್ಮಾನಿತರಾಗಿ ಮಾತನಾಡಿದ ಡಾ.ಕೆ.ಎಸ್.ರವಿರಾಜನ್ ಬ್ರಹ್ಮಣ ರು ಸ್ವಾವಲಂಬಿಗಳು ಇತರರ ಬಳಿ ಕೈವಡ್ಡುವುದಿಲ್ಲ ಆದರೆ ನಮ್ಮಲ್ಲಿರುವ ಬಡವರ ಬಗ್ಗೆ ನಮಗೆ ಕಾಳಜಿಯಿರಬೇಕೆಂದ ಅವರು ಬಡ ಬ್ರಾಹ್ಮಣರ ವೈದ್ಯಕೀಯ ವೆಚ್ಚದಲ್ಲಿ ರಿಯಾಯಿತಿ ನೀಡಲು ನಾನು ಸಿದ್ಧನಿದ್ದೇನೆಂದರು.ಬ್ರಾಹ್ಮಣ ಸಮಾಜದಿಂದ ವೃದ್ದಾಶ್ರಮ ತೆರೆಯಬೇಕೆಂದು ಕೋರಿದ ಅವರು ಅದಕ್ಕೆ ಸಹಾಯ ಸಹಕಾರ ನೀಡುತ್ತೇನೆಂದರು.
ವೇದಿಕೆ ಮೇಲೆ ರಾಜ್ಯ ಹಿರಿಯ ಪರಿಷತ್ ಸದಸ್ಯರಾದ ನರಸಿಂಗರಾವ ದೇಶಪಾಂಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಪ್ರಾಣೇಶ ಮುತಾಲಿಕ, ರಾಘವೇಂದ್ರ ಚೂಡಾಮಣಿ, ವೇಣುಗೋಪಾಲ ಇನಾಂದಾರ್, ಜಿ.ಶಾಮಾಚಾರ್,ಹನುಮೇಶ ಸರಾಫ್, ಡಿ.ಕೆ.ರೇಖಾ, ಪ್ರಹಲಾದ ಕುಲಕರ್ಣಿ, ಪ್ರಾಣೇಶ ಜೋಷಿ, ಮುದ್ದುರಂಗರಾವ್ ಮುತಾಲಿಕ್ ಇನ್ನಿತರರು ಇದ್ದರು. ಡಾ.ಕೆ.ಎಸ್.ರವಿರಾಜನ್, ಅನಿರುದ್ಧ ಕುಲಕಣಿ ,ಶೋಭಾ ಪ್ರಮೋದ ಕಟ್ಟಿ, ವರದರಾಜ ಕುಲಕರ್ಣಿ,ಕೆ.ಪಿ.ವಾಸುದೇವರಾವ್ ರನ್ನು ಸನ್ಮಾನಿಸಲಾಯಿತು.
ಎಕೆಬಿಎಂಎಸ್.ರಾಜ್ಯ ಉಪಾಧ್ಯಕ್ಷ ಡಾ.ಆನಂದ ತೀರ್ಥ ಫಡ್ನೀಸ್ ಸ್ವಾಗತಿಸಿದರು. ವೆಂಕಟೇಶ ನವಲಿ ಮತ್ತು ಪಾಂಡುರ0ಗ ಕುರ್ಡಿಕರ್ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿಸಿದ್ದರು.
Comments
Post a Comment