ವಿಶ್ವ ಗುರು ಪೇಜಾವರ ಶ್ರೀ ವಿಶ್ವೇಶ ತೀರ್ಥರ ಆರಾಧನೆ


ನಗರದಲ್ಲಿ ವಿಶ್ವ ಗುರು ಪೇಜಾವರ ಶ್ರೀ ವಿಶ್ವೇಶತೀರ್ಥರ  ಆರಾಧನೆ
.            ರಾಯಚೂರು,ಡಿ.24- ನಗರದಲ್ಲಿ ಪೇಜಾವರ ಮಠ ದಿಂದ ನಡೆಸಲ್ಪಡುವ ಮದ್ವ ಮಂಡಲ ಹಾಸ್ಟೆಲ್ ನಲ್ಲಿ ವಿಶ್ವ ಮದ್ವ ಮಹಾ ಮಂಡಲ ಪದಾಧಿಕಾರಿಗಳು, ಸದಸ್ಯರು ಮತ್ತು ಶ್ರೀ ಗಳ ಭಕ್ತರು ಸೇರಿ ಶ್ರೀ ವಿಶ್ವೇಶ ತೀರ್ಥರ ಆರಾಧನೆ ಯನ್ನು ಭಕ್ತಿಯಿಂದ ಆಚರಿಸಲಾಯಿತು.                ಶ್ರೀ ಗುರು ಸರ್ವ ಭೌಮ ಸಂಸ್ಕೃತ ವಿದ್ಯಾ ಪೀಠ ದ ಪ್ರಧ್ಯಪಕರು ಮತ್ತು ಶ್ರೀ ಗಳ ಆಪ್ತ ಶಿಷ್ಯ ರಾದ ಪಂಡಿತ್ ಶ್ರೀ ಪವಮಾನ ಆಚಾರ್ಯ ಕುರ್ಡಿ ಶ್ರೀ ಗಳ ನಡೆದು ಬಂದ ದಾರಿ ಭಕ್ತ ರ ಶಿಷ್ಯರ ಪಾಠ ಶಾಲೆ ವಿದ್ಯಾರ್ಥಿ ಗಳ ಮೇಲೆ ಅವರ ಕಾರುಣ್ಯ ದ ಭಗ್ಗೆ ವಿವರ ವಾಗಿ ಪ್ರವಚನ ಮೂಲಕ ತಿಳಿಸಿ ಕೊಟ್ಟರು.   

                                      ಹಿರಿಯರು, ಶ್ರೀ ಗಳ ಸಂಪೂರ್ಣ ಕಾರುಣ್ಯಕ್ಕೆ ಪಾತ್ರರಾದ  ನರಸಿಂಗರಾವ್ ದೇಶ ಪಾಂಡೆ,  ಕೆ.ಆರ್. ಇನಾಮ್ ದಾರ,ಅನಂತ್ ರಾವ್ ಸರಾಫ್, ಪ್ರಾಣೇಶ್ ಮುತಾಲಿಕ್,ಅರವಿಂದ್ ಕುಲಕರ್ಣಿ, ಹನುಮೇಶ್ ಸರಾಫ್, ವೇಣುಗೋಪಾಲ ಇನಾಂದಾರ್, ವಿಷ್ಣು ತೀರ್ಥ,, ವಸುದೇಂದ್ರ ಸಿರವಾರ ಸೇರಿದಂತೆ ಇನ್ನುಳಿದ ಭಕ್ತ ರು ಪಾಲ್ಗೊಂಡು ಗುರುಗಳ ಸ್ಮರಣೆ ಮಾಡಿದರು.

Comments

Popular posts from this blog