ಕರೋನಾ ಉಪದ್ರವ ಕಾಡದಿರಲು ಸುದರ್ಶನ ಹೋಮ.
ಕರೋನಾ ಉಪದ್ರವ ಕಾಡದಿರಲು ಸುದರ್ಶನ ಹೋಮ. ರಾಯಚೂರು,ಡಿ.25- ಕರೋನಾ ರೂಪಾಂತರ ತಳಿ ಭಾರತಕ್ಕೆ ಕಾಲಿಟ್ಟಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡತ್ತಿದ್ದು ಕರೋನಾ ಹಾವಳಿ ಬಾಧಿಸದಿರುವಂತೆ ಮತ್ತು ಜನರ ಸ್ವಾಸ್ಥ್ಯಕ್ಕಾಗಿ ಸುದರ್ಶನ ಹೋಮ ನೆರವೇರಿಸಲಾಯಿತು. ನಗರದ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಕಾಡ್ಲೂರು ಸಂಸ್ಥಾನದಿಂದ ನಡೆದ ಶ್ರೀ ಸುದರ್ಶನ ಹೋಮವನ್ನು ವಿಜಯಾಚಾರ್ ಮಠಾಧಿಕಾರಿಗಳು ನೆರವೇರಿಸಿದರು.
ಪೂರ್ಣಾಹುತಿಯನ್ನು ರಂಗರಾವ ದೇಸಾಯಿ ಕಾಡ್ಲೂರು ನೆರವೇರಿಸಿದರು. ಇದೆ ಸಂದರ್ಭದಲ್ಲಿ ಗೋತಗಿ ಗುರುರಾಜ ಆಚಾರ್ ಪ್ರತಿಮಾ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ, ಶ್ರೀನಿವಾಸ ಮೂರ್ತಿ ಪುರೋಹಿತ ,
ನಾರಾಯಣರಾವ್ ಕುಲಕರ್ಣಿ, ದಾಮೋದರ್ ಆಚಾರ ಪುರೋಹಿತ, ಡಾ.ಆನಂದ ತೀರ್ಥ ಫಡ್ನೀಸ್, ನಂದಾಪೂರು ಶ್ರೀನಿವಾಸರಾವ್, ಸುಶಿಲೇಂದ್ರ ಸೋದೆಗಾರ್, ವಿಠಲ ಪದಕಿ, ಶ್ರೀಧರ್ ಗಜೇಂದ್ರಗಡಕರ್, ತಾರಾನಾಥ ಜೇಗರಕಲ್, ರಾಜೇಂದ್ರ ಶಿವಾಳೆ, ಈಶ್ವರ್ ವಿ ಆರ್ ಎಲ್, ಸುವರ್ಣಬಾಯಿ ದೇಸಾಯಿ,ಅಶ್ವಿನಿ ದೇಸಾಯಿ, ಭೀಮೇಶ್ವರಿ ಕುಲಕರ್ಣಿ, ನಂದಾಪೂರು ಸರೋಜಬಾಯಿ, ಶ್ರೀಷಾ,ವಿದ್ಯಾ ಪುರೋಹಿತ, ಹೇಮಾ ಪುರೋಹಿತ, ಡಾ.ರೂಪಾ ಫಡ್ನೀಸ್, ಭಾಗೀರಥಿ ಫಡ್ನೀಸ್,ಡಾ.ಸೌಮ್ಯ, ಲತಾ, ನಿರಜಾ ಇತರರು ಇದ್ದರು.
Comments
Post a Comment