ಮಕ್ಕಳಿಗೆ ನಮ್ಮ ದೇಶದ ಆಚಾರ ವಿಚಾರ ತಿಳಿಸಬೇಕು-ಶ್ರೀ ಸುಬುಧೇಂದ್ರತೀರ್ಥರು.

 


ಮಕ್ಕಳಿಗೆ ನಮ್ಮ ದೇಶದ ಆಚಾರ ವಿಚಾರ ತಿಳಿಸಬೇಕು-ಶ್ರೀ ಸುಬುಧೇಂದ್ರತೀರ್ಥರು. 
   
    ರಾಯಚೂರು,ಡಿ.26- ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಅವರು ನಮ್ಮ ದೇಶದ ಆಚಾರ ವಿಚಾರ ತಿಳಿದುಕೊಳ್ಳಬೇಕೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ನಗರದಲ್ಲಿ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ಮನೆಯ ಆವರಣದಲ್ಲಿರುವ ಮಹಾನ ಪುರುಷರ, ದಾರ್ಶನಿಕರ, ಸ್ವಾತಂತ್ರ ಹೋರಾಟಗಾರ, ವಿಜ್ಞಾನಿಗಳು ಇನ್ನಿತರರ ಪುಸ್ತಕ ಭಂಡಾರವಿರುವ ಕಿರು ಗ್ರಂಥಾಲಯ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿ ಇಲ್ಲಿರುವ ನೂರಾರು ಪುಸ್ತಕಗಳು ಮಕ್ಕಳಿಗೆ ಸಾತ್ವಿಕ ಪ್ರಜ್ಞೆ ಮತ್ತು ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರ ತಿಳಿಸುತ್ತವೆ ಇದರ ಸದುಪಯೋಗಕ್ಕೆ ಸಲಹೆ ನೀಡಿದರು ಅಲ್ಲದೆ ಇಂತಹ ಕಾರ್ಯಕ್ಕೆ ಮುಂದಾಗಿರುವ "ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ಯನ್ನು ಕೊಂಡಾಡಿದರು.     

                                         ಈ ಸಂದರ್ಭದಲ್ಲಿ ರಂಗರಾವ ದೇಸಾಯಿ , ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ, ನಾರಾಯಣರಾವ ಕುಲಕರ್ಣಿ, ಕೆ.ಪ್ರಹಲ್ಲಾದರಾವ, ರಾಜಾ ದೇಸಾಯಿ, ಸುವರ್ಣಬಾಯಿ ದೇಸಾಯಿ, ಭೀಮೇಶ್ವರಿ ಕುಲಕರ್ಣಿ, ಅಶ್ವಿನಿ ದೇಸಾಯಿ, ಬಿಂದು ಇತರರು ಇದ್ದರು.
   

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ