ಎಕೆಬಿಎಂಎಸ್ ಜಿಲ್ಲಾ ಯುವ ಸಮಾವೇಶ ಅಂಗವಾಗಿ ಪೂರ್ವಭಾವಿ ಸಭೆ: ಸಂಘಟಿತರಾಗಿ ಮುಂದೆ ಸಾಗೋಣ- ಡಿ.ಕೆ.ಮುರಳೀಧರ.
ಎಕೆಬಿಎಂಎಸ್ ಜಿಲ್ಲಾ ಯುವ ಸಮಾವೇಶ ಅಂಗವಾಗಿ ಪೂರ್ವಭಾವಿ ಸಭೆ: ಸಂಘಟಿತರಾಗಿ ಮುಂದೆ ಸಾಗೋಣ- ಡಿ.ಕೆ.ಮುರಳೀಧರ. ರಾಯಚೂರು,ಡಿ.29- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಯವ ಘಟಕದ ವತಿಯಿಂದ ಮುಂದಿನ ತಿಂಗಳು ನಡೆಯುವ ಜಿಲ್ಲಾ ಯುವ ಘಟಕದ ಪದಗ್ರಹಣ ಹಾಗೂ ಜಿಲ್ಲಾ ಸಮಾವೇಶ ಕಾರ್ಯಕ್ರಮದ ಹಿನ್ನಲೆಯಲ್ಲಿ, ಅದರ ಪೂರ್ವಭಾವಿ ಸಭೆ ಬುಧವಾರ ಮಾನವಿ ಪಟ್ಟಣದಲ್ಲಿ ನಡೆಯಿತು, ರಾಜ್ಯ ಘಟಕದ ಪದಾಧಿಕಾರಿಗಳು,
ರಾಜ್ಯ ಯುವ ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳ ನೇತೃತ್ವದ ತಂಡ ಪ್ರವಾಸ ಕೈಗೊಂಡು ಸಿದ್ದತೆ ಕುರಿತಂತೆ ಚರ್ಚಿಸಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಾಣೇಶ ಮುತಾಲಿಕ, ಬ್ರಾಹ್ಮಣ ಸಂಘಟನೆ ಅತ್ಯಂತ ಅವಶ್ಯಕವಾಗಿದ್ದು, ವಿನಾಕಾರಣ ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ, ಹೋರಾಟ ಮನೋಭಾವನೆ ಇಲ್ಲದ ಸಮಾಜ ಎಂದಿಗೂ ಉದ್ದಾರವಾದ ನಿದರ್ಶನಗಳಿಲ್ಲ, ಇವತ್ತು ಮೀಸಲಾತಿ ಬಗ್ಗೆ ಸಾಕಷ್ಟು ಹೋರಾಟಗಳು ನಡೆಯುತ್ತಿವೆ, ಈಗಾಗಲೇ ಇಡ್ಬೂಎಸ ಬಗ್ಗೆ ರಾಜ್ಯದ ಅಧ್ಯಕ್ಷರಾದ ಅಶೋಕ ಹಾರ್ನಳ್ಳಿಯವರ ನೇತೃತ್ವದಲ್ಲಿ ಯೋಜನೆಯನ್ನು ರಾಜ್ಯಸರ್ಕಾರ ಚಾಲನೆ ಮಾಡಬೇಕು ಎಂದು ಹೋರಾಟ ನಡೆದಿದೆ, ಹಾಗಾಗಿ ಸಂಘಟಿತರಾಗಿ ಹೋರಾಡೋಣ ಹಾಗೂ ಬ್ರಾಹ್ಮಣ ಸಮಾಜವನ್ನು ಶಕ್ತಿಯುತವಾಗಿ ಮಾಡೋಣ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷರಾದ ಆನಂದತೀರ್ಥ ಫಡ್ನೀಸ್ ಮಾತನಾಡಿ, ಸಮಾಜವು ಪ್ರತಿ ಹಂತದಲ್ಲೂ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾಗಿ ಸಮಾಜದ ಬಂಧುಗಳು ಸ್ಪಂದಿಸುತ್ತಿರುವುದು ಸಂತೋಷದ ಸುದ್ದಿ, ಈ ಹಿಂದೆ ಬ್ರಾಹ್ಮಣ ಸಭಾಕ್ಕೆ ಸ್ವಂತ ಕಟ್ಟಡ ಮಾಡುವ ಇಚ್ಛೆ ವ್ಯಕ್ತವಾಗಿದ್ದ ಹಿನ್ನಲೆ, ಇಂದು ಕಟ್ಟಡ ರಾಯಚೂರಿನಲ್ಲಿ ನಿರ್ಮಾಣಗೊಳ್ಳುತ್ತಿದೆ, ಮನಸ್ಸು ಮಾಡಿದರೆ ಏನಾದರೂ ಮಾಡಬಹುದು, ಹಾಗೂ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಹೇಳಿದರು
ರಾಯಚೂರು ಜಿಲ್ಲಾ ಸಂಚಾಲಕರಾದ ಡಿ.ಕೆ.ಮುರಳೀಧರ ಮಾತನಾಡಿ, ಪ್ರಸಕ್ತ ವಿದ್ಯಮಾನಗಳಲ್ಲಿ ಸಂಘಟನೆಗೆ ಸಮಯ ಒದಗಿಸುವುದು ಅತ್ಯಂತ ಕಷ್ಟಕರ, ಆದರೂ ಸಮಯ ಮಾಡಿಕೊಂಡು ಇಲ್ಲಿ ಸೇರಿರುವುದು ಶ್ಲಾಘನೀಯ, ಸಮಾಜದ ಕೆಲಸಗಳು ನಿರಂತರವಾಗಿ ಸಾಗುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಮಾಜದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ, ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ, ಇದೆಕ್ಕೆಲ್ಲ ಕಾರಣ ಪ್ರಬಲವಾದ ಸಂಘಟನೆ, ಮಾನವಿಯಲ್ಲೂ ಕೂಡ ಎಲ್ಲಾ ಸ್ಥರದ ಘಟಕಗಳನ್ನು ರಚನೆ ಮಾಡಿ ಸಂಘಟಿತರಾಗಿ ಎಂದು ತಿಳಿಸಿದರು
ಇನ್ನೂ ಬ್ರಾಹ್ಮಣ ಯುವಕರು ಸಾಕಷ್ಟು ರೀತಿಯಲ್ಲಿ ಶಕ್ತರಿದ್ದು ಅದರ ಸದುಪಯೋಗ ಸಮಾಜ ಪಡೆಯಬೇಕಿದೆ, ಹಿರಿಯರಾದ ನಾವೆಲ್ಲ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ಸಂಘಟನೆಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರುರಾಜ್ಯ ಯುವ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ
ವಿನೋದ ಸಗರ ಮಾತನಾಡಿ ದಿನಾಂಕ ಜ.22 ರಂದು ಹಮ್ಮಿಕೊಂಡಿರುವ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಯಶಸ್ವಿಗಾಗಿ ಕೆಲಸ ಮಾಡೋಣ, ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರು ಹಾಗೂ ಇನ್ನೂ ಅನೇಕ ಗಣ್ಯರು ಭಾವಹಿಸಲಿದ್ದಾರೆ,
ಈಗಾಗಲೇ ತಾಲೂಕ ಘಟಕಗಳು ರಚನೆಯಾಗಿದ್ದು, ಆ ಘಟಕಗಳ ಪದಗ್ರಹಣ ಕೂಡ ಅಂದೇ ನಡೆಯಲಿದ್ದು, ಮತ್ತು ಐಡಿ ಕಾರ್ಡ್ ವಿತರಣೆ ಕೂಡ ನಡೆಯಲಿದೆ ಎಂದು ಹೇಳಿದರು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು,
ನಮ್ಮ ಮೂಲ ಉದ್ದೇಶ ಪ್ರತಿಯೊಬ್ಬ ಸದಸ್ಯರ ನೊಂದಣಿ ಮಾಡಿಸೋದು, ನೊಂದಣಿಯಿಂದಾಗುವ ಪ್ರಯೋಜನಗಳು ತುಂಬಾ ಇವೆ, ನಮಗೆ ನೀಡುವ ಐಡಿ ಕಾರ್ಡನಿಂದ ನಮ್ಮ ಬ್ರಾಹ್ಮಣ ವೈದ್ಯರ ಆಸ್ಪತ್ರೆಯಲ್ಲಿ ಶೇಕಡಾ 15% ರಷ್ಟು ರಿಯಾಯತಿ ಸಿಗುತ್ತದೆ,
ಇನ್ನೂ ಅನೇಕ ಸೌಲಭ್ಯಗಳು ಸಿಗಲಿದ್ದು ಅವೆಲ್ಲವೂ ಹಂತಹಂತವಾಗಿ ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ನಮ್ಮೆಲ್ಲರ ಸಂಘಟಿತ ಪ್ರಯತ್ನ ಫಲಿಸಲಿದೆ ಎಂದು ಹೇಳಿದರು
ಫೆಬ್ರವರಿ ತಿಂಗಳಲ್ಲಿ ನಡೆಯುವ ಉದ್ದೇಶಿತ ರಾಜ್ಯ ಯುವ ಸಮಾವೇಶದ ಕುರಿತು ಮಾತನಾಡಿದ ರಾಜ್ಯ ಯುವ ಘಟಕದ ಸಹಸಂಚಾಲಕ ಹನುಮೇಶ ಸರಾಫ, ಪ್ರತಿ ತಾಲೂಕಿನಿಂದ ಸುಮಾರು 300 ಜನ ಯುವಕರನ್ನು ಕರೆದುಕೊಂಡು ಬರಲು ಕರೆ ನೀಡಿದರು,
ಈ ಸಂದರ್ಭದಲ್ಲಿ ರಾಯಚೂರು ನಗರ ಸಂಚಾಲಕ ವೇಣುಗೋಪಾಲ್ ಇನಾಂದಾರ,ಜಿಲ್ಲಾ ಸಹಸಂಚಾಲಕ ರಾಮರಾವ್ ಗಣೇಕಲ್, ವಸುದೇಂದ್ರ ಸಿರವಾರ,
ವಿನೋದ ಕಕ್ಕೇರಿ, ಕೆ.ಪ್ರಲ್ಲಾದರಾವ ಮಾನವಿ ತಾಲೂಕ ಅಧ್ಯಕ್ಷರಾದ ಮುದ್ದುರಂಗರಾವ ಮುತಾಲಿಕ್, ಮಾನವಿಯ ಬ್ರಾಹ್ಮಣ ಸಮಾಜದ ಎಲ್ಲಾ ಪದಾಧಿಕಾರಿಗಳು, ಹಾಗೂ
ಯುವ ಘಟಕದ ಜಿಲ್ಲಾ ಸಂಚಾಲಕ ಪ್ರಲ್ಲಾದ ಕುಲಕರ್ಣಿ, ನಿರಂಜನ್ ಕುಲಕರ್ಣಿ, ವಿಜೇಯೆಂದ್ರ ಸಿರವಾರ, ಗೋವಿಂದ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
Comments
Post a Comment