ಏಮ್ಸ್ ಗಾಗಿ ಸಾವಿರಾರು ವಿದ್ಯಾರ್ಥಿಗಳಿಂದ ಮಾನವ ಸರಪಳಿ: ಏಮ್ಸ್ ಭಿಕ್ಷೆಯಲ್ಲ ನಮ್ಮ ಹಕ್ಕು -ಪಾರಸ್ಮಲ್ ಸುಖಾಣಿ
ಏಮ್ಸ್ ಗಾಗಿ ಸಾವಿರಾರು ವಿದ್ಯಾರ್ಥಿಗಳಿಂದ ಮಾನವ ಸರಪಳಿ: ಏಮ್ಸ್ ಭಿಕ್ಷೆಯಲ್ಲ ನಮ್ಮ ಹಕ್ಕು- ಪಾರಸ್ಮಲ್ ಸುಖಾಣಿ. ರಾಯಚೂರು,ಡಿ.29- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 231 ನೇ ದಿನಕ್ಕೆ ಮುಂದುವರೆದಿದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಇ೦ದಿನ ಧರಣಿ ಸತ್ಯಾಗ್ರಹಕ್ಕೆ ರಾಯಚೂರು ನಗರದ ವಿವಿಧ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳು ಉಪನ್ಯಾಸಕರು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡಿದರು. ಸಾವಿರಾರು ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಬಿ .ಆರ್. ಅಂಬೇಡ್ಕರ್ ವೃತ್ತ ದಲ್ಲಿ ಮಾನವ ಸರಪಳಿಯನ್ನು ಮಾಡಿ ಏಮ್ಸ್ ಗಾಗಿ ಸರ್ಕಾರಕ್ಕೆ ಒತ್ತಾಯಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ಏಮ್ಸ್ ಹೋರಾಟ ವೇದಿಕೆಗೆ ಆಗಮಿಸಿ ಬೆಂಬಲ ನೀಡಿದರು. ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ತಾರನಾಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸ್ಮಾಲ್ ಸುಖಾಣಿ ಅವರು, ರಾಯಚೂರು ಜಿಲ್ಲೆ ಸಂಪೂರ್ಣವಾಗಿ ಹಿಂದುಳಿದಿದೆ ನಮಗೆ ಬರಬೇಕಾಗಿರುವ ಐಐಟಿ ವಂಚನೆಯಾಗಿದೆ ಎಲ್ಲ ಜಿಲ್ಲೆಗಳನ್ನು ಸಮಾನವಾಗಿ ನೋಡಬೇಕು, ಈಗ ಕೇಳುತ್ತಿರುವ ಏಮ್ಸ್ ಭಿಕ್ಷೆ ಅಲ್ಲ ಇದು ನಮ್ಮ ಹಕ್ಕು, ಈಗಲಾದರೂ ಸರಕಾರ ರಾಜಕೀಯ ಇಚ್ಚಾ ಶಕ್ತಿಯನ್ನು ತೋರಿ ನಮ್ಮ ಹೋರಾಟಕ್ಕೆ ಗೌರವಿಸಿ ಏಮ್ಸ್ ಅನ್ನು ಕೂಡಲೇ ಮಂಜೂರಿ ಮಾಡಲೇಬೇಕು, ಇಲ್ಲದಿದ್ದರೆ ಮುಂದೆ ಅತ್ಯಂತ ಉಗ್ರ ಸ್ವರೂಪದ ಹೋರಾಟವನ್ನು ಸರಕಾರ ಎದುರಿಸಬೇಕಾಗುತ್ತದೆ, ಇದಕ್ಕೆ ಪಕ್ಷ ಭೇದ ಮರೆತು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಏಮ್ಸ್ ನ್ನು ಪಡೆಯೋಣ ಎಂದು ಕರೆ ನೀಡಿದರು. ನಾಗರಾಜ್ ಮಸ್ಕಿ, ಶ್ರೀನಿವಾಸರಾವ ನಂದಾಪೂರು ,ಹರವಿ ನಾಗನಗೌಡ, ಶ್ರೀಕಾಂತ್ ವಕೀಲರು ಮಾತನಾಡಿದರು. ಬಸಪ್ಪ ತಿಪ್ಪಾರೆಡ್ಡಿ, ಕರೀಂ, ಕೆ .ಶಾಂತಪ್ಪ ,ಶಿವಮೂರ್ತಿ, ಅಂಬಾಪತಿ ಪಾಟೀಲ್ ವಕೀಲರು, ದರೂರ್ ಬಸವರಾಜ್, ರುದ್ರಪ್ಪ ಅಂಗಡಿ ,ಮಲ್ಲಪ್ಪ ವಕೀಲರು ಮುಂತಾದವರು ಭಾಗವಹಿಸಿದ್ದರು. ಏಮ್ಸ್ ಹೋರಾಟ ಸಮಿತಿಯ ಡಾ .ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಬಶೀರ್ ಅಹ್ಮದ್ ಹೊಸಮನಿ ,ವೆಂಕಟೇಶ್ ಆಚಾರಿ, ಬಸವರಾಜ್ ಮಿಮಿಕ್ರಿ, ಎಂ.ಆರ್ ಭೇರಿ, ಆಂಜನೇಯ ಜಾಲಿಬೆಂಚಿ, ಗುರುರಾಜ್ ಕುಲಕರಣಿ, ಕಾಮರಾಜ್ ಪಾಟೀಲ್, ಪರಶುರಾಮ, ದಸ್ತಿಗಿರಿ ಸಾಬ್ ಕಾಕರಗಲ್ ,ನರಸಪ್ಪ ಬಾಡಿಯಾಲ ಆರಿಫ್ ಮಿಯಾ ನೆಲಹಾಳ್, ರಮೇಶ್ ಕಲ್ಲೂರ್ಕರ್, ರುದ್ರಯ್ಯ ಗುಣಾರಿ, ವಿನಯ್ ಕುಮಾರ್ ಚಿತ್ರಗಾರ, ಚಂದ್ರಶೇಖರ್ ಭಂಡಾರಿ, ವೀರಭದ್ರಪ್ಪ ಅಂಬರಪೇಟೆ, ವೀರಭದ್ರಯ್ಯ ಸ್ವಾಮಿ, ಮಹೇಂದ್ರ ಸಿಂಗ್, ಮಂಜುನಾಥ್ ಪಟೇಲ್ ಚಿಕ್ಕಸಗೂರು, ನಾಸೀರ್ ಹೊಸೂರ್, ಸಂತೋಷ್ ಜೈನ್ ,ಸಾಧಿಕ್ ಖಾನ್, ಚಂದ್ರಶೇಖರ್ ರೆಡ್ಡಿ ,ವೆಂಕಯ್ಯ ಶೆಟ್ಟಿ ಹೊಸಪೇಟೆ ,ಪಿ .ಬಾಲಪ್ಪ ,ಜಂಬಣ್ಣ ಬಾವಿಕಟ್ಟಿ ಕವಿತಾಳ್ ಮುಂತಾದವರು ಭಾಗವಹಿಸಿದ್ದರು. ಟ್ರಾಫಿಕ್ ಜಾಮ್:ಏಮ್ಸ್ ಹೋರಾಟ ಹಿನ್ನಲೆ ಸ್ಟೇಶನ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
Comments
Post a Comment