ಹೀರಾಬೆನ್ ಮೋದಿ ಯವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ - ತಿಪ್ಪರಾಜು


ಹೀರಾಬೆನ್ ಮೋದಿ ಯವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ - ತಿಪ್ಪರಾಜು

ರಾಯಚೂರು,ಡಿ.30-  ಇಂದು ಬೆಳಗಿನ ಜಾವ 3 ಗಂಟೆಗೆ ಇಹಲೋಕ ತ್ಯಜಿಸಿದ ಈ ದೇಶದ ಹೆಮ್ಮೆಯ ಪ್ರಧಾನಿಗಳಾದ  ನರೇಂದ್ರ ಮೋದಿಯವರ ತಾಯಿಯವರಾದ  ಹೀರಾಬೇನ್ ಮೋದಿಯವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ, ಅವರ ಅಗಲಿಕೆಯ ದುಃಖವನ್ನು  ಭರಿಸುವ ಶಕ್ತಿಯನ್ನು ಆ ಭಗವಂತ ಮಾನ್ಯ ಪ್ರಧಾನಿಗಳಿಗೆ ಮತ್ತು ಕುಟುಂಬಕ್ಕೆ ನೀಡಲಿ ಎಂದು ರಾಯಚೂರು ಗ್ರಾಮೀಣದ ಮಾಜಿ ಶಾಸಕರು ಹಾಗೂ ಕರ್ನಾಟಕ ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್   ಸಂತಾಪ ಸೂಚಿಸಿದ್ದಾರೆ.   


       ಈ ಭವ್ಯ ಭಾರತಕ್ಕೆ ಯುಗಪುರುಷನಂತಹ ಮಗನನ್ನು ನೀಡಿ,  ಶತಾಯುಷಿಯಾಗಿ ಅರ್ಥಪೂರ್ಣ ಬದುಕನ್ನ ಬದುಕಿ, ನಮ್ಮಂತಹ ಕೋಟ್ಯಾಂತರ ಜನರಿಗೆ ಸ್ಪೂರ್ತಿಯನ್ನ ತುಂಬಿದ ಈ ದೇಶದ ರಾಜನ ತಾಯಿ ನಿಜವಾಗಿಯೂ ರಾಜಮಾತೆಯೇ ಆಗಿದ್ದ ಹೀರಾಬೇನ್ ಅವರ ಅಗಲಿಕೆ ದೇಶದ ಎಲ್ಲ ಕುಟುಂಬಗಳಿಗೂ ತುಂಬಲಾಗದ ನಷ್ಟ. ಈ ದೇಶದ ಪ್ರಧಾನಿಯ ತಾಯಿಯಾಗಿಯೂ, ಅತ್ಯಂತ ಸರಳ ಬದುಕನ್ನು ಬದುಕಿ, ಕೇವಲ ಮಗನಿಗೆ ಮಾತ್ರವಲ್ಲದೇ, ಇಡಿ ದೇಶಕ್ಕೇ ತಾಯಿಯಾಗಿದ್ದ ಹೀರಾಬೆನ್ ಅವರ ಅಂತಿಮ ಪ್ರಯಾಣಕ್ಕೆ ನಮ್ಮೆಲ್ಲರ ಅಶ್ರುತರ್ಪಣ ಹಾಗೂ ಶತ ಶತ ನಮನಗಳು ಎಂದು  ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ