ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ: ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶಾಸಕ ಡಾ ಶಿವರಾಜ ಪಾಟೀಲ್


ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ:   
       ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶಾಸಕ ಡಾ ಶಿವರಾಜ ಪಾಟೀಲ್

ರಾಯಚೂರು,ಡಿ.24- ಮಕ್ಕಳನ್ನು ಶಿಕ್ಷಣವಂತರನ್ನಾಗಿಸ ಬೇಕು, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜಕ್ಕೆ ಕೀರ್ತಿ ಹಾಗೂ ಪಾಲಕರಿಗೆ ಹೆಸರು ತರಬೇಕು ಎಂದು ಶಾಸಕ ಡಾ. ಶಿವರಾಜ ಪಾಟೀಲ ಸಲಹೆ ನೀಡಿದರು.

ನಗರದ ಬಾಬು ಜಗಜೀವನರಾಂ ಕಲ್ಯಾಣ ಮಂಟಪದ ದಿ. ಅಶೋಕ ಗಸ್ತಿ ವೇದಿಕೆಯಲ್ಲಿ ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ವತಿಯಿಂದ ಶನಿವಾರ  ಆಯೋಜಿಸಿದ್ದ ಸಮಾಜದ ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ವಿದ್ಯಾವಂತರಾಗಿ ಮಾಡುವುದು ಪಾಲಕರ ಕರ್ತವ್ಯ. ಸಮಾಜದ ಅಶೋತ್ತರ ಈಡೇರಿಕೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು  ಸಮಾಜಕ್ಕೆ ಕೊಡುಗೆ ನೀಡಿ ಸಮಾಜದ ಋಣ ತೀರಿಸಬೇಕು. ಸನ್ಮಾನ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಇಷ್ಟಕ್ಕೆ ನಿಲ್ಲದೇ ಡಾಕ್ಟರ್, ಎಂಜಿನಿಯರ್ ಆಗುವ ಮೂಲಕ ಅನೇಕರಿಗೆ ಮಾದರಿಯಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಭಿವೃದ್ಧಿಯಾಗಲು ಸಾಕಷ್ಟು ಅವಕಾಶವಿದೆ. ಬಡತನ, ಕಷ್ಟವನ್ನು ಅನುಭವಿಸಿದವರೇ ಸಾಧಕರಗಲು ಸಾಧ್ಯ. ವಿದ್ಯಾರ್ಥಿಗಳು ತಮಗೆ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಮಾತನಾಡಿ, ಹಿಂದುಳಿದ ವರ್ಗಗಳ ಜಾತಿಗಳು ಒಗ್ಗಟ್ಟಿನಿಂದ ಸೌಲಭ್ಯ ಪಡೆಯಬೇಕು. ಒಗ್ಗಟ್ಟು ಪ್ರದರ್ಶನ ಮಾಡಿದ್ದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಗಮನಸೆಳೆದು ಅಭಿವೃದ್ಧಿಯಾಗಬಹುದು. 371 ಜೆ ಜಾರಿಯಾದ ನಂತರ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿದೆ. ಕಲ್ಯಾನ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದು, ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗಿದೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇನ್ನೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಗದಗ ಜಿಲ್ಲೆಯ ಗ್ರಾಮೀಣ ಮತ್ತು ಪಂಚಾಯತ ರಾಜ್ ಅಭಿವೃದ್ಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ  ವಿಶ್ಣುಕಾಂತ ಚಟಪಲ್ಲಿ ಮಾತನಾಡಿ, ರಾಜ್ಯದಲ್ಲಿ ಮೀಸಲಾತಿ ಎಲ್ಲಾ ಸಮಾಜದವರಿಗೆ ನಾವು ಹಿಂದುಳಿದಿದ್ದೇವೆ ಎಂದು ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಸವಿತಾ ಸಮಾಜದ ಪರಿಸ್ಥಿತಿ ನೋಡಿದಾಗ ಹೀನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಇದ್ದಾರೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ. ಉನ್ನತ ಶಿಕ್ಷಣ ನೀಡಬೇಕು. ಸರ್ಕಾರದ ವಿದ್ಯಾರ್ಥಿವೇತನ ಹಾಗೂ ಅನೇಕ ಶೈಕ್ಷಣಿಕ ಸೌಲಭ್ಯ ನೀಡುತ್ತಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.


ಜಿಲ್ಲಾ ಸವಿತಾ ಸಮಾದ ಅಧ್ಯಕ್ಷ ವಿಜಯ ಭಾಸ್ಕರ್ ಇಟಗಿ ಮಾತನಾಡಿ, ಸವಿತಾ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ. ಸಮಾಜದ ಸರ್ಕಾರಿ ನೌಕರರು, ಉಳ್ಳವರು  ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೇಣಿಗೆ ನೀಡಿ ಕೈಜೋಡಿಸಬೇಕು. ಸಮಾಜ ನಮಗೆ ಏನು ನೀಡಿದೆ ಎನ್ನದೇ ಸಮಾಜಕ್ಕೆ ನಾವು ಏನು ನೀಡಬೇಕು ಎಂದು ಆಲೋಚಿಸಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನಯ್ಯ, ಎಸ್ಎಸ್ಆರ್ ಜಿ ಮಹಿಳಾ ಕಾಲೇಜಿನ ಸತ್ಯನಾರಾಯಣ, ಜಿಲ್ಲಾ ಸವಿತಾ ಸಮಾಜದ ನೌಕರರ ಸಂಘದ ಅಧ್ಯಕ್ಷ ಆರ್ ನಾಗರಾಜ, ಅಶೋಕ ಗಸ್ತಿ ಫೌಂಡೇಶನ್ ಅಧ್ಯಕ್ಷೆ ಸುಮಾ ಅಶೋಕ ಗಸ್ತಿ, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಗೌರವಾಧ್ಯಕ್ಷ ಶ್ಯಾಮ ಸುಂದರ್ ಗದ್ವಾಲ್, ಸಿ ಎ ಗೋವಿಂದು ಉಪಾಧ್ಯಕ್ಷ ಜಿ., ಜಿಂದಣ್ಣ, ರಮೇಶ್ ಉಂದ್ಯಾಲ ಸುರೇಶ್ ಗಟ್ಟು ಶಿವಶರಣ ವೀರೇಶ್ ಇಳಕಲ್ ಇದ್ದರು.

Comments

Popular posts from this blog