ಪ್ರಧಾನಿ ನರೇಂದ್ರ ಮೋದಿಯವರ ತಾಯಿ ವಿಯೋಗಕ್ಕೆ ಶ್ರೀಸುಬುಧೇಂದ್ರತೀರ್ಥರ ಸಂತಾಪ.


ಪ್ರಧಾನಿ  ನರೇಂದ್ರ ಮೋದಿಯವರ ತಾಯಿ ವಿಯೋಗಕ್ಕೆ  ಶ್ರೀಸುಬುಧೇಂದ್ರತೀರ್ಥರ ಸಂತಾಪ.

ರಾಯಚೂರು,ಡಿ.30-  ದೇಶದ ಜನಮೆಚ್ಚಿದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ನರೇಂದ್ರಮೋದಿಜೀ ಅವರ ಶತಾಯುಷಿಗಳಾದ ಮಾತೃಶ್ರೀ ಅವರ ವಿಯೋಗವು ಆಗಿದೆ, ಎಂದು ಮಾಧ್ಯಮಗಳ ಮೂಲಕ ತಿಳಿದು ತುಂಬಾ ಬೇಸರವಾಯಿತು.

  ಮೋದಿಜಿಯವರು ದೇಶದ ಮಹೋನ್ನತ ಪ್ರಧಾನಿ ಹುದ್ದೆಯಲ್ಲಿದ್ದರೂ ತಾಯಿಗೆ ಮಾತ್ರ ಚಿಕ್ಕ ಮಗುವಾಗಿ ಮಾತೃವಾತ್ಸಲ್ಯವನ್ನು ಪಡೆಯುವುದನ್ನು ನಾವು ಮಾಧ್ಯಮಗಳ ಮೂಲಕ ಕಂಡಿದ್ದೇವೆ.

 ತುತ್ತು ಮಾಡಿ ತಾಯಿ ಬಾಯಲ್ಲಿ ಉಣಬಡಿಸಿದ್ದು, ತನ್ನ ವಸ್ತ್ರದಿಂದಲೇ ಮಗನ ಮುಖವನ್ನು ಒರೆಸಿದ್ದು ಹಾಗೂ ಕಿರು ಕಾಣಿಕೆಯಾಗಿ ಒಂದು ನೂರು ರೂಪಾಯಿಗಳನ್ನು ಕೊಟ್ಟದ್ದು ಇವೆಲ್ಲವೂ ಪ್ರಧಾನಿಯವರು  ಪಡೆದ ಮಾತೃವಾತ್ಸಲ್ಯ. ಹಾಗೂ ಅವರ ಸೌಭಾಗ್ಯವೇ ಸರಿ.


 ಅದೇ ರೀತಿ  ಮೋದೀಜಿ ಅವರೂ ತಾಯಿಯ ಸೇವೆಯನ್ನು ವಿಶೇಷವಾಗಿ ಮಾಡಿದ್ದು ,ವೀಲ್ ಚೇರನ್ನು ತಾವೇ ತಳ್ಳಿಕೊಂಡು ಹೋದದ್ದು, ಇವೆಲ್ಲವೂ ತಾಯಿಯ ಸೇವೆಯ ಪರಮ ಗುರಿಯನ್ನು ಸೂಚಿಸುತ್ತದೆ. ಇಂತಹ ವಿಚಾರವನ್ನು ವೈದಿಕ ವಾಂಙ್ಮಯವೂ "ಮಾತೃದೇವೋಭವ" ಎಂಬ ವಾಕ್ಯದಿಂದ ತಿಳಿಸುತ್ತದೆ .

ಇಂತಹ ತಾಯಿಯನ್ನು  ಕಳೆದುಕೊಂಡ ಅವರಿಗೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲೆಂದು ಹಾಗೂ ಆ ಮಾತೃಮೂರ್ತಿಗೆ ಉತ್ತಮ ಗತಿಯಾಗಲೆಂದು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅಂತರ್ಯಾಮಿಯಾದ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್