ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್ ಬೋಸರಾಜು
ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್ ಬೋಸರಾಜು
ರಾಯಚೂರು,ಡಿ.24- ಜಗತ್ತಿನಲ್ಲಿ ಸುಖ, ಶಾಂತಿ, ಪ್ರೀತಿ, ತ್ಯಾಗ, ಸಹೋದರತ್ವ ಸಾರಿದ ಯೇಸು ಕ್ರಿಸ್ತನ ಜನ್ಮದಿನದ ನಿಮತ್ಯ ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್ ಬೋಸರಾಜು ಅವರು ನಗರದ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಧರ್ಮಗುರುಗಳಿಗೆ ಸಿಹಿ ಹಂಚುವ ಮೂಲಕ ಕ್ರಿಸ್-ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಷಯಗಳು ತಿಳಿಸಿದರು. ನಗರದ ಮೆಥೋಡಿಸ್ಟ್ ಚರ್ಚ್, ಇನ್ಫೆಂಟ್ ಜೀಸಸ್, ಕ್ಯಾಥೋಲಿಕ್ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ, ಮೆಥೋಡಿಸ್ಟ್ ಚರ್ಚ್ ರೆವೆರಂಡ್ ಸೀಮೋನ್, ಇನ್ಫೆಂಟ್ ಜೀಸಸ್ ನ ಪೌಲ್ ರಾಜ್ ಫಾದರ್, ಅಗಾಪೆ ಚರ್ಚ್ ನ ಫಾಸ್ಟರ್ ವರಪ್ರಸಾದ್ ಹಾಗೂ ಫಾದರ್ ರಾಜು ಸೇರಿದಂತೆ ವಿವಿಧ ಚರ್ಚ್ ನ ಧರ್ಮಗುರುಗಳಿಗೆ ಸಿಹಿ ಹಂಚಿ ಸನ್ಮಾನಿಸಿ ಗೌರವದಿಂದ ಶುಭಾಷಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು, ಬಿ ರಮೇಶ್, ಮಹ್ಮದ್ ಶಾಲಂ ಸೇರಿದಂತೆ ಇತರರು ಇದ್ದರು.
Comments
Post a Comment