ಕರವೇಯಿಂದ ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವ ಆಚರಣೆ
ಕರವೇಯಿಂದ ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವ ಆಚರಣೆ ರಾಯಚೂರು,ಡಿ.29-ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಜಿಲ್ಲಾ ಘಟಕದಿಂದ ರಾಯಚೂರು ಜಿಲ್ಲಾ ಏಮ್ಸ್ ಹೋರಾಟದ ವೇದಿಕೆಯಲ್ಲಿ ಜಗದ ಕವಿ, ಯುಗದ ಕವಿ, ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವವನ್ನು ಸರಳ ಪೂಜೆಯೊಂದಿಗೆ ವಿಜೃಂಭಣೆಯಿ0ದ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾದ ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಡಾ. ಬಸವರಾಜ ಕಳಸ ಅವರು ಕಾರ್ಯಕ್ರಮವನ್ನು ಪೂಜೆಯೊಂದಿಗೆ ಉದ್ಘಾಟಿಸಿ ಕುವೆಂಪು ರವರ ಬರೆದ ಕಾದಂಬರಿಯ ಕುರಿತು ಹಾಗೂ ಕನ್ನಡ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತ ಮೊದಲನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ರವರು ಸೂರ್ಯ ಚಂದಿರ ವಿರುವವರೆಗೂ ಬರುವ ಯುವ ಪೀಳಿಗೆಗೆ ತಮ್ಮ ಸಾಹಿತ್ಯದಿಂದ ಕನ್ನಡ ವನ್ನು ಸಾರಿದ ಮಹಾನ್ ಕವಿಗಳೆಂದು ಉದ್ಘಾಟನಾ ಬಾಷಣದಲ್ಲಿ ಮಾತನಾಡಿದರು. ಸಾಹಿತಿಗಳಾದ ಅಂಜಿನಯ್ಯ ಜಾಲಿಬೆಂಚಿ, ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿ.ಕೆ.ಜೈನ್ ವಹಿಸಿದ್ದರು. ಉಳಿದ ಅತಿಥಿಗಳಾದ ಬಷೀರಅಹ್ಮದ ಹೊಸಮನಿ, ಎಂ.ಆರ್.ಬೇರಿ, ರಮೇಶ ಕಲ್ಲೂರಕರ್, ದಸ್ತಗಿರಿ ಕಾಕರಗಲ್, ಪರಶುರಾಮ, ಕೆ.ಗುರುರಾಜ ಹಾಗೂ ಕ.ರ.ವೇ ಮುಖಂಡರುಗಳಾದ ಸಂಗಮೇಶ ಮಂಗಾನವರ್, ಮಲ್ಲಿಕಾರ್ಜುನ, ಆಸಿಫ್, ಅಜೀಜ್, ನಾಗರಾಜ, ವಿನಯಚಿತ್ರಗಾರ, ವೆಂಕಟೇಶ ಆಚಾರಿ, ಆರಿಫ್‌ಮಿಯಾ ನೆಲಹಾಳ, ಸಮದ್, ಪ್ರಾಶಾಂತ, ಕಾಮರಾಜ ಪಾಟೀಲ್ ಮುಂತಾದವರೆಲ್ಲ ಉಪಸ್ಥಿತರಿದ್ದರು.
Comments
Post a Comment