371(ಜೆ) ಮೀಸಲಾತಿ ವ್ಯತಿರಿಕ್ತ ನೇಮಕಾತಿ: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಿಯಮ ಉಲಂಘನೆ- ರಜಾಕ ಉಸ್ತಾದ.
371(ಜೆ) ಮೀಸಲಾತಿ ವ್ಯತಿರಿಕ್ತ ನೇಮಕಾತಿ: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಿಯಮ ಉಲಂಘನೆ- ರಜಾಕ ಉಸ್ತಾದ. ರಾಯಚೂರು,ಜ.31- ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಸದರಿ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದಲ್ಲಿ ಉನ್ನತ ಮೆರಿಟ್ ಹೊಂದಿದ್ದರೂ ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡುವ ಅವಕಾಶವಿದ್ದರೂ ಸ್ಥಳೀಯ ವೃಂದದ ಪಟ್ಟಿಯಲ್ಲಿ ಆಯ್ಕೆ ಮಾಡುವದರ ಮೂಲಕ ಈ ಭಾಗದ ಇನ್ನುಳಿದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿರುವದನ್ನು ತೀರ್ವವಾಗಿ ಖಂಡಿಸಲಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರಾದ ರಜಾಕ ಉಸ್ತಾದ ಹೇಳಿದರು. ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಿಯಮದಂತೆ, ಯಾವುದೇ ಅಭ್ಯರ್ಥಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ್ದು, ಅಭ್ಯರ್ಥಿಯ ಮೆರಿಟ್ ಹೊಂದಿದ್ದರೆ ಸಾಮಾನ್ಯ ಅಭ್ಯರ್ಥಿ ಕೋಟಾದಡಿಯಲ್ಲಿ ಆಯ್ಕೆ ಮಾಡುವದು ನ್ಯಾಯಯುತವಾಗಿರುತ್ತದೆ, ಆದರೆ ೩೭೧ಜೆ ಮೀಸಲಾತಿಯಲ್ಲಿ ಸರಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಸರಕಾರಿ ಸೇವೆಗೆ ಸೇರುವ ಅವಕಾಶದಿಂದ ವಂಚಿತಗೊಳ್ಳುತ್ತಿದ್ದಾರೆ ಎಂದರು.
ಈ ಕುರಿತು ಹಲವಾರು ಸಂದರ್ಭದಲ್ಲಿ ಸರಕಾರದ ನಿಲುವಿನ ವಿರುದ್ದ ಹೋರಾಟ ಮಾಡಿದ ಕಾರಣ, ದಿನಾಂಕ ೨೯-೧೨-೨೦೨೨ರಂದು ಬೆಳಗಾವಿಯಲ್ಲಿ ನಡೆದ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿ ನಂತರ ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸುವಂತೆ ನಿರ್ಣಯಿಸಲಾಗಿದೆ, ಅಲ್ಲದೇ ಈಗಾಗಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವದನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ನೇಮಕಾತಿಗಳಿಗೆ ಸಚಿವ ಸಂಪುಟ ಉಪಸಮಿತಿಯ ಈ ನಿರ್ಣಯ ಅನ್ವಯಿಸುತ್ತದೆ ಎಂದು ನಿರ್ಣಯಿಸಲಾಗಿದೆ ಎಂದರು. ಅದಾಗ್ಯೂ ಸರಕಾರ ಸಚಿವ ಸಂಪುಟ ಉಪಸಮಿತಿಯ ನಿರ್ಣಯವನ್ನು ಸುತ್ತೋಲೆ ಅಥವಾ ಆದೇಶ ಮಾಡದೇ ಇರುವದರಿಂದ ಬಹುತೇಕ ನೇಮಕಾತಿ ಪ್ರಾಧಿಕಾರಗಳು ಕಲ್ಯಾಣ ಕರ್ನಾಟಕ ಪ್ರದೇಶದ ಹಿತಾಸಕ್ತಿಯ ವಿರುದ್ದ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತಿದ್ದಾರೆ ಎಂದರು.
ಈಗಾಗಲೇ ಪದವೀಧರ ಪ್ರಾಥಮಿಕ ಶಾಲೆಯ ೬ ರಿಂದ ೮ನೇ ತರಗತಿ ಶಿಕ್ಷಕರ ನೇಮಕಾತಿ, ಎಫ್.ಡಿ.ಎ., ಸಹಾಯಕ ಅಭಿಯಂತರರ ಹುದ್ದೆಗಳೂ ಸೇರಿದಂತೆ ಈಗ ಪ್ರಕಟಿಸಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಇವೆಲ್ಲ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದ ಮೆರಿಟ್ ಹೊಂದಿದ್ದರೂ ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಿರುವದು ಕಾನೂನು -ಬಾಹಿರವಾಗಿದೆ. ಸರಕಾರ ಕಳೆದ ನಾಲ್ಕು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಹಿತಾಸಕ್ತಿಯ ವಿರುದ್ದ ನಿರಂತರ ಪ್ರಯತ್ನ ಮಾಡುತ್ತ ಬಂದಿರುವದು ಹಲವು ಸಂಧರ್ಭದಲ್ಲಿ ಕಂಡುಬಂದಿದೆ, ಅದು ಆರ್ಥಿಕ ಇಲಾಖೆಯ ಮಿತಿಯನ್ನು ಹೇರಿ ೩೭೧ಜೆ ಹುದ್ದೆಗಳ ನೇಮಕಾತಿ ತಡೆಹಿಡಿದಿರುವ, ೦೬-೦೬-೨೦೨೦ರ ಸುತ್ತೋಲೆ ಮೂಲಕ ಅಭ್ಯರ್ಥಿಗಳಿಗೆ ಗೊಂದಲದ ಆಯ್ಕೆಯ ಅವಕಾಶ ನೀಡಿರುವದು, ೧೫-೦೬-೨೦೨೨ರ ಸುತ್ತೋಲೆ ಮೂಲಕ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ಎರಡು ಅರ್ಜಿ ಸಲ್ಲಿಸಿ, ಎರಡು ಶುಲ್ಕ, ಎರಡು ಪರೀಕ್ಷೆ, ಎರಡು ಪಲಿತಾಂಶವೆAದು ನೇಮಕಾತಿ ಪ್ರಾಧಿಕಾರಗಳೇ ಗೊಂದಲಕ್ಕೊಳಗಾಗುವ ರೀತಿ ಸರಕಾರ ನಡೆಕೊಂಡು ಬಂದಿದೆ ಎಂದರು.
ಆದ್ದರಿಂದ, ಕರ್ನಾಟಕ ಸರಕಾರ ಸಚಿವ ಸಂಪುಟ ಉಪಸಮಿತಿಯ ದಿನಾಂಕ ೨೯-೧೨-೨೦೨೨ರ ನಿರ್ಣಯದಂತೆ ಸೂಕ್ತ ಸುತ್ತೋಲೆಯನ್ನು ಹೊರಡಿಸಿ, ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಅದನ್ನು ಸಮರ್ಪಕ ಅನುಷ್ಠಾನ ಮಾಡುವಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ, ಅಲ್ಲದೇ ಈ ನಿರ್ಣಯವನ್ನು ಅನುಷ್ಠಾನ ಮಾಡಲು ವಿಫಲವಾದಲ್ಲಿ ಉಪಸಮಿತಿಯ ಅಧ್ಯಕ್ಷರಾದಂತಹ ಬಿ.ಶ್ರೀರಾಮುಲು ಅವರು ರಾಜೀನಾಮೇ ನೀಡಬೇಕೇಂದು ಈ ಮೂಲಕ ಆಗ್ರಹಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಜಿಲ್ಲಾ ವಕ್ತಾರ ಪವನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಸುಧೀಂದ್ರ ಜಾಹಗೀರದಾರ ಇದ್ದರು.
Comments
Post a Comment