ತುಂಗಭದ್ರಾ ಕಾಮಿ೯ಕರ ನಿಯೋಗಕ್ಕೆ ಮಾತುಕತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪ ಆಹ್ವಾನ
ತುಂಗಭದ್ರಾ ಕಾಮಿ೯ಕರ ನಿಯೋಗಕ್ಕೆ ಮಾತುಕತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪ ಆಹ್ವಾನ
ರಾಯಚೂರು,ಜ.26- ಹದಿನಾಲ್ಕು ತಿಂಗಳ ಬಾಕಿ ವೇತನ ಪಾವತಿ ಮಾಡಬೇಕೆಂದು ಇಂದು ರಾಯಚೂರು ಸ್ಟೇಡಿಯಂ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ ಮುನಿನಕೊಪ್ಪ ಅವರನ್ನು ಘೇರಾಯಿಸಲು ಮುಂದಾದ ತುಂಗಭದ್ರ ಕಾಮಿ೯ಕರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನಿನಕೊಪ್ಪ ಮಾತನಾಡಿದರು.
ಫೆಬ್ರವರಿ 10 ರಂದು ಸಂಘದ ನಿಯೋಗವನ್ನು ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದರು.ಹಿಂದಿನ ಸರಕಾರ ನೀಡಿದ ವಷ೯ ಪೂತಿ೯ ಕೆಲಸವನ್ನು ನಿಮ್ಮ ಸರಕಾರ ರದ್ದು ಮಾಡಿದೆ;ವಷ೯ ಪೂತಿ೯ ಕೆಲಸಕ್ಕೆ ಹಣಕಾಸಿನ ನೆಪ ಹೇಳ ಬೇಡಿ;ದಕ್ಷಿಣ ಕನಾ೯ಟಕದ ನೀರಾವರಿ ನಿಗಮಗಳು ಪ್ರತಿ ಹೆಕ್ಟೆರ್ಗೆ ನಿವ೯ಹಣಾ ವೆಚ್ಚ 900 ರೂ.ನೀಡುತ್ತಿದ್ದರೆ ತುಂಗಭದ್ರಕ್ಕೆ ಕೇವಲ 600 ನೀಡಲಾಗುತ್ತದೆ,ಇದು ಸರಕಾರದ ತಾರತಮ್ಯ ಎಂದು ಕಾಮಿ೯ಕ ಮುಖಂಡರು ಮಂತ್ರಿಯೊಂದಿಗೆ ವಾದಿಸಿದರು.
ಕೂಡಲೆ ಸಚಿವ ಕಾರಜೋಳ ಅವರನ್ನು ಬೇಟಿ ಮಾಡಿ ಅನುದಾನ ತಾರತಮ್ಯ ಸರಿಪಡಿಸಿ, ವಷ೯ ಪೂತಿ೯ ಕೆಲಸ ಹಾಗೂ 14 ತಿಂಗಳುಗಳ ಬಾಕಿ ವೇತನ ಕೊಡಿಸಲು ಕ್ರಮ ಕೈಗೊಳ್ಲಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯ 12 ಉಪ ವಿಭಾಗದಿಂದ ಬಂದಿದ್ದ ತುಂಗಭದ್ರ ಕಾಮಿ೯ಕರು ಹಾಗೂ ಮುಖಂಡರ ಜತೆ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಜಿ.ಅಮರೇಶ,ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಜಿ.ಅಡವಿರಾವ್, ರುಕ್ಕಪ್ಪ ಮಾನ್ವಿ ,ಹನುಮಂತಪ್ಪ ಸಿಂಧನೂರು, ಶರಣಪ್ಪ ಕವಿತಾಳ, ಹಾಜಿ ಕವಿತಾಳ,ರಾಮಣ್ಣ ಪೋತ್ನಾಳ,ರಾಮಣ್ಣ ಕೊಟ್ನೆಕಲ್,ಗ್ಯಾನಪ್ಪ ಸಿಂಧನೂರು ಮುಂತಾದವರು ಇಂದಿನ ಪ್ರತಿಭಟನೆಯಲ್ಲಿದ್ದರು.
Comments
Post a Comment