ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದೆ: ನಗರಸಭೆ ಸದಸ್ಯ ಸ್ಥಾನಕ್ಕೆ ಈ.ವಿನಯಕುಮಾರ್ ರಾಜೀನಾಮೆ
ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದೆ: ನಗರಸಭೆ ಸದಸ್ಯ ಸ್ಥಾನಕ್ಕೆ ಈ.ವಿನಯಕುಮಾರ್ ರಾಜೀನಾಮೆ ರಾಯಚೂರು,ಜ.27-ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದಿಸುವ ಹಿನ್ನಲೆಯಲ್ಲಿ ಈ.ವಿನಯ್ ಕುಮಾರ್ ತಮ್ಮ ನಗರ ಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಂದು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು ತಾವು ಪ್ರತಿನಿಧಿಸುವ ವಾರ್ಡ್ ನಂ.12 ಮಂಗಳವಾರ ಪೇಟೆ ನಗರಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ತಾವು ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ದಿಸುವ ನಿಟ್ಟಿನಲ್ಲಿ ರಾಜೀನಾಮೆ ಸಲ್ಲಿಸುವುದಾಗಿ ಉಲ್ಲೇಖಿಸಿದ್ದಾರೆ.
ಈಗಾಗಲೆ ಈ.ವಿನಯ ಕುಮಾರ್ ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷದ ಅಧಿಕೃತ ಘೋಷಣೆ ಹಿನ್ನಲೆ ವಿನಯ ಕುಮಾರ್ ನಗರಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮುಖಾಂತರ ವಿಧಾನ ಸಭಾ ಚುನಾವಣೆಗೆ ಅಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಸಾಗುತ್ತಿದ್ದು ಇಂದ ನಗರದಲ್ಲಿ ಅದ್ದೂರಿ ಸ್ವಾಗತಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಭರದ ಸಿದ್ದತೆಯಲ್ಲಿದ್ದು ಸಂಜೆ ಬೃಹತ್ ಸಮಾವೇಶ ನಡೆಯಲಿದ್ದು ಜೆಡಿಎಸ್ ಪಕ್ಷ ವಿಧಾನಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿ ಘೋಷಣೆಯನ್ನು ಈಗಾಗಲೆ ಮಾಡಿದ್ದು ಹೊಸ ಹುಮ್ಮಸ್ಸಿನಲ್ಲಿಚುನಾವಣೆಯತ್ತ ತನ್ನ ಚಿತ್ತ ನೆಟ್ಟಿದೆ.
Comments
Post a Comment