ನಗರದಲ್ಲಿ ಒತ್ತುವರಿಯಾದ ರುದ್ರಭೂಮಿಗಳ ಸರ್ವೆ ಮಾಡುತ್ತೇವೆ - ರಾಜಶೇಖರ್ .

 


ನಗರದಲ್ಲಿ ಒತ್ತುವರಿಯಾದ ರುದ್ರಭೂಮಿಗಳ ಸರ್ವೆ ಮಾಡುತ್ತೇವೆ - ರಾಜಶೇಖರ್ .               ರಾಯಚೂರು,ಜ.30 - ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸರ್ವೇ ನಂ. 929/2 ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ  ಜಾಗ ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿಅದಕ್ಕೆ ಸ್ಪಂದಿಸಿದ  ತಾಲೂಕು ದಂಡಾಧಿಕಾರಿ ಮತ್ತು ತಹಸಿಲ್ದಾರರಾದ  ರಾಜಶೇಖರ್ ರವರು ಇಂದು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ  ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಅಲ್ಲದೆ ನಗರದಲ್ಲಿ ಒತ್ತುವರಿಯಾದ  ರುದ್ರಭೂಮಿಗಳ ಸರ್ವೆ  ಮಾಡಲಾಗುತ್ತದೆ ಎಂದು ತಿಳಿಸಿದರು.

               ನಗರದ ಬೋಳಮಾನ್ ದೊಡ್ಡಿ ರಸ್ತೆಯಲ್ಲಿರುವ ರುದ್ರಭೂಮಿ ಅತಿಕ್ರಮಣ ಕುರಿತು  ಅತಿ ಶೀಘ್ರದಲ್ಲಿಯೇ ಸರ್ವೆ ಮಾಡುವುದಾಗಿ ರುದ್ರಭೂಮಿ ಸಂರಕ್ಷಣಾ ಸಮಿತಿಗೆ ತಿಳಿಸಿದರು.   

          

ಈ ಸಂದರ್ಭದಲ್ಲಿ ರುದ್ರಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ  ಕೆ.ಟಿ ಆನಂದ್ ,ಕಾರ್ಯದರ್ಶಿ ವಿಜಯ ಭಾಸ್ಕರ್ ಇಟಿಗಿ, ಸಲಹೆಗಾರ  ನಾರಾಯಣ ಗುರೂಜಿ , ನರಸಪ್ಪ ಕುರುಡಿ, ಸೆಂಟ್ರಿಂಗ್ ಮಾರೆಪ್ಪ ನಾಯಕ್,ಶ್ರೀನಿವಾಸ್ ನಾಯಕ್,ಹನುಮಂತು ಮೇಸ್ತ್ರಿ, ಪೊಲೀಸ್ ನರಸಿಂಹ, ರಾಮಚಂದ್ರನಾಯಕ ಮುಂತಾದವರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್