ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಎಲ್ಲರೂ ಭಾಗವಹಿಸಲು ಮನವಿ

 


ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಎಲ್ಲರೂ ಭಾಗವಹಿಸಲು ಮನವಿ

ರಾಯಚೂರು,ಜ.31-  ಶಿಕ್ಷಣ ಇಲಾಖೆಯಿಂದ ಫೆ 3 ಮತ್ತು 4 ರಂದು  ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿದೆ

ದಿನಾಂಕ 3 ರಂದು ಬೆಳಗ್ಗೆ 8: 30 ನಿಮಿಷಕ್ಕೆ ಹನುಮಾನ್ ಟಾಕೀಸ್ ವೃತ್ತದಿಂದ ಈ ಭಾಗದ ಶಾಲೆಯ ವಿದ್ಯಾರ್ಥಿಗಳಿಂದ ನಮ್ಮ ಶಾಲೆಯವರೆಗೆ ಭವ್ಯ ಮೆರವಣಿಗೆ ಇರುತ್ತದೆ.

  ಇದರಲ್ಲಿ ವಿದ್ಯಾರ್ಥಿಗಳು ವೇಷ ಭೂಷಣಗಳೊಂದಿಗೆ ಭಾಗವಹಿಸುತ್ತಾರೆ.

  10:30ಕ್ಕೆ ನಮ್ಮ ಶಾಲೆಯ ಆವರಣದಲ್ಲಿ ಉದ್ಘಾಟನಾ ಸಮಾರಂಭ ಇರುತ್ತದೆ.

  ಇದರಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

  ಜವಾಹರ್ ನಗರ ಪ್ರೌಢಶಾಲೆಯಲ್ಲಿ ಓದಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಜವಾಹರ ನಗರ ಪ್ರೌಢಶಾಲೆ ಮುಖ್ಯ ಗುರುಗಳಾದ  ಮುರಳಿಧರ ಕುಲಕರ್ಣಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಾರೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ