ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ- ಮುನೇನಕೊಪ್ಪ

 


ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ - ಮುನೇನಕೊಪ್ಪ

ರಾಯಚೂರು,ಜ.೨೬-ಈಗಾಗಲೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆ ಹೇಳಿದಂತೆ ಕೇಂದ್ರ ಸರ್ಕಾರರಾಜ್ಯಕ್ಕೆ ಏಮ್ಸ್ ನೀಡುವುದಾದರೆ ಜಿಲ್ಲೆಗೆ ಪ್ರಥಮ ಆದ್ಯತೆ ಎಂದು ಜವಳಿ , ಕೈಮಗ,್ಗ ಸಕ್ಕೆರೆ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಏಮ್ಸ್ ಹೋರಾಟ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದ್ದ ಈ ಹಿಂದೆ ಸಿಎಂ ಜಿಲ್ಲೆಗೆ ಭೇಟಿ ನೀಡಿದಾಗ ಹೇಳಿದಂತೆ ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಮಾಡಲಾಗಿದ್ದು ಕೋವಿಡ್ ವ್ಯಾಕ್ಸಿನೇಷನ ಗರಿಷ್ಟ ಪ್ರಮಾಣದಲ್ಲಿ ಎಲ್ಲಿರಿಗೂ ತಲುಪಿದೆ ಅದೆ ರೀತಿ ರೈತರಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಹಣ ಖಾತೆಗೆ ಬಂದಿದೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಧ್ಯಸ್ತಿಕೆ ಇಲ್ಲದೆ ಹಣ ಬ್ಯಾಂಕ್ ಖಾತೆಗಳೀಗೆ ಜಮಾವಾಣೆಯಾಗಿದ್ದು ಕೃಷಿ ಸಮ್ಮಾನ ಯೋಜನೆ, ವಿದ್ಯಾನಿಧಿ ಮುಂತಾದ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು ನಮ್ಮ ಸರ್ಕಾರ ಪಾರದರ್ಶಕವಾಗಿ ಆಡಳಿತ ಮಾಡಿದೆ ಎಂದರು.

ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದ ಅವರು ಕೊನೆ ಭಾಗದ ರೈತರಿಗೆ ನೀರು ತಲುಪದ ಬಗ್ಗೆ ದೂರುಗಳ ಹಿನ್ನಲೆ ತಾಂತ್ರಿಕ ಪರಿಣೀತರ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಉತ್ಸವ ಆಯೋಜನೆಗೆ ಸಮಯವಕಾಶ ಕಡಿಮೆಯಿದ್ದು ಆದರೂ ಈ ಬಗ್ಗೆ ಚಿಂತಿಸಲಾಗುತ್ತದೆ ಎಂದ ಅವರು ಕಳಾಸ ಬಂಡೂರಿ ಯೋಜನೆಗೆ ಡಿಪಿಅರ್ ಸಿದ್ದವಾಗಿದೆ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೆ ರಾಜ್ಯಕ್ಕೂ ಆನ್ಯಾಯವಾಗದಂತೆ ನೋಡಿಕೊಳ್ಳುತ್ತದೆ ಅಖಂಡ ಭಾರತ ಕಲ್ಪನೆ ನಮ್ಮ ಸರ್ಕಾರದ್ದಾಗಿದೆ ಎಂದ ಅವರು ಮೋದಿಯವರು ಸ್ವಂತಕ್ಕಾಗಿ ಬದುಕಿಲ್ಲ ದೇಶದ ಸಮಗ್ರತೆ ಏಕತೆ ಮತ್ತು ಅಖಂಡತೆಗೆ ಬದ್ದರಾಗಿದ್ದಾರೆ ಎಂದರು.

ಮಾಜಿ ಸಿಎಂ ಕುಮಾರ ಸ್ವಾಮಿ ಬಿಜೆಪಿ ಬಗ್ಗೆ ಮಾತನಾಡುವುದು ಸರಿಯಲ್ಲ ನಮ್ಮ ಸರ್ಕಾರದಲ್ಲಿ ಯಾವುದೆ ಅರಾಜಕತೆಯಿಲ್ಲವೆಂದ ಅವರು ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಬಗ್ಗೆ ರಮೇಶ ಜಾರಕಿಹೊಳಿ ಸಿಬಿಐಯಿಂದ ತನಿಖೆ ಮಾಡಿಸಬೇಕೆಂದಿದ್ದಾರೆ ಸಿಡಿ ವಿಚಾರ ಅವರ ವೈಯಕ್ತಿಕವಾಗಿದ್ದು ಸಿಬಿಐ ತನಿಖೆಗೆ ಅವರು ಸರ್ಕಾರಕ್ಕೆ ಒತ್ತಾಯಿಸಿದರೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು.

ಮತ್ತೊಮ್ಮೆ ಜನರು ರಾಜ್ಯದಲ್ಲಿ  ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ನಾವು ಅಧಿಕಾರಿಕ್ಕೆ ಬರುವುದು ನಿಶ್ಚಿತವೆಂದರು.

ಈ ಸಂದರ್ಭದಲ್ಲಿ ಸಂಸದ ಅಮರೇಶ್ವರ ನಾಯಕ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಸಿಇಓ ಶಶಿಧರ ಕುರೇರ, ಎಸ್ಪಿ ನಿಖಿಲ್ .ಬಿ, ಎಡಿಸಿ ದುರ್ಗೇಶ ,ತಹಸೀಲದಾರ ರಾಜಶೇಖರ ಇತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್