ಕಾಡ್ಲೂರು: ರೈಲ್ವೇ ಕೆಳ ಸೇತುವೆಯಲ್ಲಿ ನೀರು ನಿಲುಗಡೆಯಿಂದ ನಿತ್ಯ ಯಾತನೆ : ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಆರೋಪ.

 


ಕಾಡ್ಲೂರು: ರೈಲ್ವೇ ಕೆಳ ಸೇತುವೆಯಲ್ಲಿ  ನೀರು ನಿಲುಗಡೆಯಿಂದ ನಿತ್ಯ ಯಾತನೆ : ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ  ಆರೋಪ.                       ರಾಯಚೂರು,ಜ.31- ತಾಲೂಕಿನ ಕಾಡ್ಲೂರು  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡ್ಲೂರಿನಿಂದ ಶಕ್ತಿ ನಗರ  ಹೋಗುವ ಮಾರ್ಗ ಮಧ್ಯದಲ್ಲಿ   ರೈಲ್ವೆ ಬ್ರಿಡ್ಜ್ ಕೆಳಗೆ ಯಾವಾಗಲೂ ನೀರು ನಿಂತು ಸಂಚಾರ ಮಾಡುವುದಕ್ಕೆ ಬಹಳ ತೊಂದರೆಯಾಗಿದ್ದು ಇದರಿಂದ ಶಾಲಾ ಮಕ್ಕಳಿಗೆ, ರೈತರಿಗೆ, ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ತೀರ್ವ ಅಡಚಣೆಯಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಈದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಗ್ರಾಮಸ್ಥರ ಅಳಲಾಗಿದೆ .

ಶಾಲೆಯ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಹೋಗುವ  ಗರ್ಭಿಣಿ ಮಹಿಳೆಯರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ಧರಿಗೆ ಈ  ದಾರಿಯಲ್ಲಿ ಸಾಗಬೇಕಾದರೆ ಬಹಳಷ್ಟು ಕಷ್ಟ ಪಡಬೇಕಾಗಿದೆ ಹಾರುಬೂದಿ ಲಾರಿಗಳಿಂದ ಟ್ರಾಫಿಕ್ ಜಾಮ್, ಸರಿಯಾದ ಸಮಯಕ್ಕೆ ಶಾಲೆಗೆ ಮತ್ತು ಆಸ್ಪತ್ರೆಗೆ   ಹೋಗುವುದಕ್ಕೆ ತೊಂದರೆಯಾಗುತ್ತಿದೆ ಇದಕ್ಕೆಲ್ಲ  ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕಾಡ್ಲೂರಿನ  ಬಿಜೆಪಿ ಯುವ ಮುಖಂಡರಾದ ಪಾಂಡುರಂಗ ಕಾಡ್ಲೂರು ಆಕ್ರೋಶ   ವ್ಯಕ್ತಪಡಿಸಿದ್ದು ಈ ಕೂಡಲೆ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಲುಗಡೆಯಾಗದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ