ಬೂರ್ದಿಪಾಡ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಬೂರ್ದಿಪಾಡ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ. ರಾಯಚೂರು,ಜ.31- ತಾಲೂಕಿನ ಬೂರ್ದಿಪಾಡ ಗ್ರಾಮದಲ್ಲಿ ಶಾಸಕ ಬಸನಗೌಡ ದದ್ದಲ್ ರವರು ಕೆ.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಸ ಹಿ ಪ್ರಾ ಶಾಲೆಯ ಎರಡು ಕೊಠಡಿ ನಿರ್ಮಾಣದ ಭೂಮಿ ಪೂಜೆ ಮತ್ತು ಜುರಾಲಾ ಯೋಜನೆಯಡಿ ವಿವಿದೊದ್ದೇಶ ಸಮುದಾಯ ಭವನ ಕಟ್ಟಡ ಉದ್ಘಾಟನೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿರು .
ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಶಿಕ್ಷಣ ವಂತರ ಸಂಖ್ಯೆ ಹೆಚ್ಚಾಗಬೇಕು ನೂರಕ್ಕೆ ನೂರಷ್ಟು ಶಿಕ್ಷಣ ಪಡೆಯಬೇಕು ಆಗ ಮಾತ್ರ ನಮ್ಮ ಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಬೂರ್ದಿಪಾಡ ಗ್ರಾಮ ನೆರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗ್ರಾಮ ಈ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಶಿಕ್ಷಣ ಪಡೆಯಬೇಕು, ಕನ್ನಡದ ಉಳುವಿಗಾಗಿ, ಶಾಲೆಯ ಅಭಿವೃದ್ಧಿಗಾಗಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಬೇಕು, ಶಿಕ್ಷಕರು ಕೂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿ ಈ ಶಾಲೆಯನ್ನು ದತ್ತು ಪಡೆಯಲಾಗಿದೆ.
ಈ ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಗೆ 28 ಲಕ್ಷ ರೂ ಮೊತ್ತದ ಎರಡು ಶಾಲಾ ಕೊಠಡಿಗಳು, ಹೈಟೇಕ್ ಶೌಚಾಲಯ ಕಾಂಪೌಂಡ್ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ನೀಡಲಾಗುತ್ತದೆ,ಇದರ ಜೊತೆಗೆ 8ನೇ ತರಗತಿವರೆಗೂ ಇದೆ, ಇದನ್ನು 10ನೇ ತರಗತಿವರೆಗೆ ಉನ್ನತಿಕರಿಸಲು ಶಿಕ್ಷಣ ಇಲಾಖೆ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ,
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಹತ್ತಿರದಲ್ಲಿಯೇ ಶಾಲೆ ಕಾಲೇಜುಗಳು ಇದ್ದರೆ ಪೋಷಕರು ಸಹ ತಮ್ಮ ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಹಿಸುತ್ತಾರೆ, ದೂರದ ಊರಗಳಲ್ಲಿ ಅಥವಾ ನಗರದಲ್ಲಿ ಇದ್ದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ ಎಂದರು.
ಆದ್ದರಿಂದ ಇಲ್ಲಿಯೇ ಫ್ರೌಡ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಊಟದ ಕೋಣೆ, ಕುಡಿಯುವ ನೀರಿನ ಸೌಲಭ್ಯ,ಹೈಟೆಕ್ ಶೌಚಾಲಯ ಈ ಶಾಲೆಗೆ ಒದಗಿಸಲಾಗುತ್ತಿದೆ ಎಂದರು.
ನನ್ನನ್ನು ಶಾಸಕನಾಗಿ ಆಯ್ಕೆಮಾಡಿದ್ದೀರಾ ಆ ದಿನದಿಂದಲೂ ನಿರಂತರವಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ, ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೇವಸೂಗೂರು ಬ್ಲಾಕ್ ಅಧ್ಯಕ್ಷರು ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಹಿರಿಯ ಮುಖಂಡರುಗಳು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು,ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
Comments
Post a Comment