ನಗರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ: ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಬೆಂಬಲಿಸಿ-ಹೆಚ್‌ಡಿಕೆ

 

ನಗರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ:

ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಬೆಂಬಲಿಸಿ-ಹೆಚ್‌ಡಿಕೆ

ರಾಯಚೂರು,ಜ.೨೭-ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರಿಂದು ನಗರದ ರಾಮಲಿಂಗೇಶ್ವರ ಮೈದಾನದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ ಸಮಾವೇಶ  ಉದ್ಘಾಟಿಸಿ ಮಾತನಾಡಿ ಈ ಬಾರಿ ನನ್ನ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರೆ ನಿಮ್ಮೆಲ್ಲ ಸಂಕಷ್ಟಗಳನ್ನು ದೂರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ನಾನು ಕಳೆದ ೫೪ ದಿನಗಳಿಂದ ಪಂಚರತ್ನ ರಥಯಾತ್ರೆಯಲ್ಲಿ ಸಂಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಪಂಚರತ್ನ ಸಾಗಬೇಕಾದ ಹಿನ್ನಲೆಯಲ್ಲಿ ಎರಡೆ ದಿನದಲ್ಲಿ ರಾಯಚೂರು ಜಿಲ್ಲೆಯ ರಥಯಾತ್ರೆ ಕಾರ್ಯಕ್ರಮ ಅಯೋಜನೆ ಮಾಡಲಾಗಿದ್ದು ಕಾರ್ಯಕರ್ತರ ಬಲದಿಂದ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ದೊರಕಿದೆ ಎಂದ ಅವರು ನಾನು ೧೮ ತಾಸುಗಳ ಕಾಲ ಕೆಲಸ ಮಾಡುವ ವ್ಯಕ್ತಿಯಾಗಿದ್ದು ನಮ್ಮ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಬೇಕೆಂದು ಕೋರಿದರು.

ನಗರ ಕ್ಷೇತ್ರಕ್ಕೆ ಈ.ವಿನಯ್‌ಕುಮಾರ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದ್ದು ಇಲ್ಲಿನ ಜನರು ನನ್ನನ್ನೆ ನಿಮ್ಮ ಅಭ್ಯರ್ಥಿಯಂದು ಭಾವಿಸಿ ಮತ ನೀಡಬೇಕೆಂದು ಕೋರಿದ ಅವರು ೨೦೧೩ರಲ್ಲಿ ನಮ್ಮ ಪಕ್ಷದಿಂದ ಟಿಕೆಟ್ ಪಡೆದು ಜಯಗಳಿಸಿ ನಮ್ಮ ಪಕ್ಷಕ್ಕೆ ಟೋಪಿ ಹಾಕಿದ ವ್ಯಕ್ತಿ ಮತ್ತೆ ನಿಮ್ಮ ಮುಂದೆ ಈ ಬಾರಿ ಹಣವನ್ನು ಹೊತ್ತು ಬರುತ್ತಾರೆ ಅವರ ಹಣದ ಆಮೀಷಕ್ಕೆ ಒಳಗಾಗಬೇಡಿ ಎಂದರು.


ಜೆಡಿಎಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಎರೆಡು ಕ್ಷೇತ್ರದಲ್ಲಿ ಕಳೆದ ಬಾರಿ ಆಶೀರ್ವಾದ ಮಾಡಿದ್ದೀರಿ ಈ ಬಾರಿ ನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದ ಅವರು ಈ ಹಿಂದೆ ಮಳೆ ಆವಾಂತರ ಸೃಷ್ಟಿಯಾದಗ ನಿಮ್ಮ ನಗರಕ್ಕೆ ಬೇಟಿ ನೀಡಿ ಪರಿಹಾರ ಕಲ್ಪಿಸಿದ್ದೆ ಎಂದು ನೆನಪಿಸಿಕೊಂಡ ಅವರು ದಿ.ಎಂ.ಈರಣ್ಣನವರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು ಇಂದು ಅವರ ಮಗ ಪವನ್ ನಮ್ಮ ಜೊತೆಯಲ್ಲಿದ್ದಾರೆ ಎಂದರು.

ನಿಮ್ಮ ನಗರದ ಸ್ಥಿತಿಗತಿ ಬಗ್ಗೆ ಮಾಹಿತಿಯಿದೆ ಧೂಳಿನಿಂದ ನೀವು ತತ್ತರಿಸಿದ್ದೀರಿ ಅದೇ ರೀತಿ ಎರೆಡು ಬದಿ ನದಿಯಿದ್ದರೂ ಕೊನೆ ಭಾಗಕ್ಕೆ ನೀರು ತಲುಪದೆ ರೈತರು ಸಂಕಷ್ಟ ಎದುರಿಸುತ್ತೀರಿ ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸುವ ಯೋಜನೆ ಜಾರಿ ಮಾಡುತ್ತೇನೆ ನಿಮ್ಮ ಆಶೀರ್ವಾದ ನನಗೆ ಮಾಡಿದರೆ ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡುವುದಾಗಿ ಘೋಷಿಸಿದ ಅವರು ತೆಲಂಗಾಣದಲ್ಲಿ ಕಾಳೇಶ್ವರಿ ಯೋಜನೆ ಮತ್ತು ಮಿಷನ್ ಭಗೀರಥ ಮಾದರಿಯಲ್ಲಿ ಪರಿಶುದ್ದ ನೀರು ನೀಡುತ್ತೇನೆಂದರು.


ನಮ್ಮ ಪಕ್ಷದ ಕಾರ್ಯಕ್ರಮ ವೇದಿಕೆಯಲ್ಲಿ ಶ್ರೀಮಂತರು ಇರುವುದಿಲ್ಲ ಬಿಜೆಪಿ, ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಸಾಮಾನ್ಯರು ಇರುವುದಿಲ್ಲ ನಮ್ಮ ಪಕ್ಷ ಬಡವರ ಪರವಾದದ್ದು ಎಂದ ಅವರು ನನ್ನ ಬಳಿ ದಿನ ನಿತ್ಯ ಅನೇಕರು ತಮ್ಮ ಕಷ್ಟ ಹೇಳಿಕೊಂಡು ಬರುತ್ತಾರೆ ಕೆಲವರು ಆರೋಗ್ಯ ಸಮಸ್ಯೆಗೆ ಲಕ್ಷಾಂತರ ಹಣದ ಸಹಾಯ ಯಾಚಿಸುತ್ತಾರೆ ನನ್ನ ಬಳಿ ಬ್ರಷ್ಟಾಚಾರದ ಹಣವಿಲ್ಲ ಬಿಜೆಪಿ ಶೇ.೪೦ ರಷ್ಟು ಬ್ರಷ್ಟಾಚಾರ ಮಾಡಿ ಅಕ್ರಮ ಸಂಪತ್ತು ಗಳಿಸಿದೆ ಅವರಂತೆ ನನ್ನ ಬಳಿ ಅಕ್ರಮ ಗಳಿಕೆಯಿಲ್ಲವೆಂದರು.

ನಾನು ಈ ಹಿಂದೆ ಎರೆಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ೨೫೦೦ ಕೋಟಿ ರೂ ಸಾಲ ಮನ್ನ ಮಾಡಿದೆ ಅದೆ ರೀತಿ ಲಾಟರಿ, ಸರಾಯಿ ನಿಷೇಧ ಮಾಡಿದ್ದೇನೆ ನನಗೆ ಲಾಟರಿ ನಿಷೇಧ ಮಾಡದಂತೆ ೩೦ ಕೋಟಿ ರೂ ಅಮೀಷ ಒಡ್ಡಲಾಗಿತ್ತು ಅದನ್ನು ದಿಕ್ಕರಿಸಿ ಹಣಕ್ಕೆ ಮಾರು ಹೋಗದೆ ಬಡವರ ಬದಕು ಲಾಟರಿ ಮತ್ತು ಸರಾಯಿಯಿಂದ ಹದಗೆಡುತ್ತದೆ ತಾಯಂದಿರ ಶಾಪ ನನಗೆ ತಟ್ಟುತ್ತದೆ ಎಂಬ ಕಾರಣದಿಂದ ಯಾವುದೆ ದುರಾಸೆಗೆ ಒಳಗಾಗದೆ ಲಾಟರಿ , ಸರಾಯಿ ನಿಷೇಧಿಸಿದೆ ಎಂದರು.


ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರಗುತ್ತಾರೆ ಹಾಗೆ ಹೇಳಿಯೇ ಅವರು ೮೦ ಸ್ಥಾನಕ್ಕೆ ಇಳಿದಿದ್ದು ಎಂದು ಲೇವಡಿ ಮಾಡಿದ ಅವರು ಬಿಜೆಪಿಯ ನಿಜವಾದ ಬೀ ಟೀಂ ಕಾಂಗ್ರೆಸ್ ನ ಕೆಲ ನಾಯಕರು ಎಂದ ಅವರು ೨೦೦೮ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಬಿಜೆಪಿಯಿಂದ ಸುಪಾರಿ ಪಡೆದು ಕಾಂಗ್ರೆಸ್ ಅಭ್ಯರ್ಥಿಗಳನ್ನೆ ಸೋಲಿಸಿದರು ಎಂದು ಅರೋಪಿಸಿದರು.

ನಾನು ಈ ಹಿಂದೆ ಸಿಎಂ ಆಗಿದ್ದು ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ ಜೊತೆ ಮೈತ್ರಿ ಕಾರಣದಿಂದ ನನಗೆ ಕೆಲ ಯೋಜನೆ ಜಾರಿ ಮಾಡಲು ಆಗಲಿಲ್ಲವೆಂದ ಅವರು ದಲಿತರ ಒಳ ಮೀಸಲಾತಿಗಾಗಿ ಸದಾಶಿವ ಆಯೋಗ ವರದಿ ಜಾರಿಗೆ ನಾನು ದ್ದವೆಂದ ಅವರು ಎಲ್ಲರಿಗೂ ಸಂವಿದಾನದಡಿ ಮೀಸಲಾತಿ ನೀಡಬೇಕು ನಾನು ಮೀಸಲಾತಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲವೆಂದರು.

ನಗರದಲ್ಲಿ ಕೆಳದ ೨೫೦ ದಿನಗಳಿಂದ ಏಮ್ಸ್ ಗಾಗಿ ಹೋರಾಟ ನಡೆದಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲವಂದ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದಿಂದಲೆ ಏಮ್ಸ್ ಎರಡು ಪಟ್ಟು ಇರುವ ಆಸ್ಪತ್ರೆ ನೀಡುತ್ತೇನೆ ಕೇಂದ್ರ ಸರ್ಕಾರದ ಬಳಿ ಕೈಚಾಚುವ ಪ್ರಮೇಯ ಬರುವುದಿಲ್ಲವೆಂದರು.


ಕಾ0ಗ್ರೆಸ್ ನಾಯಕರು ಹೇಳುತ್ತಾರೆ ಎರೆಡು ಬಾರಿ ಸಿಎಂ ಆಗಿದ್ದಾಗ ನಾನು ಏನು ಮಾಡಿಲ್ಲವೆಂದು ಕೊಟ್ಟ ಕುದುರೆ ಏರಲಾಗದನು ಶೂರನು ಅಲ್ಲ ಧೀರನು ಅಲ್ಲವೆಂದು ನನಗೆ ನಾಲ್ಕು ಕಾಲಿಲ್ಲದ ಕುದುರೆ ನೀಡದರೆ ಅದನ್ನು ಹೇಗೆ ಓಡುಸುವುದು ಎಂದು ಮಾರ್ಮಿಕವಾಗಿ ಹೇಳಿದರು.

ನಗರ ಕ್ಷೇತ್ರದ ಅಭ್ಯರ್ಥಿ ಈ ವಿನಯಕುಮಾರ್ ಮಾತನಾಡಿ ನಾನು ಜನರ ಸೇವೆಗಾಗಿ ರಾಜಕೀಯಕ್ಕೆ ಬಂದವನು ಎರೆಡು ಬಾರಿ ನಗರಸಭೆ ಸದಸ್ಯನಾಗಿ ಮತ್ತು ಒಂದು ಬಾರಿ ನಗರಸಭೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಕೆಲ ನಾಯಕರು ನನ್ನನ್ನು ಕುತಂತ್ರದಿ0ದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ ಅದಕ್ಕೆ ತಕ್ಕ ಪಾಠ ಜನರು ಕಲಿಸುತ್ತಾರೆ ಈ ಬಾರಿ ನನಗೆ ಚುನಾವಣೆಯಲ್ಲಿ ಆಶೀರ್ವದಿಸಿದರೆ ನಿಮ್ಮ ಎಲ್ಲ ಕಷ್ಟಕ್ಕೆ ಸ್ಪಂದಿಸುತ್ತೇನೆ0ದ ಅವರು ದೇವರ ಗುಡಿಯಲ್ಲಿರುವ ದೇವರು ಉತ್ಸವ ಮೂರ್ತಿಯಂತೆ ಜನರ ಮಧ್ಯೆ ಬಂದಿದ್ದಾರೆ0ದು ಪಂಚರತ್ನ ಕಾರ್ಯಕ್ರಮವನ್ನು ಬಣ್ಣಿಸಿದರು.

ನಾನು ಕಳೆದ ಕೆಲ ತಿಂಗಳುಗಳ ಹಿಂದೆ ಹೇಳೀದಂತೆಯೇ ನನಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಲಭಿಸಿದ್ದು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಕೋರಿದ ಅವರು ಜನ ಸೇವೆಯೇ ನನ್ನ ಆದ್ಯತೆ ಎಂದರು.


ಪ್ರಸ್ತಾವಿಕವಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ ನಾಡಿನ ಜನರ ನಾಡಿ ಮೀಡಿತ ಅರಿತ ಕುಮಾರ್ ಸ್ವಾಮಿ ರಥಯಾತ್ರೆ ಮೂಲಕ ಜನರ  ಆಶೀರ್ವಾದ ಬಯಸಿ ಬಂದಿದ್ದು ಜಿಲ್ಲೆಯಲ್ಲಿ ಅಭಿವೃದ್ದಿಯಾಗಬೇಕಾದರೆ ಜೆಡಿಎಸ್ ಬಂಬಲಿಸಬೇಕೆ0ದರು.

ವೇದಿಕೆ ಮೇಲೆ ತೆಲಂಗಾಣ ರಾಜ್ಯದ ನಾರಾಯಣಪೇಟೆ ಶಾಸಕ ಎಸ್.ಅರ್.ರೆಡ್ಡಿ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ದೇವದುರ್ಗ ಆಭ್ಯರ್ಥಿ ಕರೆಮ್ಮ, ರಾಯಚೂರು ಗ್ರಾಮೀಣ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ, ಮುಖಂಡರಾದ ಮಹಾಂತೇಶ ಪಾಟೀಲ ಅತ್ತನೂರು,ಗಾಣಧಾಳ ಲಕ್ಷಿö್ಮÃಪತಿ, ಈ.ಆಂಜಿನೇಯ್ಯ,ಎ0.ಪವನ್‌ಕುಮಾರ್, ಯೂಸೂಫ್ ಖಾನ್, ತಿಮ್ಮಾರೆಡ್ಡಿ, ಬುಡ್ಡನಗೌಡ, ಎನ್.ಶಿವಶಂಕರ ವಕೀಲ ಇತರರು ಇದ್ದರು.


ಅದ್ದೂರಿ ಸ್ವಾಗತ :ಸಮಾವೇಶಕ್ಕೂ ಮುನ್ನ ನಗರದ ಗಂಜ ವೃತ್ತ ಮತ್ತು ಅಂಬೇಡ್ಕರ್ ವೃತ್ತದಲ್ಲಿ ರಥ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು ನಂತರ ಪ್ರಮುಖ ಬೀದಿಗಳಲ್ಲಿ ಪಂಚರತ್ನ ರಥಯಾತ್ರೆ ಸಾಗಿತು ವಿವಿಧ ಕಲಾ ತಂಡಗಳು ಯಾತ್ರೆಗೆ ಮೆರಗು ನೀಡಿದವು. ಬೃಹತ್ ಈರುಳ್ಳಿ ಹಾರವನ್ನು ಕಾರ್ಯಕರ್ತರು ಹೆಚ್‌ಡಿಕೆಗೆ ಹಾಕಿದರು.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್