ಮಂತ್ರಾಲಯ: ಶ್ರೀ ಮಧ್ವ ನವಮಿ ಆಚರಣೆ.
ಮಂತ್ರಾಲಯ: ಶ್ರೀ ಮಧ್ವ ನವಮಿ ಆಚರಣೆ. ರಾಯಚೂರು,ಜ.30- ಶ್ರೀ ಮಧ್ವ ನವಮಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮುಖ್ಯ ಪ್ರಾಣದೇವರಿಗೆ ಪಂಚಾಮೃತ ಅಭಿಷೇಕವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನೆರವೇರಿಸಿದರು.
ನಂತರ ಮಧ್ವಾಚಾರ್ಯರ ರಥೋತ್ಸವಕ್ಕೆ ಪುಷ್ಪವೃಷ್ಟಿ ಹಾಗೂ ಮಂಗಳಾರತಿ ನೆರವೇರಿಸಿ ಚಾಲನೆ ನೀಡಿದರು.
ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶ್ರೀ ಸುಮಧ್ವ ವಿಜಯ ಪಾರಾಯಣ, ಪಂಡಿತರಿಂದ ಉಪನ್ಯಾಸ ನೆರವೇರಿತು.
ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Comments
Post a Comment