ಕಿರು ಗ್ರಂಥಾಲಯದಿಂದ ಮಕ್ಕಳಿಗೆ ಜ್ಞಾನ ದೊರೆಯುತ್ತದೆ: ಧರ್ಮೋ ರಕ್ಷತಿ ರಕ್ಷಿತಾ- ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥರು.


ಕಿರು ಗ್ರಂಥಾಲಯದಿಂದ ಮಕ್ಕಳಿಗೆ ಜ್ಞಾನ ದೊರೆಯುತ್ತದೆ:     
     ಧರ್ಮೋ ರಕ್ಷತಿ ರಕ್ಷಿತಾ- ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥರು.               
ರಾಯಚೂರು,ಜ.31- ಧರ್ಮೋ ರಕ್ಷತಿ ರಕ್ಷಿತಾ ಎಂಬ ಉಕ್ತಿಯಂತೆ ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಶ್ರೀ ಪಾದಂಗಳವರು ನುಡಿದರು.                                 ಅವರಿಂದು ನಗರದಲ್ಲಿ ಕಾಡ್ಲೂರು ದೇಸಾಯರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ  ನಾವೆಲ್ಲರೂ ನಮ್ಮ  ಧರ್ಮ ಪಾಲನೆ ಪೋಷಣೆ ಮಾಡಬೇಕೆಂದ ಅವರು ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಂತೆ ಕಿರಿಯರು ಸಾಗಬೇಕು, ಗುರು ಹಿರಿಯರನ್ನು ಗೌರವಿಸುವ ಪರಿಪಾಟ ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕೆಂದರು.   

                 ಮನೆಯಲ್ಲಿ ಸಾತ್ವಿಕ ನಡೆ ನುಡಿಗಳನ್ನು ರೂಡಿಸಿಕೊಳ್ಳಬೇಕೆಂದ ಅವರು ಸನ್ಮಾರ್ಗದತ್ತ ಸಾಗಬೇಕು ದೇವರ ಚಿಂತನೆ ನಮ್ಮ ಆದ್ಯತೆಯಾಗಬೇಕೆಂದರು.                             
ಕಿರು ಗ್ರಂಥಾಲಯಕ್ಕೆ ಭೇಟಿ: ಮನೆಯ ಆವರಣದಲ್ಲಿ ಕಾಡ್ಲೂರು ಸಂಸ್ಥಾನ ಮತ್ತು "ರಂಗದೇ" ವತಿಯಿಂದ ಸ್ಥಾಪಿಸಲಾಗಿರುವ ಕಿರು ಗ್ರಂಥಾಲಯ ವೀಕ್ಷಿಸಿದ ಅವರು ಗ್ರಂಥಾಲಯದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಭಾರತ ಭಾರತಿ ಸಂಪದದ ವಿವಿಧ ಮಹಾನ ಪುರುಷರ, ದಾರ್ಶನಿಕರ, ಸ್ವಾತಂತ್ರ ಹೋರಾಟಗಾರರ ನೂರಾರು ಪುಸ್ತಕಗಳು ಇಲ್ಲಿ ಇರಿಸಿದ್ದು ಅವುಗಳನ್ನು ಓದುವುದರಿಂದ ಜ್ಞಾನ ದೊರೆಯುತ್ತದೆ ಮಕ್ಕಳಿಗೆ ಉಚಿತವಾಗಿ ಓದಲು ಅವಕಾಶವಿದ್ದು ಅದರ ಸದುಪಯೋಗಕ್ಕೆ ಕರೆ ನೀಡಿದರು. 

                                                    ಈ ಸಂದರ್ಭದಲ್ಲಿ ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ, ಆನಂದ ಕುಲಕರ್ಣಿ , ವಿಷ್ಣೂತೀರ್ಥ ಸಿರವಾರ, ಸುವರ್ಣಬಾಯಿ ದೇಸಾಯಿ, ಬಿಂದು, ಪಲ್ಲವೀ, ಲಕ್ಷ್ಮಿ  ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ