ಮನುಕುಲದ ಮಹಾನ ದಾರ್ಶನಿಕರು ಶ್ರೀಮನ್ಮಧ್ವಾಚಾರ್ಯರು


 ಮನುಕುಲದ ಮಹಾನ ದಾರ್ಶನಿಕರು ಶ್ರೀಮನ್ಮಧ್ವಾಚಾರ್ಯರು

ಪಾಜಕ ಎಂಬ ಕ್ಷೇತ್ರದಲ್ಲಿ 1238 ರಲ್ಲಿ ಮದ್ಯಗೇಹ ಭಟ್ಟರು ಮತ್ತು ವೇದಾವತಿ ಎಂಬ ಗುಣೋಪೇತ ದಂಪತಿಗಳಿಗೆ ಮೊದಲನೆಯ ಎರೆಡು ಮಕ್ಕಳ ಅಕಾಲ ಮೃತುವಿನ ಬಳಿಕ ಹನ್ನೆರಡು ವರ್ಷಗಳ ಸುದೀರ್ಘ ಪ್ರಾರ್ಥನೆಯ ಫಲವಾಗಿ ಅನಂತೇಶ್ವರನ ಅನುಗ್ರಹದಿಂದ ಜನಿಸಿದ ಪುತ್ರರತ್ನರೆ ವಾಸುದೇವಾಚಾರ್ಯ (ಶ್ರೀಮನ್ಮಧ್ವಾಚಾರ್ಯ) ಪೂರ್ವಾಶ್ರಮದ ಹೆಸರು.

ಬಾಲ್ಯದಲ್ಲಿ ಅಸಾಧಾರಣ ತೇಜಸ್ಸುಳ್ಳವರಾಗಿದ್ದರು ಭಾಗವತ ಸಂಪ್ರದಾಯ ಆಚರಣೆಯಲ್ಲಿ ಅಮಿತೋತ್ಸಾಹ, ಜ್ಞಾನಾರ್ಜನಾ ತವಕ, ವಿಚಾರ ಸ್ವಾತಂತ್ರ, ಪ್ರಬಲ ಜ್ಞಪಕಶಕ್ತಿ, ಆಕರ್ಷಣೀಯ ಹಾಗೂ ವಿಶ್ವಾಸದಾಯಕವಾದ ವ್ಯಕ್ತಿತ್ವ , ದರ್ಶನ ಮಾತ್ರದಿಂದಲೆ ಗೌರವಾಂಕುರಗೊಳಿಸುವ ಕಾಯ, ದಿವ್ಯ ಸುಂದರಕಾಂತಿವುಳ್ಳ ನೇತ್ರಗಳು ಇವೆಲ್ಲಾ ಗುಣಗಳು ನವ ಮತ ಸಂಸ್ಥಾಪಕರಿಗಿದ್ದ ಅಂಶಗಳು.


ರಾಜಕಾರಣದಲ್ಲಾಗಲಿ, ದೈವಿಕ ವಿಚಾರದಲ್ಲಾಗಲಿ ಕಾಲಬಾರದೆ ಧೀರರಾಗಲು ಸಾದ್ಯವಿಲ್ಲ ಎಂಬ ಸತ್ಯದ ನುಡಿಯಂತೆ ವಾಸುದೇವಾಚಾರ್ಯರು ತಮ್ಮ ಐದನೆ ವರ್ಷದಲ್ಲಿ ಉಪನಯನ ಸಂಸ್ಕಾರವನ್ನು ಹೊಂದಿ ಬಹುಬೇಗನೆ ಸಕಲ ಶಾಸ್ತçಗಳನ್ನು ತಿಳಿದು ಮನಗೊಂಡು ಅಗ ತುಳುನಾಡಿನಲ್ಲಿ ಪ್ರಖ್ಯಾತರಾಗಿದ್ದ ಯತಿವರ್ಯ ಅಚ್ಯುತ ಪ್ರೇಕ್ಷಾಚಾರ್ಯರ ಶಿಷ್ಯರಾಗಿ ಸನ್ಯಾಸದೀಕ್ಷೆಯನ್ನು ಕೈಗೊಳ್ಳಲು ಸಿದ್ದರಾದರು.

ಆದರೆ ಮದ್ಯಗೇಹ ದಂಪತಿಗಳಿಗೆ ಮೊದಲನೆಯ ಎರೆಡು ಮಕ್ಕಳು ತೀರಿಕೊಂಡಿದ್ದರಿಂದ ಏಕಮಾತ್ರ ಪುತ್ರನನ್ನು ಸನ್ಯಾಸ ದೀಕ್ಷೆ ಪಡೆಯಲು ಒಪ್ಪಿಗೆ ನೀಡಲಿಲ್ಲ, ಅದಕ್ಕೆ ವಾಸುದೇವಾಚಾರ್ಯರಿಗೆ ಸಹೋದರ ಹುಟ್ಟಿದ ಬಳಿಕ ವಾಸುದೇವಾಚಾರ್ಯರ ಮೇಲೆ ಇದ್ದ ಮೋಹ ಕರಗಿ ಮದ್ಯಗೇಹ ದಂಪತಿಗಳು ಸನ್ಯಾಸ ದೀಕ್ಷೆಗೆ ಅಪ್ಪಣೆ ನೀಡಿದರು. 

ಗುರುಗಳಾದ ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸಾಶ್ರಮವನ್ನು ಹೊಂದಿ "ಪೂರ್ಣಪ್ರಜ್ಞ" ಎಂಬ ನವನಾಮಧ್ಯೇಯವನ್ನು ಹೊಂದಿದರು ಆಮೇಲೆ ಅವರ ಅಸಾಧಾರಣ ಪ್ರತಿಭೆಗೆ ಒಂದು ದಿನ ಅಚ್ಯುತಪ್ರೇಕ್ಷಾಚಾರ್ಯರು ಮೆಚ್ಚಿ "ಆನಂದತೀರ್ಥ" ರೆಂಬ ಬಿರುದನ್ನು ಕೊಟ್ಟರು 'ಮಧÀ್ವ' ಎಂಬುದು ಆನಂದತೀರ್ಥ ಎಂಬುದರ ಪರ್ಯಾಯ ಪದ ಮಧ್ವಾಚಾರ್ಯ ಎಂಬುದೆ ಹೆಚ್ಚಾಗಿ ಬಳಕೆಗೆ ಬಂತು.


ಸನ್ಯಾಸವನ್ನು ಸ್ವೀಕರಿಸಿದ ಮದ್ವಾಚಾರ್ಯರು ದಕ್ಷಿಣ ಕ್ಷೇತ್ರಕ್ಕೆ ಹೊರಟು ಪುಣ್ಯಕ್ಷೇತ್ರ,ತೀರ್ಥಗಳನ್ನು ಸಂದರ್ಶಿಸುತ್ತಾ ದ್ವೆöÊತ ಪ್ರಚಾರವನ್ನು ಮಾಡಿದರು. ಶ್ರೀಮದಾಚಾರ್ಯರು ಸರ್ವ ಮತ ಸಹಿಷ್ಣುತೆಯ ಹೃದಯವೈಶಾಲ್ಯದಿಂದ ಕೂಡಿದ್ದರು. 

ಶ್ರೀಮಧ್ವಾಚಾರ್ಯರು ದಕ್ಷಿಣ ಭಾರತದಲ್ಲಿ ತಮ್ಮ ಮತ ಪ್ರಚಾರ ಮಾಡಿ ಉಡುಪಿಗೆ ಬಂದು ನಂತರ ತೀರ್ಥಯಾತ್ರೆ ಮತ್ತು ಮತಪ್ರಚಾರ ಮಾಡುತ್ತ ಕಾಶಿ, ಪ್ರಯಾಗಾದಿಗಳನ್ನು ದಾಟಿ ಬದರಿಕಾಶ್ರಮವರೆಗೂ ಹೋದರು. 

ಅಲ್ಲಿದ್ದ ಸಕಲ ಶಾಸ್ತçವೇತ್ತರುಗಳಾದ ಸನ್ಯಾಸಿಗಳೊಡನೆ ಮತ ಗ್ರಂಥಗಳ ವಿಚಾರ ವಿನಿಮಯ ಮಾಡಿ ಸ್ವಮತ ಸಮರ್ಥನೆಗಾಗಿ ಹೊಸ ಗ್ರಂಥ ಬರೆಯುವ ಸ್ಪೂರ್ತಿ ಹೊಂದಿದರು ,ಅಲ್ಲಿಂದ ದ್ವಾರಕೆಯ ಮುಖಾಂತರ ಆಗ ಗೋದಾವರಿ ನದಿ ತೀರದ ವರೆಗೂ ವಿಸ್ತರಿಸಿದ ಕರ್ನಾಟಕ ಪ್ರದೇಶಗಳನ್ನೆಲ್ಲ ಸಂಚರಿಸಿ ದ್ವೆöÊತ ಮತ ಪ್ರಚಾರ ಮಾಡಿದರು. ಖ್ಯಾತನಾಮರನ್ನು ವಾದಗಳಲ್ಲಿ ಮಣಿಸಿ ವಿನಯವಂತಿಕೆಯಿಂದ ವಿಜಯಿಗಳಾದರು.

ಮಧ್ವಾಚಾರ್ಯರು ತಮ್ಮ ಮೊದಲ ಅಖಿಲ ಭಾರತ ಸಂಚಾರವನ್ನು ಮುಗಿಸಿ ಉಡುಪಿಗೆ ಮರಳಿದರು. 

ಸೂರ್ಯೊದಯಕ್ಕೆ ಮುನ್ನ ಸಮುದ್ರ ಸ್ನಾನ ಮಾಡಿ ಇಂದಿನ ಮಲ್ಪೆಯ ಸಮೀಪದ ವಡಭಾಂಢೆಶ್ವರನ ಸನ್ನಿದಿಯಲ್ಲಿ ಜಪತಪಾದಿಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಒಂದು ದಿನ, ಹಿಂದಿನ ರಾತ್ರಿಯ ಬಿರುಗಾಳಿಗೆ ತುತ್ತಾಗಿ ಹಡಗೊಂದು ಆಳವಿಲ್ಲದ ಕಡಲಿನಿಂದ ದಂಡೆಗೆದೂಡಲ್ಪಟ್ಟು ನಿಂತು ಬಿಟ್ಟಿತ್ತು. 

ಹಡಗಿನ ನಾಯಕನು ಜನ ಸಹಾಯ ಯಾಚಿಸುವದಕ್ಕಾಗಿ ಕರೆಯಲು ಬಂದಾಗ ಮಧ್ವಾಚಾರ್ಯರನ್ನು ನೋಡಿ ಅವರ ಅನುಗ್ರಹ ಶಕ್ತಿಯಿಂದ ಹಡಗು ತಳಬಿಟ್ಟು ಆಳಕ್ಕೆ ಸರದೀತೆಂಬ ಆಶಯ ಮತ್ತು ದೃಡ ವಿಶ್ವಾಸದಿಂದ ಅಡ್ಡು ಬಿದ್ದು ಪ್ರಾರ್ಥಿಸಿದಾಗ, ವಾಯುದೇವರ ಪ್ರಾರ್ಥನೆಯಿಂದ ಬಲವಾದ ಅಲೆಯು ಹಡಗನ್ನು ರಾಜಹಂಸದಂತೆ ತೇಲುವಂತೆ ಮಾಡಿದರು.

ಇದರಿಂದ ಸಂತುಷ್ಠನಾದ ನಾವಿಕನು ಹಡಗಿನ ಸರಕಿನಲ್ಲಿದ್ದ ವಸ್ತುವನ್ನು ಕೊಡಲು ಬಂದಾಗ "ನಾನು ವಸ್ತು ಆಸೆಗಾಗಿ ಇದನ್ನು ಮಾಡಲಿಲ್ಲ ,ನನಗೆ ಯಾವುದೆ ಆಸೆಯಿಲ್ಲವೆಂದಾಗ ನಾವಿಕನು ವಸ್ತು ಬೇಡವೆಂದರೆ ಹಡಗಿನಲ್ಲಿರುವ ದ್ವಾರಕೆಯಿಂದ ತಂದ ಗೋಪಿಚಂದನ ಹೆಂಟೆಗಳು ನೀಡಿ ಇವುಗಳನ್ನು ನೀವು ಸ್ವೀಕರಿಸಲೆಬೇಕೆಂದು ವಿನಂತಿಸಿದಾಗ ಮದ್ವಾಚಾರ್ಯರು ಅವುಗಳನ್ನು ಸ್ವೀಕರಿಸಿದರು ನಂತರ ಅವುಗಳನ್ನು ಪರೀಕ್ಷೀಸಿದಾಗ ಹೆಂಟೆಯೊಂದರಲ್ಲಿ ಶಿಲಾ ನಿರ್ಮಿತವಾದ ಶ್ರೀಕೃಷ್ಣ ಮೂರ್ತಿ , ಮತ್ತೊಂದರಲ್ಲಿ ಬಲರಾಮ ಮೂರ್ತಿಗಳಿದ್ದವು, ಬಲರಾಮನ ಮೂರ್ತಿಯನ್ನು ಆ ಗ್ರಾಮದಲ್ಲಿ ಸ್ಥಾಪಿಸಲು ಗ್ರಾಮಸ್ಥರಿಗೆ ತಿಳಿಸಿ ಶ್ರೀಕೃಷ್ಣನನ್ನು ಉಡುಪಿಗೆ ತಂದು ಪ್ರತಿಷ್ಠಾಪಿಸಿದರು, ಹೀಗೆ ಶ್ರೀಕೃಷ್ಣನ ಪೂಜೆ ನಿರಂತರವಾಗಿ ನಡೆಯಲು ಆರಂಭಿಸಿದಾಗ ಶ್ರೀಮದಾಚಾರ್ಯರಿಗೆ ಮತ್ತೊಮ್ಮೆ ಬದರಿಕಾಶ್ರಮ ಯಾತ್ರೆಯನ್ನು ದ್ವೆöÊತ ಮತದ ಪ್ರಚಾರಕ್ಕೆಂದು ತೆರಳಬೆಕೆನ್ನಿಸಿತು.


ಮೊದಲೊಮ್ಮೆ ಹೊರಟಷ್ಟು ಸುಲಭವಾಗಿ ಈ ಸಲ ಹೊರಡಲಾಗುವುದೆ?

ಶ್ರಿಕೃಷ್ಣನ ಪೂಜೆಯು ದ್ವೆöÊತಮತ ಪ್ರಚಾರವು ಧರ್ಮಕಾರ್ಯಗಳು ನಿರಂತರವಾಗಿ ನಡೆಯುವಂತಹ ವ್ಯವಸ್ಥೆಯನ್ನು  ಮಾಡಿಟ್ಟು ಹೊರಡಬೇಕಾಯಿತು.

ಆದ್ದರಿಂದ ಅಖಂಡ ಬ್ರಹ್ಮಚರ್ಯದಂದಿದ್ದ ತಪೋನಿಷ್ಠರಾದ ,ಶಾಸ್ತçಜ್ಞಾನ ಸದ್ಗುಣಗಳಿಂದ ಕೂಡಿದ ಸಾಮರ್ಥ್ಯ ಉಳ್ಳವರನ್ನು ಸನ್ಯಾಸಿ ದಳವನ್ನು ಸಂಸ್ಥಾಪಿಸಿ ಹೊರಡುವುದು ಯುಕ್ತವೆಂದು ಆಚಾರ್ಯರಿಗೆ ತೋರಿತು. 

ಅವರ ಶಿಷ್ಯವರ್ಗದಲ್ಲಿ ಎಂಟು ಜನ ಉತ್ಸಾಹಿ ಯುವಕರಿಗೆ ಸನ್ಯಾಸಾಶ್ರಮವನ್ನು ಕೊಡಿಸಿ ಮಠದ ಕಾರ್ಯಭಾರವನ್ನು ನಿರ್ವಹಿಸಲು ಹೇಳಿ ಎರೆಡು ವರ್ಷದ ಸರದಿಯಂತೆ(ಪರ್ಯಾಯ) ನೆರವೇರಿಸಲು ತಿಳಿಸಿ ಲೋಕ ಕಲ್ಯಾಣಾರ್ಥವಾಗಿ ದ್ವೆöÊತಮತದ ಪ್ರಚಾರ ಮಾಡುತ್ತ ಸುಮಾರು 37 ಮಹಾ ಗ್ರಂಥಗಳನ್ನು ರಚಿಸಿದರು.

ಹೀಗೆ ಎರಡನೆ ಬಾರಿ ಬದರಿಕಾಶ್ರಮಕ್ಕೆ ಹೊರಟರು ಅಲ್ಲಿ ಬ್ರಹ್ಮಋಷಿಗಳ ಸಂಸರ್ಗದಲ್ಲಿದ್ದು ನಂತರ ಉಡುಪಿಗೆ ಮರಳಿದರು ಮತ್ತೊಮ್ಮೆ ಬದರಿಕಾಶ್ರಮಕ್ಕೆ  ತಮ್ಮ 79ನೆ ವಯಸ್ಸಿನಲ್ಲಿ (1317)ರ ಪಿಂಗಳನಾಮ ಸಂವತ್ಸರದ ಮಾಘ ಶುದ್ದ ನವಮಿಯಂದು ಕೊನೆಯ ದರ್ಶನ ನೀಡಿ ಪುಷ್ಪರಾಶಿ ರೂಪದಲ್ಲಿ ಅದೃಶ್ಯರಾದರು, ಅಂದಿನಿ0ದ ಈ ದಿನವನ್ನು ಮದ್ವನವಮಿಯಾಗಿ ಅಚರಿಸಲಾಗುತ್ತಿದೆ .

ಇಂದು ನವಮಿಯಂದು  ಎಲ್ಲಡೆ ಅವರ ಆರಾಧನೆಯನ್ನು ಭಜನೆ, ಸಂಕೀರ್ತನೆ, ಅವರು ರಚಿಸಿದ ಗ್ರಂಥಗಳನ್ನು ಪಠಿಸುತ್ತಾ ಅವರನ್ನು ಸ್ತುತಿಸಲಾಗುತ್ತದೆ. ತನ್ನಿಮಿತ್ಯ ಈ ಲೇಖನ.

  

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್