ಮಂತ್ರಾಲಯ: ಹೆಚ್ ಡಿ ಕುಮಾರಸ್ವಾಮಿ ದಂಪತಿ ಭೇಟಿ.
ಮಂತ್ರಾಲಯ: ಹೆಚ್ ಡಿ ಕುಮಾರಸ್ವಾಮಿ ದಂಪತಿ ಭೇಟಿ. ರಾಯಚೂರು,ಜ.29- ಮಾಜಿ ಸಿಎಂ ಹೆಚ್ .ಡಿ. ಕುಮಾರ ಸ್ವಾಮಿ ದಂಪತಿ ಸಹಿತ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು.
ಮಂಚಾಲಮ್ಮ ದೇವಿ ದರ್ಶನ ಪಡೆದ ಹೆಚ್ ಡಿ ಕುಮಾರ ಸ್ವಾಮಿ ಮತ್ತು ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ನಂತರ ರಾಯರ ಮೂಲ ಬೃಂದಾವನ ದರ್ಶನ ಪಡೆದರು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ತದ ನಂತರ ಗೋಶಾಲೆ, ಶ್ರೀ ಅಭಯ ಆಂಜನೇಯ, ಅಭಯ ಶ್ರೀ ರಾಮ ವಿಗ್ರಹ ನಿರ್ಮಾಣ ಸ್ಥಳ, ವಿಧ್ಯಾಪೀಠ ಮುಂತಾದೆಡೆ ಪೀಠಾಧಿಪತಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿ ಶ್ರೀಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Comments
Post a Comment