ವಾರ್ಡ್ ನಂ 17- ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆ ವಾಹನ ಸಂಚಾರಕ್ಕೆ ಅಡಚಣೆ


ವಾರ್ಡ್ ನಂ 17- ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆ  ವಾಹನ ಸಂಚಾರಕ್ಕೆ ಅಡಚಣೆ
                          ರಾಯಚೂರು,ಫೆ.21- ನಗರದ ವಾರ್ಡ್ ನಂ.17 ರಲ್ಲಿ ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.                               ತುಮ್ಮಾಪೂರು ಪೇಟೆ ಹನುಮಾನ್ ಟಾಕೀಸ್ ಬಳಿಯ ಮಾರೆಮ್ಮ ದೇವಸ್ಥಾನದ ಮಹಾದ್ವಾರ ನಿರ್ಮಾಣ ಹಿನ್ನಲೆ ಸಂಚಾರ ನಿರ್ಭಂಧಿಸಲಾಗಿದ್ದು ವಾಸವಿನಗರ ಮತ್ತು ಜವಾಹರ ನಗರ ಮುಂತಾದ ಬಡಾವಣೆಯಿಂದ ಬರುವವರು ಗಾಜಗಾರ ಪೇಟೆ ಉತ್ತರಾಧಿ ಮಠದ ಮುಂಭಾಗ ರಸ್ತೆಯಿಂದ ಸಂಚರಿಸಬೇಕು ಮತ್ತೊಂದು ರಸ್ತೆ ರಾಮನದೊಡ್ಡಿಯಿಂದ ಪಕೀರಪ್ಪ ಛತ್ರ ಮುಂಭಾಗದ ಮೂಲಕ ರಘೋತ್ತಮ ರಾವ್ ವಕೀಲರ ಮನೆ ಮುಂಭಾಗದ ರಸ್ತೆ ಹಾಗೂ ಕಾಡ್ಲೂರು ದೇಸಾಯಿಯವರ ಮನೆ ಮುಂಭಾಗದಿಂದ ಚೌಡಮ್ಮ ದೇವಿ ದೇವಸ್ಥಾನದ ಮುಂಭಾಗದಿಂದ ಸಂಚರಿಸಬೇಕು ಇದೀಗ ರಾಮನದೊಡ್ಡಿ ಪ್ರವೇಶಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ದ್ವಿಚಕ್ರ ವಾಹನಕ್ಕೆ ದಾರಿ ಬಿಡಲಾಗಿದೆ ಮತ್ತೊಂದೆಡೆ ರಘೋತ್ತಮ ರಾವ್ ಮನೆ ಮುಂದೆ ಸಾಗಿ ಮುಖ್ಯ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿಯೂ ದ್ವಿಚಕ್ರ ವಾಹನ ಸಂಚಾರಕ್ಕೆ ಬೇಕಾಗುವಷ್ಟು ಸ್ಥಳ ಮಾತ್ರ ಬಿಡಲಾಗಿದೆ ದೊಡ್ಡ ಸರಕು ಸಾಗಣೆ ವಾಹನ ಹೋಗುವುದನ್ನು ನಿರ್ಭಂದಿಸುವ ಧಾವಂತದಲ್ಲಿ ಇತರೆ ನಾಲ್ಕು ಚಕ್ರ ವಾಹನಗಳಿಗೆ ಪರ್ಯಾಯ ಮಾರ್ಗವಿಲ್ಲದೆ ಓಣಿಯಲ್ಲಿ ವಾಸಿಸುವವರ ಕಾರು ಮುಂತಾದ ವಾಹನ ಮಾಲಿಕರಿಗೆ ಭ್ಯಾರಿಕೇಡ್ ಅಳವಡಿಕೆಯಿಂದ ಪ್ರಯಾಸ ಪಟ್ಟು  ವಾಹನ ತೆಗೆದುಕೊಂಡು ಹೋಗುವ ಅನಿವಾರ್ಯತೆಯಿದೆ ರೋಗಿಗಳಿಗೆ ತುರ್ತು ಸಂದರ್ಬದಲ್ಲಿ ಆಸ್ಪತ್ರೆ ಹೋಗಬೇಕಾದಲ್ಲಿ ತೀರ್ವ ತೊಂದರೆಯಾಗಲಿದೆ ಈ ರೀತಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಯಾರು ಹಾಕಿದ್ದಾರೆ ಸಂಚಾರಿ ಪೊಲೀಸರೆ ಇದನ್ನು ಅಳವಡಿಸಿದ್ದಾರೆಯೇ ಅಥವಾ ಅವರ ಗಮನಕ್ಕೆ ತಾರದೆ ಬೇರೆಯವರು ಬ್ಯಾರಿಕೇಡ್ ಅಳವಡಿಸಿದ್ದಾರೆಯೆ ಎಂಬುದು ಯಕ್ಷ ಪ್ರಶ್ನೆಯಾಗಿದೆ .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್