ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಾಯರ 402 ನೇ ಪಟ್ಟಾಭಿಷೇಕ ಮಹೋತ್ಸವ: ರಾಘವೇಂದ್ರಸ್ವಾಮಿಗಳು ವಿಶ್ವಕ್ಕೆ ಪ್ರಭುಗಳು-ಶ್ರೀ ಸುಬುಧೇಂದ್ರತೀರ್ಥರು

 


ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಾಯರ 402 ನೇ ಪಟ್ಟಾಭಿಷೇಕ ಮಹೋತ್ಸವ:

ರಾಘವೇಂದ್ರಸ್ವಾಮಿಗಳು ವಿಶ್ವಕ್ಕೆ ಪ್ರಭುಗಳು-ಶ್ರೀ ಸುಬುಧೇಂದ್ರತೀರ್ಥರು

ರಾಯಚೂರು,ಫೆ.೨೨-ರಾಘವೇ0ದ್ರ ಸ್ವಾಮಿಗಳು ಸಮಸ್ತ ಜೀವರಾಶಿಗಳಿಗೂ ಒಳಿತನ್ನು ಬಯಸುವವರಾಗಿದ್ದು ಅವರು ವಿಶ್ವಕ್ಕೆ ಪ್ರಭುಗಳಾಗಿದ್ದಾರೆಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.

ಅವರಿಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಯರ ೪೦೨ನೇ ಪಟ್ಟಾಭಿಷೇಕ ಅಂಗವಾಗಿ ರಾಯರ ಮೂಲ ಪಾದುಕೆಗಳಿಗೆ ಅಭೀಷೇಕ ಮತ್ತು ಪುಷ್ಪ ವೃಷ್ಟಿ ನೆರವೇರಿಸಿ ರಾಯರ ಮೂಲ ಬೃಂದಾªನಕೆ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.


ರಾಯರು ಶ್ರೀ ಸುಧೀಂದ್ರತೀರ್ಥರಿ0ದ ಸನ್ಯಾಸತ್ವ ಸ್ವೀಕರಿಸಿ ನಂತರ ಪೀಠಾರೋಹಣ ಮಾಡಿದರು ತಂಜಾವೂರಿನ ರಾಜರ ಆಸ್ಥಾನದಲ್ಲಿ ರಾಜ ಮರ್ಯಾದೆಯೊಂದಿಗೆ ಪೀಠವನ್ನು ಅಲಂಕರಿಸಿ ಸನಾತನ ದ್ವೆöÊತ ಸಿದ್ದಾಂತವನ್ನು ಲೋಕದೆಲ್ಲಡೆ ಬೆಳಗಿ ಅಬಾಲ ವೃದ್ದರಾದಿಯಾಗಿ ಸಕಲ ಜೀವರಾಶಿಗಳಿಗೆ ಅನುಗ್ರಹಿಸಿದ ಕೀರ್ತಿ ಪುರುಷರು ರಾಘವೇಂದ್ರ ಸ್ವಾಮಿಗಳು ಎಂದರು.

ಶ್ರೀ ನಿವಾಸದೇವರಿಂದ ಅನುಗ್ರಹಿತರಾಗಿ ಶ್ರೀಮಧ್ವಾಚಾರ್ಯರ ತತ್ವಗಳನ್ನು ಪಸರಿಸಿದವರು ರಾಯರು ಎಂದ ಅವರು ಸತ್ಯ ಧರ್ಮಗಳಲ್ಲಿ ರತರಾಗಿ ಸುಮಾರು ೧೦೪ ಸ್ವಗ್ರಂಥಗಳನ್ನು ರಚಿಸಿ ವಿಧ್ವತ್ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದವರಾಗಿದ್ದು ಅವರು ಇಂದಿಗೂ ಜನರ ಕಷ್ಟ ಕಾರ್ಪಣ್ಯ ನೀಗಿಸುತ್ತಿದ್ದಾರೆಂದ ರು.

ರಾಯರು ತಮ್ಮ ಬೃಂದಾವನ ಪ್ರವೇಶ ನಂತರ ಯೋಗೀಂದ್ರತೀರ್ಥರಿಗೆ ತಮ್ಮ ಪಾದುಕೆಗಳ ಮೂಲಕ ಭಕ್ತರಿಗೆ ಅನುಗ್ರಹಿಸುತ್ತೇನೆಂದಿದ್ದರು , ಹೇಗೆ ಶ್ರೀ ರಾಮನು ವನವಾಸಕ್ಕೆ ಹೋದ ಸಂದರ್ಭದಲ್ಲಿ ಭರತ ರಾಮನ ಪಾದುಕೆಯನ್ನು ಪೂಜಿಸಿದನೋ ಹಾಗೇಯೆ ರಾಯರ ಪಾದುಕೆಯನ್ನು ಶ್ರೀ ಮಠದಲ್ಲಿ ನಿತ್ಯ ಪೂಜಿಸಲಾಗುತ್ತದೆ ಎಂದರು.


ದೇಶದಲ್ಲಿ ಶಾಂತಿ ಸಮೃದ್ಧಿ ನೆಲೆಗೊಳ್ಳಲಿ ಹಾಗೂ ಸಕಾಲದಲ್ಲಿ ಮಳೆ ಬೆಳೆ ಆಗಿ ರೈತಾಪಿ ಜನಕ್ಕೆ ಉತ್ತಮ ಫಸಲು ದೊರಕಲಿ ಎಂದು ಆಶೀರ್ವಚನ ನೀಡಿ ಇಂದು ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾರತ ಸರ್ಕಾರದ ನಿವೃತ್ತ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಆಗಮಿಸಿದ್ದು ಇನ್ನು ಅನೇಕ ರಾಜ್ಯಗಳಿಂದ ಅನೇಕ ಗಣ್ಯರು ಆಗಮಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆಂದರು.

ಅತಿಥಿಗಳಾಗಿ ಆಗಮಿಸಿದ ವೆಂಕಟರಮಣಿ ಮಾತನಾಡಿ ರಾಯರ ಸನ್ನಿದಾನಕ್ಕೆ ಬರುವುದು ನಮ್ಮ ಪೂರ್ವ ಜನ್ಮದ ಪುಣ್ಯ ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲಗೊಂಡಿದ್ದು ನನ್ನ ಸುದೈವವೆಂದ ಅವರು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಮಂತ್ರಾಲಯವನ್ನು ವಿಶೇಷವಾಗಿ ಅಭಿವೃದ್ದಿ ಪಡಿಸಿದ್ದು ದೇಶದುಗ್ಗಲಕ್ಕೂ ರಾಯರ ಮಠ ಸುಪರಿಚಿತವಾಗಿಸಿದ್ದಾರೆಂದರು. ಅನೇಕ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ  ಮಹಾಮಹೋಪಾದ್ಯಾಯರಾದ ಶ್ರೀ ರಾಜಾ ಎಸ್.ಗಿರಿಯಾಚಾರ್, ಪಂಡಿತರಾದ ವಾದಿರಾಜಾಚಾರ್ ಸೇರಿದಂತೆ ಅನೇಕರಿದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್