ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಖಂಡನೀಯ: ಸುಳ್ಳಿನ ಸರ್ದಾರ ಶಾಸಕ ಡಾ.ಶಿವರಾಜ ಪಾಟೀಲ- ರವಿ ಬೋಸರಾಜು
ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಖಂಡನೀಯ:
ಸುಳ್ಳಿನ ಸರ್ದಾರ ಶಾಸಕ ಡಾ.ಶಿವರಾಜ ಪಾಟೀಲ- ರವಿ ಬೋಸರಾಜು
ರಾಯಚೂರು,ಫೆ.೨೦-ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ನೀಡುವುದಾಗಿ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು ಅತ್ಯಂತ ಖಂಡನೀಯ ವಿಷಯವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಜೆಟ್ ವೇಳೆ ನಮ್ಮ ನಾಯಕರು ಕಿವಿಯಲ್ಲಿ ಹೂವು ಇಟ್ಟುಕೊಂಡು ಬಜೆಟ್ ವಿರೋಧಿಸಿದ್ದಾರೆ ನಾವು ಸಹ ಕಿವಿಯಲ್ಲಿ ಹೂವು ಇಟ್ಟುಕೊಂಡೆ ಸುದ್ದಿಗೋಷ್ಟಿಗೆ ಆಗಮಿಸಿದ್ದು ಜನರ ಕಿವಿ ಮೇಲೆ ಹೂವು ಇಡಲು ಸರ್ಕಾರ ಹೊರಟಿದೆ ಇದಕ್ಕೆ ಜನರು ತಕ್ಕ ಪಾಠ ಚುನಾವಣೆಯಲ್ಲಿ ಕಲಿಸಲಿದ್ದಾರೆಂದರು.
ಜಿಲ್ಲೆಗೆ ಏಮ್ಸ್ ಬದಲಾಗಿ ಏಮ್ಸ್ ಮಾದರಿ ಆಸ್ಪತ್ರೆ ನೀಡುವುದಾಗಿ ಹೇಳಿದ್ದು ಐಐಟಿ ರೀತಿಯಲ್ಲೆ ಏಮ್ಸ್ ಸಹ ಹುಬ್ಬಳ್ಳಿ ಧಾರವಾಡಕ್ಕೆ ಕೊಂಡ್ಯೋಯುವ ಹುನ್ನಾರವೆಂದ ಅವರು ಇದರ ವಿರುದ್ದ ಏಮ್ಸ್ ಹೋರಾಟ ಸಮಿತಿ ಫೆ.೨೩ ಕ್ಕೆ ರಾಯಚೂರು ಬಂದ್ ಗೆ ಕರೆ ನೀಡಿದ್ದು ಕಾಂಗ್ರೆಸ್ ಪಕ್ಷ ಸಹ ಬೆಂಬಲಿಸಲಿದೆ ಎಂದ ಅವರು ಬಜೆಟ್ ಪುಸ್ತಕ ಕಸದ ಗುಂಡಿಗೂ ಹಾಕಲು ಲಾಯಕ್ಕಿಲ್ಲವೆಂದು ಟೀಕಿಸಿದರು.
ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದು ಜನರನ್ನು ದಿಕ್ಕು ತಪ್ಪಿಸುವ ಕೆಲಸವೆಂದ ಅವರು ಬಜೆಟ್‌ನಲ್ಲಿ ನಿಖರವಾಗಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆರಿಸಲಾಗುತ್ತದೆ ಎಂದು ಹೇಳಿಲ್ಲ ಶಾಸಕರು ನಗರ ಜನತೆಗೆ ಸ್ಪಷ್ಟವಾಗಿ ತಿಳಿಸಬೇಕು ಸುಳ್ಳು ಹೇಳುತ್ತ ಸುಳ್ಳಿನ ಸರ್ದಾರರಾಗಿದ್ದಾರೆಂದರು.
ವಿಮಾನ ನಿಲ್ದಾಣ ಟೆಂಡರ್ ಪ್ರಕಿಯೆ ನಡೆದಿದೆ ಎಂದು ಹೇಳುತ್ತಾರೆ ಇದುವರಗೂ ವಿಮಾನ ನಿಲ್ದಾಣದ ಪರಿಮಿತಿಗೆ ಬರುವ ಸುಮಾರು ೨೪ ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿಲ್ಲ ಆ ಸ್ಥಳದಲ್ಲಿ ಈಗ ೬೦ ರಿಂದ ೭೦ ಕುಟುಂಬಗಳು ವಾಸವಿದ್ದು ಅವರಿಗೆ ಪರಿಹಾರ ನೀಡದೆ ಅವರನ್ನು ತೆರವುಗೊಳಿಸುವುದು ಸಾಧ್ಯವೆ ಎಂದರು.
ಚುನಾವಣೆ ಮಾದರಿ ನೀತಿ ಸಂಹಿತೆ ಬರುವದೊರಳಗಾಗಿ ವಿಮಾನ ನಿಲ್ದಾಣ ಟೆಂಡರ್ ಮುಗಿವುದಿಲ್ಲ ವಿಮಾನ ನಿಲ್ದಾಣ ಕನಸ್ಸು ನನಸಾಗುವುದಿಲ್ಲ ಇವರು ಜನರ ದಿಕ್ಕು ತಪ್ಪಿಸಲು ಹೇಳಿಕೆ ನೀಡುತ್ತಾರೆ ಎಂದ ಅವರು ಮೆಗಾ ಟೆಕ್ಸಟೈಲ್ ಪಾರ್ಕ ಸ್ಥಾಪನೆಯೂ ಸಹ ಜನರನ್ನು ಮರಳು ಮಾಡುವುದಾಗಿದೆ ಎಂದ ಅವರು ರಿಂಗ್ ರೋಡ್ ಬಗ್ಗೆ ಬಜೆಟ್‌ನಲ್ಲಿ ಚಕಾರವಿಲ್ಲ ಕೇಂದ್ರ ಸರ್ಕಾರದ ಹೆದ್ದಾರಿ ಕಾಮಗಾರಿಯನ್ನೆ ರಿಂಗ್ ರಸ್ತೆ ಎಂಬ0ತೆ ಬಿಂಬಿಸುವು ಕಾರ್ಯ ಶಾಸಕರು ಮಾಡುತ್ತಿದ್ದಾರೆಂದು ದೂರಿದರು.
ನಗರದ ರಸ್ತೆಗಳು ಡಾಂಬರಿಕರಣವಾಗುತ್ತಿವೆ ಆದರೆ ಕಳಪೆ ಕಾಮಗಾರಿಯಿಂದ ರಸ್ತೆಗಳ ಬಾಳಿಕೆ ಧೀರ್ಘವಾಗಿ ಉಳಿಯುತ್ತಿಲ್ಲವೆಂದ ಅವರು ಶೇ.೪೦ ರಷ್ಟು ಭಷ್ಟಾಚಾರದಿಂದ ಕಾಮಗಾರಿಗಳು ಹಳ್ಳಹಿಡಿದಿವೆ ಎಂದ ಅರೋಪಿಸಿದ ಅವರು ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವವಿದ್ದು ಈ ಬಗ್ಗೆ ಗಮನ ಹರಿಸಬೇಕು ಮತ್ತೊಂದೆಡೆ ಈ ಹಿಂದೆ ಕಲುಷಿತ ನೀರು ಸೇವನೆಯಿಂದ ಜನರ ಮೃತ ಪಟ್ಟ ಘಟನೆ ಮರುಕಳೀಸುವ ಸಾಧ್ಯತಯಿದ್ದು ಎಲ್‌ಬಿಎಸ್ ನಗರದಲ್ಲಿ ಕುಡಿಯುವ ನೀರಿನಲ್ಲಿ ಒಳ ಚರಂಡಿ ನೀರು ಸೇರುತ್ತಿದ್ದು ಜನರಿಗೆ ಶುದ್ಧ ಕುಡಿಯುವ ನೀರು ನೀಡಲು ಈ ಸರ್ಕಾರಕ್ಕೆ ಆಗುತ್ತಿಲ್ಲವೆಂದರು.
ಕೆಲ ಕೊಳಚೆ ಬಡಾವಣೆಯಲ್ಲಿ ಬಡವರಿಗೆ ಹಕ್ಕು ಪತ್ರ ನೀಡುತ್ತಿರುವುದು ಕೇವಲ ತೋರಿಕೆಗಾಗಿ ಎಂದು ಆಪಾಧಿಸಿದ ಅವರು ನಮ್ಮ ಪಕ್ಷದ ಈಶಪ್ಪನವರು ಬೆನ್ನಿಗೆ ಚೂರಿ ಹಾಕಿದ್ದಾರೆಂದು ಹೇಳುತ್ತಾರೆ ಇವರು ಕ್ಷೇತ್ರದ ಮತದಾರರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆಂದರು.
ಇತ್ತೀಚೆಗೆ ನಗರಕ್ಕೆ ಆಗಮಿಸಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು
ಶಿವರಾಜ ಪಾಟೀಲರವರನ್ನು ಟೋಪಿವಾಲವೆಂದು ಸಂಭೋಧಿಸಿದ್ದು ಸರಿಯಾಗಿಯೆ ಇದೆ ಅವರು ಎಲ್ಲರ ಮೇಲೂ ಟೋಪಿ ಹಾಕುವ ವ್ಯಕ್ತಿಆಗಿದ್ದಾರೆಂದು ಸುದ್ದಿಗೋಷ್ಟಿಯಲ್ಲಿ ಟೋಪಿ ಪ್ರದರ್ಶೀಸಿದರು.
ಕಾಂಗ್ರೆಸ್ ಸರ್ಕಾರ ಓಪೆಕ್ ರಾಷ್ಟçಗಳ ನೆರವಿನಿಂದ ಸ್ಥಾಪಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶಾಸಕರು ದುಸ್ಥಿತಿಗೆ ತಂದಿದ್ದಾರೆ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರಾಮದಾಸ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಓಪೆಕ್ ಆಸ್ಪತ್ರೆಯನ್ನು ರಿಮ್ಸ್ ಬೋಧಕ ಆಸ್ಪತ್ರೆಯನ್ನಾಗಿಸಿ ಅದಕ್ಕೆ ತಿಲಾಂಜಲಿ ನೀಡಿದರು ಅದನ್ನು ನಾವು ಅನೇಕ ಬಾರಿ ಪ್ರಶ್ನಿಸಿದ್ದೇವೆಂದರು.
ಈ ಸಂದರ್ಭದಲ್ಲಿ ಸಾಜಿದ ಸಮೀರ, ನರಸಿಂಹಲು ಮಾಡಗಿರಿ,ಈಶಪ್ಪ, ತಿಮ್ಮಾರೆಡ್ಡಿ,ನರಸರೆಡ್ಡಿಇದ್ದರು
Comments
Post a Comment