ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನಗಳ ಅಭಿವೃದ್ಧಿ ಕಾರ್ಯಕ್ರಮ : ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದೇವೆ: ಪ್ರೊ.ಹರೀಶ ರಾಮಸ್ವಾಮಿ
ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನಗಳ ಅಭಿವೃದ್ಧಿ ಕಾರ್ಯಕ್ರಮ:
ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದೇವೆ- ಪ್ರೊ.ಹರೀಶ ರಾಮಸ್ವಾಮಿ
ರಾಯಚೂರು,ಫೆ.೨೧- ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮಲ್ಲಿ ಅತ್ಯುತ್ತಮವಾದ ಶಿಕ್ಷಣ ವ್ಯವಸ್ಥೆಯನ್ನು ನಾವು ಹೊಂದಿದ್ದು, ಇದೀಗ ಶಿಕ್ಷಣದಲ್ಲಿ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ವಿಷಯಗಳನ್ನು ಸೇರಿಸಿದ್ದು, ವಿದ್ಯಾರ್ಥಿಗಳಿಗೆ ಇದು ತುಂಬಾ ಅನುಕೂಲವಾಗಲಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅವರು ಹೇಳಿದರು.
ಅವರಿ0ದು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಯಚೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಅಕಾಡೆಮಿ ಮುಂಬೈ ವತಿಯಿಂದ ಹಮ್ಮಿಕೊಂಡಿದ್ದ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನದ ಅಭಿವೃದ್ಧಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಗಾಂಧಿ ಅವರು ದೇಶದಲ್ಲಿ ಸುಂದರವಾದ ಶಿಕ್ಷಣ ವೃಕ್ಷವಿದೆ ಎಂದು ಹೇಳಿದ್ದು, ಅಂತಹ ವೃಕ್ಷವನ್ನು ಬೆಳೆಸುವ ಕಾರ್ಯವನ್ನು ಈಗಿನ ಶಿಕ್ಷಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮಾಡಬೇಕಾಗಿದೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದ್ದಲ್ಲಿ ನಮ್ಮ ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ ಎಂದರು.
ಪ್ರಾಚೀನ ಕಾಲದಿಂದಲೂ ಗಣಿತದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದ್ದು, ಮಗ್ಗಿ ಹೇಳುವುದು, ಅಂಗಡಿಗಳಲ್ಲಿ ಬಾಯಿಂದಲೇ ಲೆಕ್ಕವನ್ನು ಹೇಳುವುದು ಯಾವುದೇ ಕಾಗದ, ಪೆನ್ಸಿಲ್ ಅಥವಾ ಈಗಿನ ಕ್ಯಾಲ್ಯೂಕೇಟರ್ ಬಳಸದೇ ಲೆಕ್ಕವನ್ನು ಸರಾಗವಾಗಿ ಮಾಡಿ ಹೇಳುತ್ತಿದ್ದರು.
ಸಂಪತ್ತನ್ನು ಸೃಷ್ಠಿಸುವ ಬಗ್ಗೆ ನಾವೆಲ್ಲರೂ ಕೇಳಿರುತ್ತವೆ ಆದರೆ ಆ ಸಂಪತ್ತು ಸೃಷ್ಠಿಗೆ ದಾರಿಯೇ ಈ ಷೇರು ಮಾರುಕಟ್ಟೆ ಅಥವಾ ಷೇರು ವಿನಿಮಯವಾಗಿದೆ ಆದ್ದರಿಂದ ಈ ಹಣಕಾಸು ಶಿಕ್ಷಣದ ಬಗ್ಗೆ ಹಾಗೂ ಹೂಡಿಕೆಯ ಜಾಗೃತಿ ಕುರಿತು ಎರಡುದಿನದ ಕಾರ್ಯಗಾರದಲ್ಲಿ ಉತ್ತಮವಾದ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಹೆಚ್ಚಿನ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಪ್ರೊ.ವಿಶ್ವನಾಥ ಮಾತನಾಡಿ, ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ಹಣಕಾಸು ಶಿಕ್ಷಣ ಹಾಗೂ ಹೂಡಿಕೆಯ ಬಗ್ಗೆ ಜಾಗೃತಿಯನ್ನು ಹೊಂದಬೇಕು ಅದಕ್ಕಾಗಿ ಮೊದಲು ಶಿಕ್ಷಕರು ಜಾಗೃತರಾಗಬೇಕು ಎಂದರು.
ಎರಡುದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ ಶಿಕ್ಷಕರು ಜ್ಞಾನೋದಯ, ಜ್ಞಾನವನ್ನು ಬಲಪಡಿಸುವುದು ಹಾಗೂ ಜಾರಿಗೊಳಿಸುವ ಕುರಿತು ಹೆಚ್ಚಿನ ಮಾಹಿತಯನ್ನು ಪಡೆದುಕೊಂಡು, ಹೆಚ್ಚಿನ ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯ ನಿರ್ವಹಿಸಬೇಕು. ಈ ಎಲ್ಲಾ ವಿಷಯಗಳನ್ನು ಗಂಬೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಮೌಲಮಾಪನ ವಿಭಾಗದ ರಿಜಿಸ್ಟಾçರ್ ಪ್ರೊ.ಎಮ್.ರ‍್ರಿಸ್ವಾಮಿ ಮಾತನಾಡಿ, ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕೇವಲ ಶಿಕ್ಷಣವಾಗದೇ ಪ್ರತಿಯೊಬ್ಬರ ವಿದ್ಯಾರ್ಥಿಯಲ್ಲಿಯೂ ಕೌಶಲ್ಯವಾಗಿ ಮಾರ್ಪಾಡಾಗಬೇಕು ಈನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಮಕ್ಕಳಲ್ಲಿ ಹಣಕಾಸು ಶಿಕ್ಷಣವನ್ನು ಕೌಶಲ್ಯವನ್ನಾಗಿ ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಅಕಾಡೆಮಿ ಚನೈನ ಹೆಚ್ಚುವರಿ ವ್ಯವಸ್ಥಾಪಕ ಗೋಕುಲನಾಥ ರಾಜಾ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಅಕಾಡೆಮಿ ಮುಂಬೈನ ಹೆಚ್ಚುವರಿ ವ್ಯವಸ್ಥಾಪಕ ರಾಘವೇಂದ್ರ.ಎಸ್, ವಿವಿಯ ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಡಾ.ರಾಘವೇಂದ್ರ ಫತ್ತೆಪೂರ, ಪ್ರಾಂಶುಪಾಲರಾದ ಡಾ.ಯಂಕಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಸಾವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment