ಮಂತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ: ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂಗೆ ಮನವಿ ಮಾಡುತ್ತೇವೆ- ಶ್ರೀ ಸುಬುಧೇಂದ್ರತೀರ್ಥರು


ಮಂತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ:

ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂಗೆ ಮನವಿ ಮಾಡುತ್ತೇವೆ- ಶ್ರೀ ಸುಬುಧೇಂದ್ರತೀರ್ಥರು

ರಾಯಚೂರು,ಫೆ.೨೨- ಬಜೆಟ್‌ನಲ್ಲಿ ರಾಯಚೂರಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಮಾಡಿದ್ದು ಆದರೆ ಅನೇಕ ದಿನಗಳಿಂದ  ಏಮ್ಸ್ ಗಾಗಿ ಹೋರಾಟ ನಡೆದಿದ್ದು ಆದ್ದರಿಂದ ಸರ್ಕಾರ ಏಮ್ಸ್ ನೀಡಬೇಕು ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಮಂತ್ರಾಲಯ ಶ್ರೀ ರಾಘವೇಂದದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.

ಅವರಿಂದು ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ಏಮ್ಸ್ ಬಗ್ಗೆ ಪ್ರತಿಕ್ರಯಿಸಿ ಏಮ್ಸ್ ಆಸ್ಪತ್ರೆ ಸ್ಥಾಪನೆಯಿಂದ ಈ ಭಾಗಕ್ಕೆ ಆರೋಗ್ಯ ಸೌಕರ್ಯ ದೊರೆಯುತ್ತದೆ ಅಲ್ಲದೆ ಈ ಭಾಗದ ಅಭಿವೃದ್ದಿಯೂ ಆಗುತ್ತದೆ ಎಂದರು.

ಮ0ತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ ಚಿಂತನೆಯಿದ್ದು ಯಾರಾದರು ಉದ್ಯಮಿಗಳು ಮುಂದೆ ಬಂದು ಮಿನಿ ಏರ್‌ಪೋರ್ಟ್ ನಿರ್ಮಾಣಕ್ಕೆ ಮುಂದಾದರೆ ಸಕಲ ಸಹಕಾರ ನೀಡಲಾಗುತ್ತದೆ ಈಗಾಗಲೆ ಪ್ರಜಕ್ಟ್ ರಿಪೋರ್ಟ್ ಸಿದ್ದಪಡಿಸಲಾಗುತ್ತಿದೆ ಅದು ಬಂದ ನಂತರ ಮುಂದಿನ ಹೆಜ್ಜೆಯಿರಿಸಲಾಗುತ್ತದೆ ವಿಮಾಣ ನಿಲ್ದಾಣ ನಿರ್ಮಾಣದಿಂದ ಭಕ್ತರಿಗೆ ದೂರದ ಊರುಗಳಿಂದ ಮಂತ್ರಾಲಯಕ್ಕೆ ತಲುಪಲು ಅನುಕೂಲವಾಗುತ್ತದೆ ಎಂದರು.

ಬೆಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ವಿವಿಧ ಮಠಗಳ ಸ್ವಾಮೀಜಿಗಳೊಂದಿಗೆ ಉಡುಪಿಯಲ್ಲಿ ಸಂತ ಮಂಥನ ಕಾರ್ಯಕ್ರಮ ಆಯೋಜಿಸಿದ್ದು ನಮ್ಮ ಭಾಗದಲ್ಲಿ ಅದನ್ನು ಆಯೋಜಿಸಿದಾಗ ಭಾಗವಹಿಸುತ್ತೇವೆಂದ ಅವರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜಟಾಪಟಿ ಸರಿಯಲ್ಲ ಸರ್ಕಾರ ಅದನ್ನು ಗಮನಿಸಿ ಬಗೆಹರಿಸುತ್ತದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳ ನಾಯಕರು ಪರಸ್ಪರ ತೇಜೋವಧೆ ಮಾಡದೆ ಶಾಂತಿಯುತವಾಗಿ ಚುನಾವಣೆ ಎದುರಿಸಬೇಕು ತಾವು ಧಾರ್ಮಿಕ ಗುರುಗಳಾಗಿ ರಾಜಕೀಯ ಮಾತನಾಡುವುದಿಲ್ಲ ಎಲ್ಲ ಪಕ್ಷಗಳ ನಾಯಕರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆಂದರು.

ಗುರುರಾಯರ ೪೦೨ ನೇ ಪಟ್ಟಾಭೀಷೇಕ ಇಂದಿನಿ0ದ ನಡೆಯುತ್ತಿದ್ದು ಇಂದು ರಾಯರ ಸುವರ್ಣಮಯ ಪಾದುಕೆಗೆ ಅಭೀಷೇಕ ನೆರವೇರಿಸಿ ಪುಷ್ಟ ವೃಷ್ಟಿ ಮಾಡಿ ಪೂಜಿಸಲಾಗಿದೆ ಫೆ.೨೬ರಂದು ರಾಯರ ೪೨೮ನೇ ವರ್ಧಂತಿ ಉತ್ಸವ ನಡೆಯಲಿದ್ದು ಒಂದು ವಾರದವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಇಂದು ಭಾರತ ದೇಶದ ನಿವೃತ್ತ ಅಟಾರ್ನಿ ಜನರಲ್ ವೆಂಕಟರಮಣಿ ಸೇರಿದಂತೆ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯದ ಕುಲಪತಿಗಳು ಆಗಮಿಸಿದ್ದಾರೆ ಎಂದರು.

ನಿನ್ನೆ ತೆಲುಗಿನ ಖ್ಯಾತ ನಟ ಜಿ.ರಾಜೇಂದ್ರ ಪ್ರಸಾದ್ ಆಗಿಮಿಸಿ ರಾಯರ ಅನುಗ್ರಹ ಪಡೆದರು ಹೀಗೆ ಒಂದು ವಾರಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಖ್ಯಾತ ನಾಯಕ ನಟ ಶಿವರಾಜ ಕುಮಾರ್ ,ರಾಜ್ಯಸಭೆ ಸದಸ್ಯ ಹಾಗೂ ನಾಯಕ ನಟ ಜಗ್ಗೇಶ್, ನಾಯಕ ನಟಿ ರಚಿತಾರಾಮ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ