ಕೃಷ್ಣ ಸೇತುವೆ ದುರಸ್ಥಿ : ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ - ಅಮರೇಶ್ವರ ನಾಯಕ


ಕೃಷ್ಣ ಸೇತುವೆ ದುರಸ್ಥಿ : ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ - ಅಮರೇಶ್ವರ ನಾಯಕ
ರಾಯಚೂರು,ಫೆ.24- ರಾಜಾ ಅಮರೇಶ್ವರ ನಾಯಕ, , ಕೃಷ್ಣ ನದಿಯ ಸೇತುವೆ ಮೇಲೆ ನಡೆದಿರುವ ರಸ್ತೆ ದುರಸ್ತಿ  ಕಾಮಗಾರಿ ಸ್ಥಳಕ್ಕೆ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ   ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.                                   ಅಲ್ಲಿರುವ ರಾಷ್ಟ್ರೀಯ ಹೆದ್ದಾರಿ 167 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮತ್ತು ಇಂಜಿನಿಯರಿಂಗ್ ಗಳಿಗೆ  ಸದರಿ ಸೇತುವೆಯ ಪೂರ್ಣ 750 ಮೀಟರ್ ಉದ್ದ ಹಾಗೂ 5.50  ಮೀಟರ್ ಕೆ ಹಾಕುತ್ತಿರುವ ಬಿ. ಸಿ.  ಕಾಮಗಾರಿಯನ್ನು ಉತ್ತಮವಾಗಿ ಹಾಗೂ ನಿಗದಿತ ಅವಧಿ ಫೆ.25ರ  ಒಳಗಾಗಿ 25-02-ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸೂಚನೆ ನೀಡಿದರು.  ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ರಾಷ್ಟ್ರೀಯ ಹೆದ್ದಾರಿ ಇವರು ಸದರಿ ಕಾಮಗಾರಿಯನ್ನು ಉತ್ತಮವಾಗಿ ಹಾಗೂ ನಿಗದಿತ ಸಮುದೊಳಗೆ ಪೂರ್ಣಗೊಳಿಸಲಾಗುವದು ಎಂದು ಭರವಸೆ ನೀಡಿದರು. ನಂತರ ಈ  ಈ ಸೇತುವೆಯ, ದುರಸ್ತಿ ಕಾಮಗಾರಿ ಬಾಳಿಕೆಗಾಗಿ ತಮಗೆ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ನ್ಯಾಷನಲ್ ಹೈವೇ ಡಿವಿಜನ್ ಚಿತ್ರದುರ್ಗ ಇವರಿಂದ ರಾಷ್ಟ್ರೀಯ ಹೆದ್ದಾರಿ ತಾಂತ್ರಿಕ  ಅಭಿಯಂತರರುಗಳ ವರದಿ ಬಂದಿದ್ದು, ಸದರಿ ಸೇತುವೆಯ ರಸ್ತೆ ದುರಸ್ತಿಯು ಫಲಪ್ರದವಾಗಲು ಹಾಗೂ  ಬಾಳಿಕೆಗಾಗಿ ಈ ಕೆಳಗಿನ ಕೆಲವು ಕ್ರಮಗಳನ್ನು  ಪಾಲಿಸಲು ಕೋರಿರುವುದಾಗಿ ತಿಳಿಸಿದರು.                                                      ಹೊಸ ಸೇತುವೆ ಪೂರ್ಣಗೊಳ್ಳುವವರೆಗೆ ಈಗ ಮಾರ್ಗ ಬದಲಾವಣೆಯಿಂದ ಚಲಿಸುತ್ತಿರುವ ತುಂಬಿದ ಹಾರು ಬೂದಿ ಟ್ರಕ್ ಗಳನ್ನು ಈ ಸ್ಮಾರಕ ಸೇತುವೆ ಮಾರ್ಗದಲ್ಲಿ  ಚಲಾಯಿಸಬಾರದು.                                         ಹೆಚ್ಚು ಭಾರ ಹೊರುವ ಮತ್ತು ಹೆಚ್ಚಿನ ಆಯಾಮದ ಸರಕುಗಳು ವಾಹನಗಳನ್ನು ಈಗ ರಸ್ತೆ ದುರಸ್ತಿ ಗಾಗಿ ಮಾರ್ಗ ಬದಲಾವಣೆ ಮಾಡಿದಂತೆ ಹಾಗೇ ಹೊಸ ಸೇತುವೆ ಪೂರ್ಣಗೊಳ್ಳುವವರಿಗೆ ಮುಂದುವರಿಸಲು ಸೂಚಿಸುವುದು.                                           ಸೇತುವೆ ಮೇಲೆ ಅತಿ ವೇಗದ ವಾಹನಗಳಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ಕೈಗೊಂಡು ವಾಹನಗಳ ವೇಗವನ್ನು ತಗ್ಗಿಸಬೇಕು, ಹಾಗೂ ರಂಬಲ್  ಸ್ಟ್ರಿಪ್ಸ್ ಗಳು , ಎಚ್ಚರಿಕೆ ಬೋರ್ಡ್ ಗಳನ್ನು ಅಳವಡಿಸುವುದು. ಮಾನ್ಯ ಲೋಕಸಭಾ ಸದಸ್ಯರು ಮಾತನಾಡಿ, ಈ ಕುರಿತು ಕ್ರಮ ವಹಿಸಲು ಕೂಡಲೇ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು  ಸೂಚಿಸಲಾಗುವುದು ಎಂದು ತಿಳಿಸಿದರು.ನಂತರ ಮಾನ್ಯ ಲೋಕಸಭಾ ಸದಸ್ಯರು ಭಾರತ್ ಮಾಲಾ ಪರಿಯೋಜನೆ ಅಡಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ ಅಕ್ಕಲಕೋಟೆ- ಕರ್ನೂಲ್  150ಸಿ ಅಡಿ ರಾಯಚೂರು ಭಾಗದ 6 ಲೇನ್  ಪ್ರವೇಶ ನಿಯಂತ್ರಿತ ಹೆದ್ದಾರಿ- ವಡ್ಲೂರಿನಿಂದ ಚಂದ್ರಬಂಡ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸದರಿ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸೂಚನೆ  ನೀಡಲಾಯಿತು.

 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ