ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಬ್ರಹ್ಮೋದ್ಯೋಗ ಉದ್ಘಾಟನೆ
ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಬ್ರಹ್ಮೋದ್ಯೋಗ ಉದ್ಘಾಟನೆ ರಾಯಚೂರು,ಫೆ.25- ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಆಶ್ರಯದಲ್ಲಿ ಸಂಯೋಜಿಸಲ್ಪಟ್ಟ ಅಖಿಲ ಭಾರತ ಮಟ್ಟದ ಬ್ರಾಹ್ಮಣ ಉದ್ಯಮಿಗಳ ಸಮಾವೇಶ "ಬ್ರಹ್ಮೋದ್ಯೋಗ" ವನ್ನು ಉದ್ಘಾಟಿಸಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು .
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ , ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ , ಅಖಿಲ ಭಾರತ ಮಹಾಸಂಘದ ಅಧ್ಯಕ್ಷ ಡಾ ಗೋವಿಂದ ಕುಲಕರ್ಣಿ , ಬ್ರಾಹ್ಮಣ ಮಹಾ ಸಂಘದ ಉದ್ಯಮ ವಿಭಾಗದ ಸಂಯೋಜಕ ಶ್ರೀಕಾಂತ್ ಬಡ್ವೆ , ಹರ್ಯಾಣದ ಅರವಿಂದ ಶರ್ಮಾ , ತ್ರಿವಿಕ್ರಮ ಜೋಶಿ ಇನ್ನಿತರರು ಉಪಸ್ಥಿತರಿದ್ದರು .
Comments
Post a Comment