ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ-ದದ್ದಲ್
ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ-ದದ್ದಲ್
ರಾಯಚೂರು.ಫೆ.26- ಬಡತನವನ್ನು ಮೆಟ್ಟಿ ನಿಂತು ಕಷ್ಟ ಪಟ್ಟು ವಿದ್ಯಾಬ್ಯಾಸ ಮಾಡಿ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವೆಂದು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹೇಳಿದರು.
ತಾಲೂಕಿನ ಮಮದಾಪೂರ ಗ್ರಾಮದ ಎಂಜಿ ಶಾಲೆಯ 5ನೇ ಶಾಲಾ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಈ ದೇಶಕ್ಕೆ ಅನ್ನ ಕೊಡುವ ರೈತ ಮತ್ತು ಸೈನಿಕರ ಪಾತ್ರ ಮುಖ್ಯವಾಗಿದೆ, ರೈತ ಮತ್ತು ಸೈನಿಕರಿಗೆ ಗೌರವ ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ,
ಮೃತಪಟ್ಟಿರುವ ಸೈನಿಕನ ಕುಟುಂಬಕ್ಕೆ ಸೌಲಭ್ಯ ಒದಗಿಸಿಕೊಡಬೇಕು, ಅವರಿಗೆ ಗೌರವ ನೀಡುವ ಕೆಲಸ ಆಗಬೇಕಿದೆ, ಅವರಿಗೆ ಪ್ರೋತ್ಸಾಹ ಕೊಡ ಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ದೇಶ ಕಾಯುವ ಸೈನಿಕ, ವಿಜ್ಞಾನ, ರಾಷ್ಟ್ರಪತಿ ಆಗಬಹುದು, ದೇಶದಲ್ಲಿ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ದೇಶದಲ್ಲಿ ಸಾಧನೆ ಮಾಡಿದ್ದಾರೆ, ಅಬ್ದುಲ್ ಕಲಾಂ ರಾಷ್ಟ್ರಪತಿಗಳಾಗಿದ್ದಾರೆ, ಬಡತನದಲ್ಲಿ ಕಷ್ಟ ಪಟ್ಟು ಓದಿದ ವಿದ್ಯಾರ್ಥಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವೆಂದರು.
ತಂದೆ ತಾಯಿಗಳಿಗೆ ಎಷ್ಟೇ ಕಷ್ಟ ವಿದ್ದರೂ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡುವ ಕೆಲಸ ಮಾಡಬೇಕು, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ನೀಡಬೇಕು, ತಾಲೂಕಿನಲ್ಲಿರುವ 35 ರಿಂದ 40 ಕೋಟಿ ಶಾಲೆಗಳಿಗೆ ಖರ್ಚು ಮಾಡಿದ್ದೇನೆ, 2019-20ನೇ ಸಾಲಿನಲ್ಲಿ 4 ಪ್ರೌಢಶಾಲೆಗ ಳನ್ನು ತಂದಿದ್ದೇನೆ, ಪ್ರಸಕ್ತ ಸಾಲಿನಲ್ಲಿ 9 ಹೈಸ್ಕೂಲ್‌ಗಳನ್ನು ತಂದಿದ್ದೇನೆ, ಗ್ರಾಮೀಣ ಭಾಗದಲ್ಲಿ ಪ್ರೌಢ ಶಾಲೆ ಅವಶ್ಯಕತೆ ಇದೆ, ಹೆಣ್ಣು ಮಕ್ಕಳು ಶಾಲೆಯಿಂದ ವಂಚಿತರಾಗದೆ, ಅನುಕೂಲ ಮಾಡಿಕೊಟ್ಟಿದ್ದೇನೆ, ಕೆಕೆಆರ್‌ಡಿಬಿಯಿಂದ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಕಿಲ್ಲೆದ್ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಂಸ್ಕಾರದ ಶಿಕ್ಷಣದಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಪ್ರತಿವರ್ಷ ಸಂಖ್ಯೆ ಹೆಚ್ಚಳವಾಗಲಿ, ಶಾಲೆಯು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು.
ಮನೆಗೆ ಯಜಮಾನ ಇರಬೇಕು, ಹೊಲದಲ್ಲಿ ಕೃಷಿ ಮಾಡುವ ರೈತ ಇರಬೇಕು, ಸೈನಿಕನಿಗೆ ಅತ್ತಿದ ರಕ್ತ, ರೈತನ ಕೈಗೆ ಅತ್ತಿದ ಮಣ್ಣು, ಶಿಕ್ಷಕನ ಕೈಗೆ ಅತ್ತಿದ ಬಳಪದ ದೂಳು ಇವು ರಾಷ್ಟ್ರಕ್ಕೆ ಸೇವೆ ಮಾಡದೇ ಇದ್ದರೆ, ನಾವೆಲ್ಲರೂ ಇದ್ದೂ ಸತ್ತಂಗ, ಇದು ಪ್ರಚಲಿತವಾದದ್ದು ಇವರೆಲ್ಲ ರೂ ಇದ್ದರೆ ನಾವು ಬದುಕಿರಲು ಸಾಧ್ಯ, ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಕೊಡಬೇಕು ಎಂದು ತಿಳಿಸಿದರು. ವಿಶೇಷವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಲ್.ಕೇಶವರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರು ಮಮದಾಪುರ್ ಹಾಗೂ ಬುಜ್ಜಮ್ಮ ಶಂಕ್ರಪ್ಪ ನಗರಸಭೆ ಸದಸ್ಯರು ರವಿಕುಮಾರ್ ಗೋನಾಳ್ ಗ್ರಾಮ ಪಂಚಾಯತಿ ಖಾಸಗಿ ಶಾಲೆ ಒಕ್ಕೂಟ ರವಿ ಭೂಷಣ್ ಉಪಾಧ್ಯಕ್ಷರು ಕುಸ್ಮಾ ರಾಯಚೂರು, ಲಿಂಗಯ್ಯ ಅಧ್ಯಕ್ಷರು ವಿ ಎಸ್ ಎಸ್ ಎನ್ ಮಮದಾಪುರ್, ಶರಣಬಸವ ಪಟೇಲ್ ಅಧ್ಯಕ್ಷರು ಶ್ರೀ ಬಸವ ಶಾಲೆ ಆಶಾಪುರ್, ಗಧಾರ ಮಾರಿಕಾಂಬ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಮಮದಾಪುರ್ ಗ್ರಾಮದ ಎಲ್ಲಾ ಸಮಾಜ ಮುಖಂಡರು, ಎಂ ಜಿ ಶಾಲೆ ಸಂಸ್ಥಾಪಕರು ಅಧ್ಯಕ್ಷರು ಮಹೇಶ್ವರಿ ಗಚ್ಚಿನಮನೆ ಬಸನಗೌಡ,ಸೇರಿದಂತೆ ಅನೇಕರು ಇದ್ದರು.
Comments
Post a Comment