ಸಿಎಂ ರಿಂದ ವಿಮಾನ ನಿಲ್ದಾಣ ಭೂಮಿ ಪೂಜೆಗೆ ಮುಹೂರ್ತವೆಂದು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನ ಬಂತು.. ರಾಯಚೂರಿಗೆ ಯಾವಾಗ?

 


ಸಿಎಂ ರಿಂದ ವಿಮಾನ ನಿಲ್ದಾಣ  ಭೂಮಿ ಪೂಜೆಗೆ ಮುಹೂರ್ತವೆಂದು:

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನ ಬಂತು.. ರಾಯಚೂರಿಗೆ ಯಾವಾಗ?

- ಜಯಕುಮಾರ್ ದೇಸಾಯಿ ಕಾಡ್ಲೂರು

ರಾಯಚೂರು,ಫೆ.೨೧-ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಮಧ್ಯಮ ವರ್ಗದ ಜನರಿಗೂ ಲಭೀಸಲಿ ಎಂಬು ಉದ್ದೇಶದಿಂದ ದೇಶದೆಲ್ಲಡೆ ಎರೆಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವತ್ತ ಹೆಜ್ಜೆಯಿಟ್ಟಿದ್ದು  ಅದಕ್ಕ ನುಗುಣವಾಗಿ ರಾಜ್ಯದ ಎರಡನೆ ಹಂತದ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮುಂತಾದೆಡೆ ವಿಮಾಣ ನಿಲ್ದಾಣಗಳು  ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನರು ವಿಮಾನ ಪ್ರಯಾಣ ಮಾಡುತ್ತಿದ್ದಾರೆ ಇದೀಗ ಇದೆ ಫೆ.೨೭ ರಂದು ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿಗಳು ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಲಿದ್ದು ರಾಷ್ಟçಕವಿ ಕುವೆಂಪು ಹೆಸರು ನಾಮಕರಣಕ್ಕೆ ನಿರ್ಧರಿಸಲಾಗಿದೆ.


ಮೇಲಿನ ಇಷ್ಟೆಲ್ಲ ಪೀಠಿಕೆ ಏಕೆಂದು ಓದುಗರು ಕೇಳಬಹುದು ಅದಕ್ಕೆ ಈ ಕೆಳಗಿನ ಸುದ್ದಿ ನೀವು ತಪ್ಪದೆ ಓದಬೇಕು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ದವಾಗಿದೆ.. ಆದರೆ ರಾಯಚೂರು ವಿಮಾನ ನಿಲ್ದಾಣ ಶಂಕು ಸ್ಥಾಪನೆಗೂ ಇನ್ನೂ ಮುಹೂರ್ತ ನಿಗದಿಯಾಗಿಲ್ಲ ಬಜೆಟ್ ನಲ್ಲಿಯೂ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭದ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿಲ್ಲ ನಗರ ಶಾಸಕರು ಹೇಳುವಂತೆ ವಿಮಾನ ನಿಲ್ದಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು ಮಾರ್ಚ್ ಮೊದಲ ವಾರದಲ್ಲಿ ವಿಮಾನ ನಿಲ್ದಾಣ ಭೂಮಿ ಪೂಜೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಾರೆಂದು ಹೇಳಲಾಗಿದೆ ಇನ್ನೂ ಒಂದುವರೆ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದರೆ ಅತ್ಯವಶ್ಯಕ ಕಾಮಗಾರಿ ಹೊರತುಪಡಿಸಿ ಇನ್ಯಾವುದು ಕಾಮಗಾರಿ ಪ್ರಾರಂಭಿಸಲು ಬರುವುದಿಲ್ಲ ಚುನಾವಣೆ ಮಾದರಿ ನೀತಿ ಸಂಹಿತೆ ಘೋಷಣೆ ಪೂರ್ವದಲ್ಲೆ ವಿಮಾನ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಬೇಕಾಗಿದೆ.


ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣಕ್ಕೆ ಕಾಯ್ದಿರಸಲಾದ ಜಾಗದಲ್ಲೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು ನಗರದಲ್ಲಿ ಬಹುದಿನಗಳಿಂದ ನಗರದಿಂದ ವಿಮಾನದಲ್ಲಿ ಹಾರಾಡಬೇಕೆಂದು ಕನಸ್ಸು ಹೊತ್ತ ಅನೇಕ ಜನರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಶೀಘ್ರದಲ್ಲೆ ಜನರಿಗೆ ವಿಮಾನಯಾನದ ಸೌಲಭ್ಯ ಲಭಿಸಬೇಕೆಂದು ಕುತೂಹಲದಿಂದ ಕಾಯುತ್ತಿದ್ದು ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭಿಸಬೇಕೆ0ಬುದು ಜನರ ಅಭಿಲಾಷೆಯಾಗಿದೆ.

ಯಾವುದೆ ಯೋಜನೆ ಕಾಲ ಮಿತಿಯಲ್ಲಿ ಕಾರ್ಯಗತವಾಗಲು ರಾಜಕೀಯ ಇಚ್ಚಾಶಕ್ತಿಯ ಅಗತ್ಯತೆಯಿದ್ದು ಅಭಿವೃದ್ದಿ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕೀಯ ನಾಯಕರ ಸಹಕಾರ ಅತಿಮುಖ್ಯವಾಗಿ ಬೇಕಾಗಿದ್ದು ಜಿಲ್ಲೆಗೆ ಹೊಸ ಯೋಜನೆಗಳು ಬರಬೇಕೆಂದರೆ ಇಲ್ಲಿರುವ ಜನ ಪ್ರತಿನಿಧಿಗಳು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಬೇಕು ಹಾಗಾಧಾಗಾ ಮಾತ್ರ ಯಶಸ್ಸು ಕಾಣಲು ಸಾಧ್ಯ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕಿತ್ಯೋಗೆಯಲು ಅಭಿವೃದ್ದಿ ಮಾತ್ರ ಮೂಲ ಮಂತ್ರವಾಗಿದೆ ಕೇವಲ ಮಾತಿನಲ್ಲಿ ಆಡದೆ ಕೃತಿಯಲ್ಲಿ ತರಬೇಕಾದ ಜವಾಬ್ದಾರಿ ಜನ ಪ್ರತಿನಿಧಿಗಳ ಮೇಲಿದ್ದು ಇದಕ್ಕೆ ನಾಗರೀಕರು ಸಹ ಸಲಹೆ ಸೂಚನೆ ನೀಡುತ್ತ ಅಭಿವೃದ್ದಿಗೆ ಜೊತಯಾಗಬೇಕು.

ವಿಮಾನ ನಿಲ್ದಾಣ ನಿರ್ಮಾಣದಿಂದ ಈ ಭಾಗದಲ್ಲಿ ಅಭಿವೃದ್ದಿಯ ವೇಗ ಹೆಚ್ಚುತ್ತದೆ ಕೈಗಾರಿಕೋದ್ಯಮಿಗಳು ಇತ್ತ ತಮ್ಮ ಚಿತ್ತ ಹರಿಸುತ್ತಾರೆ ದೂರದ ಊರುಗಳಿಗೆ ಪ್ರಯಾಣಿಸುವವರು ಸಮಯದ ಉಳಿತಾಯಕ್ಕೆ ಹೆಚ್ಚು ಗಮನ ನೀಡುತ್ತಾರೆ ವಿಮಾನ ಪ್ರಯಾಣದಿಂದ ಸಮಯದ ಉಳಿತಾಯ ಜೊತೆಗೆ ನಿರ್ದಷ್ಟ ಸಮಯಕ್ಕೆ ಆಯಾ ಸ್ಥಳಗಳಿಗೆ ತಲುಪುತ್ತೇವೆ ವಿಮಾನ ಪ್ರಯಾಣ ಈಗ ಸರ್ಕಾರದ ಉಡಾನ್ ಯೋಜನೆಯಡಿ ಎಲ್ಲ ನಗರಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದು ರಾಯಚೂರು ವಿಮಾನ ನಿಲ್ದಾಣ ಶಂಕು ಸ್ಥಾಪನೆ ಬೇಗನೆ ನೆರವೇರಲಿ ಮತ್ತು ಒಂದೆರಡು ವರ್ಷದಲ್ಲಿ ವಿಮಾನ ನಿಲ್ದಾಣ ಪೂರ್ಣಗೊಂಡು ಈ ಬಾಗದ ಜನರು ಆಕಾಶ ಮಾರ್ಗದಲ್ಲಿ ಪ್ರಯಾಣಿಸುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.







Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ