ವಿವಿಧ ಬೇಡಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಎಫ್ಐನಿಂದ ಉಪ ಕುಲಪತಿಗೆ ಮನವಿ

 


ವಿವಿಧ ಬೇಡಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಎಫ್ಐನಿಂದ ಉಪ ಕುಲಪತಿಗೆ ಮನವಿ

ರಾಯಚೂರು,ಫೆ.28- ಮಾರ್ಚ್ ನಲ್ಲಿ  ವಿವಿಧ ಕೋರ್ಸ್ ಗಳ ಪ್ರಥಮ ಹಾಗೂ ತೃತೀಯ ಎನ್ಇಪಿ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಸರಕಾರದ ನಿಯಮದ ಪ್ರಕಾರ ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆಧಾರದ ಮೇಲೆ ಪರೀಕ್ಷೆ ಶುಲ್ಕದಲ್ಲಿ ಸಂಬಂಧಪಟ್ಟ ದಾಖಲಾತಿ ತೆಗೆದುಕೊಂಡು ವಿನಾಯಿತಿ ಕೊಡಲು ತಿಳಿಸಿದರೂ ಸಹ  ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿ   ರಾಯಚೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಹರೀಶ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಥಮ ಸೆಮಿಸ್ಟರ್ ನ ಫಲಿತಾಂಶ ಬಿಡುಗಡೆ ಆಗದ ಕಾರಣ ನಾವುಗಳು ವಿದ್ಯಾರ್ಥಿ ವೇತನಕ್ಕೆ ಎಸ್ ಎಸ್ ಪಿ ಅರ್ಜಿ ಹಾಕಲು ಆಗಿರುವುದಿಲ್ಲ. ಇದು ಕೂಡ ಸಮಸ್ಯೆ ಆಗುತ್ತಿದ್ದು, ಕೂಡಲೇ ಫಲಿತಾಂಶ ಬಿಡುಗಡೆ ಮಾಡಬೇಕು ಮತ್ತು ಎಸ್ಸಿ ಎಸ್ಟಿ ಒಬಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ವಿನಾಯಿತಿ ಕೊಡಬೇಕು. ಮತ್ತು  ಫಲಿತಾಂಶ ಪ್ರಕಟದಲ್ಲಿ ಅನೇಕ ವಿದ್ಯಾರ್ಥಿಗಳ ಫಲಿತಾಂಶ ದೋಷಪೂರಿತವಾಗಿದೆ ಇದು ವಿವಿಯ ಬೇಜವಾಬ್ದಾರಿತನವಾಗಿದೆ ಎಂದು ದೂರಲಾಯಿತು.

ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಬೇಕು ಮತ್ತು  ಕಂಪ್ಯೂಟರಿಕರಣ ಶುಲ್ಕವನ್ನು ತೆಗೆದುಕೊಳ್ಳಬಾರದು. NEP 2021-22 ಸಾಲಿನ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿರುವುದಿಲ್ಲ. ಫಲಿತಾಂಶ ಬಂದಿರೋ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಇನ್ನು ತೊಂದರೆಗಳಿವೆ.  ಪರೀಕ್ಷಾ ಶುಲ್ಕದಲ್ಲಿ ಮಾರ್ಕ್ಸ್ ಕಾರ್ಡ್ ಶುಲ್ಕವನ್ನು ಪಡೆದಿರುತ್ತಿರಿ. ಆದರೂ ಮರು ಮೌಲ್ಯಮಾಪನದ ಶುಲ್ಕ ಪಾವತಿಸಿಕೊಳ್ಳುವಾಗ ಮಾರ್ಕ್ಸ್ ಕಾರ್ಡ್ ಶುಲ್ಕವನ್ನು ಪುನಃ ಪಡೆಯುತ್ತಿದ್ದೀರಿ. ಇದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಯಿತು.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಖಾಲಿರುವ ಅತಿಥಿ ಉಪನ್ಯಾಸಕರು ಮತ್ತು ಸಂಯೋಜಕರ ಹುದ್ದೆಗಳಿಗೆ 

ಈಗ ಅಂದರೆ ಫೆಬ್ರುವರಿ 24 , 2023 ರಂದು ವಾಕ್ ಇಂಟರ್ವ್ಯು ನಡೆಸಲಾಗಿರುತ್ತದೆ. ಇದು ವಿವಿಯ ಬೇಜವಾಬ್ದಾರಿತನವನ್ನು ಸೂಚಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜಿಲ್ಲಾ ಸಮಿತಿ ಸದಸ್ಯರಾದ ವಿಶ್ವ ಅಂಗಡಿ, ಬಸವಂತ ಹಿರೇಕಡಬೂರು, ಪವನ್ ಕುಮಾರ್ ಕಮದಾಳ್, ಪ್ರಹ್ಲಾದ ಕೋಠಾ, ಮೌನೇಶ್, ಪ್ರಕಾಶ್, ವೆಂಕಟೇಶ, ಅಯ್ಯಣ್ಣ, ರಮೇಶ, ಈರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್