ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ ಸಿ.ಪಿ.ಐ.ಎಂ ಪ್ರತಿಭಟನೆ
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ ಸಿ.ಪಿ.ಐ.ಎಂ ಪ್ರತಿಭಟನೆ
ರಾಯಚೂರು,ಫೆ.28-ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹೋರಾಟಗಾರ ಮತ್ತು ಸಿ.ಪಿ.ಐ.ಎಂ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶಬ್ಬೀರ್ ತಂದೆ ಮಹ್ಮದ ಜಾಲಹಳ್ಳಿ ಇವರ ಮೇಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದನ್ನು ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ ಸಿ.ಪಿ.ಐ.ಎಂ. ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಬ್ಬೀರ್ ಜಾಲಹಳ್ಳಿ ಇವರು ಕಳೆದ ೧೦-೧೫ ವರ್ಷಗಳಿಂದ ವಿದ್ಯಾರ್ಥಿ ದಿಸೆಯಿಂದಲೇ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸಂಘಟನೆಯಿ0ದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮೂಲಕ ಬಡವರ ಕಾರ್ಮಿಕರ ಹಕ್ಕುಗಳಿಗಾಗಿ ಅವರಿಗೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಚಳುವಳಿಗಳು ನಡೆಸುತ್ತಿದ್ದಾರೆ. ಚಳುವಳಿಯ ಭಾಗವಾಗಿ ಜನರ ಹಕ್ಕುಗಳಿಗಾಗಿ ಹೋರಾಡುವ ಇವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇರುವುದಿಲ್ಲ. ಆದರೆ ಜಾಲಹಳ್ಳಿ ಪೊಲೀಸ್ ಅಧಿಕಾರಿಗಳು ಏಕಾಏಕಿಯಾಗಿ ಪಟ್ಟಭದ್ರ ಇತಾಸಕ್ತಿಗಳ ರಾಜಕೀಯ ಉದ್ದೇಶಕ್ಕಾಗಿ ಕಾನೂನು ಬಾಹೀರವಾಗಿ ಸುಳ್ಳು ಗೂಂಡಾ ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಸಿ.ಪಿ.ಐ.ಎಂ. ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಸುಳ್ಳು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು ಮತ್ತು ಕೂಡಲೇ ಸಿ.ಪಿ.ಎಂ. ಪಕ್ಷದ ಮುಖಂಡತ ಮೇಲೆ ಹಾಕಿರುವ ಸುಳ್ಳು ಗೂಂಡಾ ಕೇಸ್‌ನ್ನು ವಾಪಸ್ ಪಡೆಯಬೇಕೆಂದು ಈ ಪ್ರತಿಭಟನೆಯ ಮೂಲಕ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಒತ್ತಾಯ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ನರಸಣ್ಣ ನಾಯಕ ಶಬ್ಬೀರ್, ಡಿ.ಎಸ್.ಶರಣಬಸವ ಮತ್ತು ಜಿಲ್ಲಾ ಸಮಿತಿ ಮುಖಂಡರುಗಳಾದ ಕರಿಯಪ್ಪ ಅಚ್ಚೊಳ್ಳಿ, ಪಿ.ಗಿರಿಯಪ್ಪ, ಹೆಚ್.ಶರ್ಫುÈದ್ದೀನ್, ಸಂಗಮೇಶ, ಬಿ.ಲಿಂಗಪ್ಪ, ರಮೇಶ ವೀರಾಪೂರು, ಡಿ.ವೀರನಗೌಡ, ಅಪ್ಪಣ್ಣ ಕಾಂಬ್ಳೆ, ಲಿಂಗರಾಜ, ಹನುಮೇಶ ಸೇರಿದಂತೆ ನೂರಾರು ಜನ ಪಕ್ಷದ ಸದಸ್ಯರುಗಳು ಭಾಗವಹಿಸಿದ್ದರು.
Comments
Post a Comment