ಜೆ ಡಿ ಎಸ್ ನಿಂದ ಮನೆ ಮನೆಗೆ ಕುಮಾರಣ್ಣ: ಜನತೆ ಆರ್ಶೀವಾದಿಂದ ಕುಮಾರಣ್ಣ ಮತ್ತೆ ಮುಖ್ಯ ಮಂತ್ರಿಯಾಗಲಿ- ಕಿಲ್ಲೆ ಶ್ರೀಗಳು


ಜೆ ಡಿ ಎಸ್ ನಿಂದ ಮನೆ ಮನೆಗೆ ಕುಮಾರಣ್ಣ:                                     
ಜನತೆ ಆರ್ಶೀವಾದಿಂದ ಕುಮಾರಣ್ಣ ಮತ್ತೆ  ಮುಖ್ಯ ಮಂತ್ರಿಯಾಗಲಿ- ಕಿಲ್ಲೆ ಶ್ರೀಗಳು
 

ರಾಯಚೂರು,ಫೆ.22- ನಗರದ ಕಿಲ್ಲೆ ಬೃಹನ್ಮಠದಲ್ಲಿ ಮಠದ ದೇವಸ್ಥಾನದಲ್ಲಿ ಶ್ರೀ ಶ್ರೀ ಶಾಂತಮಲ್ಲ ಶಿವಾಚಾರ್ಯ ದಿವ್ಯ ಸಾನಿಧ್ಯ ದಲ್ಲಿ ಪ್ರಚಾರ ವಾಹನ ಕರಪತ್ರಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ನಂತರ ಆರ್ಶೀವಾಚನ ನೀಡಿ ನಮ್ಮ ಮಠಕ್ಕೆ ಎಲ್ಲ ರಾಜಕೀಯ ಪಕ್ಷದವರು ಆಗಮಿಸುವರು ಇಂದು ಜೆಡಿಎಸ್ ಪಕ್ಷದವರು ಮಠದಲ್ಲಿ ಪೂಜೆ ಮಾಡಿದ್ದು ಸಂತೋಷ ವಿಷಯ ಹಗಲು ರಾತ್ರಿಯ ಜನರ ಸೇವೆ ಸಲ್ಲಿಸುವ ಸರಳ ವ್ಯಕ್ತಿತ್ವದ ಕುಮಾರಸ್ವಾಮಿಯವರನ್ನು ನಾಡಿನ ಜನತೆ ಮತ್ತೊಮ್ಮೆ ಮುಖ್ಯ ಮಂತ್ರಿಯ ಮಾಡಲಿ ಜನಸಾಮಾನ್ಯರ ಸಂಕಷ್ಟ ಮಿಡಿಯುವ ನಾಯಕರು ಈಗ ಅವಶ್ಯಕವಾಗಿದೆ ಪ್ರಚಾರ ಕಾರ್ಯ ಯಶಸ್ವು ಯಾಗಲಿ ಎಂದು ಹಾರೈಸಿದರು.

ಜೆ ಡಿ ಎಸ್ ಅಭ್ಯರ್ಥಿ ಈ ವಿನಯಕುಮಾರ ಮನೆ ಮನೆಗೆ ಕಮಾರಣ್ಣ  ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ" ಪಕ್ಷದಿಂದ ರಾಯಚೂರು ನಗರದಲ್ಲಿ ಪ್ರತಿ ಮನೆಗೆ ಹೋಗಿ  ಜನತೆಗೆ ಕುಮಾರಣ್ಣ ಪಂಚರತ್ನ ಯೋಜನೆಯ ತಿಳಿಸಲಾಗುವದು  ಕುಮಾರಣ್ಣ ನನಗೆ ರಾಯಚೂರು ನಗರದಲ್ಲಿ ಜೆಡಿಎಸ್ ಬಾವುಟ ಹಾರಿಸಿಲು ಆಶಿರ್ವಾದ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠ ಗಳಿಸುತ್ತನೆ  ಎಂದರು.


 

ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ ಮಾತನಾಡಿದ   ಮಾತನಾಡಿ , ಎರಡು ರಾಷ್ಟ್ರೀಯ ಪಕ್ಷಗಳಿಂದ ಜನತೆ ಬೇಸತ್ತು ಹೋಗಿದ್ದಾರೆ ಪಕ್ಷದ ಮುಖಂಡರು, ಕಾರ್ಯಕರ್ತರ,ಕುಮಾರಣ್ಣ ಮುಖ್ಯ ಮಂತ್ರಿಯ ಮಾಡಲು ಶ್ರಮಿಸಬೇಕು ಕುಮಾರಣ್ಣ ಪಂಚರತ್ನ ಯಾತ್ರೆಯುಲ್ಲಿ ರಾಜ್ಯ ಜನತೆಗೆ ಆರೋಗ್ಯ, ಶಿಕ್ಷಣ, ಮಹಿಳೆ, ಯುವ ಸಬಲೀಕರಣ ,ವಸತಿ ಸೌಲಭ್ಯ ಕಲ್ಪಿಸುವ ಸ್ಪಷ್ಟ ಉದ್ದೇಶ ಹೊಂದಿದೆ ಅದಕಾರಣ ಜಿಲ್ಲೆಯ ಜನತೆ ಕುಮಾರಣ್ಣ ಬೆಂಬಲಿಸಬೇಕು  ಎಂದರು   .

ಜಿಲ್ಲಾ ಅಧ್ಯಕ್ಷ ಎಂ ವಿರುಪಕ್ಷಿ ಮಾತನಾಡಿ, ಜಿಲ್ಲೆಯ ಎಲ್ಲ ವಿಧಾನಸಭೆಯ ಕ್ಷೇತ್ರಗಳಲ್ಲಿ ಮನೆಗೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಂಚರತ್ನ ಯೋಜನೆಯ ಜಾರಿಗೊಳಿಸುತ್ತವೆ ಎಂಬ ಸಂದೇಶ ನೀಡಿ, ಪಕ್ಷದ ಅಭ್ಯರ್ಥಿಗಳು ಗೆಲುವ  ಕೆಲಸ ಮಾಡಲಾಗುವದು ಎಂದರು.


ನಂತರ ಎನ್ ಶಿವಶಂಕರ ವಕೀಲರು ಕಾರ್ಯಾಧ್ಯಕ್ಷರು ಮಾತನಾಡಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಈ ಬಾರಿ ಪಂಚರತ್ನ ರಥಯಾತ್ರೆಯ ಮೂಲಕ ರಾಜ್ಯದ ಪ್ರತಿ ಜನತೆಗೆ ಈ ಬಾರಿ ತಾವು ಅಧಿಕಾರಕ್ಕೆ ಬಂದರೆ ಏನು ಕೊಡುಗೆಗಳ ನೀಡುತ್ತವೆ ನೇರವಾಗಿ ತಿಳಿಸುತ್ತಿದ್ದಾರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಏಕೈಕ ವ್ಯಕ್ತಿ ಎಂದರೆ ಕುಮಾರಣ್ಣ ಅದಕಾರಣ ಜನಾತದಳ ಪಕ್ಷಕ್ಕೆ ಆರ್ಶೀವಾದ ಮಾಡಿ ಎಂದರು 

ಸಂದರ್ಭದಲ್ಲಿ ನಗರ ಅಧ್ಯಕ್ಷ ಬಿ ತಿಮಾರೆಡ್ಡಿ   ಜಿಲ್ಲಾ ಯುವ ಅಧ್ಯಕ್ಷ ಪವನಕುಮಾರ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಲಕ್ಷೀಪತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ವಿಶ್ವನಾಥ ಪಟ್ಟಿ ಶಾಮಸುಂದರ್  ಮಹಿಳಾ ಅಧ್ಯಕ್ಷೆ ಪಾತಿಮಾ, ಸೀಮಾ ನಧಾಫ್ ಅಮ್ಜದ್,  ರವಿ ಮಡಿವಾಳ ,ಈರಣ್ಣ ಯಾದವ, ಆದಿರಾಜಾ , ನರಸಪ್ಪ ಆಶಾಪೂರ, ಪಾರ್ಥ, ನರಸಿಂಹಲು, ಪಾರ್ಥ, ಅಲಂಬಾಬು, ನರಸಿಂಹಲು ,ಎ ಅಂಜಿನಯ್ಯ ಇಂದಿರಾನಗರ, ಬಿ.ಕೆ ಬಾಬು ಅವಿಲ್ ಅಮಿತ್ ಸುಂಕಾರಿ, ಕುಮಾರಸ್ವಾಮಿ, ಮಾರೆಪ್ಪ , ಪ್ರಕಾಶ ವೆಂಕಟ್ ಸ್ವಾಮಿ ಉಪಸಿತಿದ್ದರು 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ