ಕಾಡ್ಲೂರು: ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ- ಅಪಾರ ನಷ್ಟ


ಕಾಡ್ಲೂರು: ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ- ಅಪಾರ ನಷ್ಟ

ರಾಯಚೂರು,ಫೆ.೨೦-ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ. 

ಗ್ರಾಮದ ಹೊರವಲಯದ ಪೆಟ್ರೋಲ್ ಪಂಪ್ ಬಳಿಯ ಹೊಲದಲ್ಲಿ ಸಂಗ್ರಹಸಿಟ್ಟ ಹತ್ತಿಗೆ ಬೆಂಕಿ ಹತ್ತಿದ್ದುಬೆಳಿಗಿನ ಜಾವ ಈ ಘಟನೆ ನಡೆದಿರಬಹುದೆಂದು ಹೇಳಲಾಗಿದ್ದು ಸುದ್ದಿ ತಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರು ಅಲ್ಲದೆ ಗ್ರಾಮಸ್ಥರು ಸಹ ಟ್ರಾಕ್ಟರ್ ಟ್ಯಾಂಕರ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು. 


ಮೌಲಾಲಿ, ನಬಿಸಾಬ್ ಎಂಬುವವರಿಗೆ ಸೇರಿರುವ ಹತ್ತಿ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅದೇ ರೀತಿ ಗ್ರಾಮದಲ್ಲಿ ಮನೆ ಬಳಿ ಸುರೇಶ ಉಪ್ಪಾರ, ತಿಪ್ಪಣ್ಣ ಬಡಿಗೇರ್ ಎಂಬುವವರಿಗೆ ಸೇರಿರುವ ಸಂಗ್ರಹಿಸಿಟ್ಟ ಹತ್ತಿಯೂ ಸಹ ಬೆಂಕಿಗೆ ಸುಟ್ಟು ಭಸ್ಮವಾಗಿದೆ   .

ರೈತರಿಗೆ ಗಾಯದ ಮೇಲೆ ಬರೆ: ಹತ್ತಿ ಬೆಲೆ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಸೂಕ್ತ ದರ ಬಂದಾಗ ಮಾರಾಟ ಮಾಡಲು ರೈತರು ಹತ್ತಿ ಸಂಗ್ರಹಿಸಿಟ್ಟರೆ ಈ ರೀತಿಯ ಬೆಂಕಿ ಅವಘಡದಿಂದ ಅಪಾರ ಹತ್ತಿ ಕ್ಷಣಾರ್ಥದಲ್ಲಿ ಬೆಂಕಿಗೆ ಸುಟ್ಟು ಕರಕಲಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಬೆಂಕಿಯಿ0ದ ಸುಟ್ಟ ಹತ್ತಿ ನಷ್ಟ ಪರಿಹಾರಕ್ಕೆ ಸರ್ಕಾರ ನೆರವಿಗೆ ಧಾವಿಸಬೇಕೆಂಬುದು ಗ್ರಾಮಸ್ಥರ ಕೋರಿಕೆಯಾಗಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ