ಸರ್ಕಾರಿ ನೌಕರರ ಹೋರಾಟಕ್ಕೆ ಜೆಡಿಎಸ್ ಪಕ್ಷ ಬೆಂಬಲ - ಶಿವಶಂಕರ


 ಸರ್ಕಾರಿ ನೌಕರರ ಹೋರಾಟಕ್ಕೆ ಜೆಡಿಎಸ್ ಪಕ್ಷ ಬೆಂಬಲ - ಶಿವಶಂಕರ

ರಾಯಚೂರು.ಫೆ.28-  ರಾಜ್ಯ ಸರ್ಕಾರಿ‌ ನೌಕರರ ನ್ಯಾಯಯುತವಾದ ಬೇಡಿಕೆಗಳಾದ ವೇತನ ಭತ್ಯೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ   ಸರ್ಕಾರಿ‌ ನೌಕರರ  ಅನಿರ್ದಿಷ್ಟಾವಧಿ ಮುಷ್ಕರಕ್ಕೆ   ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ಜಿಲ್ಲಾ  ಕಾರ್ಯಧ್ಯಕ್ಷ ಎನ್ ಶಿವಶಂಕರ ವಕೀಲರು ತಿಳಿಸಿದ್ದಾರೆ .                                              ನಮ್ಮ ರಾಜ್ಯದ ಸರ್ಕಾರಿ ನೌಕರರು ಇತರೆ ರಾಜ್ಯಗಳಿಗಿಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ.                                       7ನೇ ವೇತನ ಆಯೋಗದ ವರದಿಯಂತೆ ನಮ್ಮ ವೇತನ ಶೇ 40 ರಷ್ಟು ಹೆಚ್ಚಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್​ಘಡ್, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ರೀತಿಯಲ್ಲಿ ನಮ್ಮಲ್ಲೂ ಸಹ ಒಪಿಎಸ್ ಜಾರಿ ಮಾಡಬೇಕು ಎಂಬ ಬೇಡಿಕೆ‌ ಇದೆ ಇದು ನೌಕರರ ನ್ಯಾಯಯುತವಾದ ಹಾಗೂ ಸರಳ ಬೇಡಿಕೆಯಾಗಿದೆ. ನೌಕರರು ತಮ್ಮ ಬೇಡಿಕೆ ಹೋರಾಟದ ಕುರಿತು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಆದರೆ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗೆದೆ .ಸರ್ಕಾರ ವೇತನ ಆಯೋಗದ ಕುರಿತು ಬಜೆಟ್​ನಲ್ಲಿ ಘೋಷಣೆ ಮಾಡುವ ಕುರಿತ ನಿರೀಕ್ಷೆ ಇತ್ತು. ಆದರೆ ಅಲ್ಲಿ ಘೋಷಣೆ ಮಾಡದೆ ನೌಕರರಿಗೆ ನಿರಾಸೆಯನ್ನುಂಟು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್