ಫೆ.೨೪ ಕ್ಕೆ ಸಂಭ್ರಮ ಚಿತ್ರ ತೆರೆಗೆ-ಪ್ರವೀಣಾ ಕುಲಕರ್ಣಿ

 


ಫೆ.೨೪ ಕ್ಕೆ ಸಂಭ್ರಮ ಚಿತ್ರ ತೆರೆಗೆ-ಪ್ರವೀಣಾ ಕುಲಕರ್ಣಿ

ರಾಯಚೂರು,ಫೆ.೨೦-ಜಿಲ್ಲೆಯ ಸಿಂಧನೂರಿನ ಪ್ರತಿಭೆಗಳನ್ನೊಳಗೊಂಡ ಸಂಭ್ರಮ ಚಿತ್ರ ಫೆ.೨೪ ಕ್ಕೆ ರಾಜ್ಯದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ತಂಡದ ಪ್ರವೀಣಾ ಕುಲಕರ್ಣಿ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಿಂಧನೂರಿನ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದು ಮನೋಮೂರ್ತಿ, ಜಯಂತ ಕಾಯ್ಕಿಣಿ ,ಸೋನು ನಿಗಮ್ ಸಂಗೀತವಿದ್ದು ಶ್ರೀ ಎಂಬುವವರು ನಿರ್ದೇಶಕ ಮತ್ತು ರಾಘವೇಂದ್ರ ಎಂಬುವವರು ಸಹ ನಿರ್ದೇಶಕರಾಗಿದ್ದು ಅಭಯಯ ವಿರ್ ನಾಯಕ ನಟರಾಗಿದ್ದು ಚಿತ್ರದಲ್ಲಿ ನಿಧಿ ರಾಥೋಡ,ಶ್ರಾವಣಿ ಸೇರಿದಂತೆ ಮೂವರು  ನಾಯಕ ನಟಿಯರಿದ್ದು ಅನಿಲ್ ರಾಜ್ ಸಂಕೇತ್, ಉಮೇಶ ಎಲ್. ಧರಂಶಿ ನಿರ್ಮಾಪಕ ಮತ್ತು ಸಹ ನಿರ್ಮಾಪಕರಾಗಿದ್ದು ಮನೋ ಮನೋಮೂರ್ತಿ ಸಂಗೀತ ನೆರವು ನೀಡಲಿದ್ದಾರೆಂದರು.


ಚಿತ್ರವು ನವಿರಾದ ಪ್ರೇಮ ಕಥೆಯನ್ನೊಳಗೊಂಡಿದ್ದು ೯  ಸುಮಧುರ ಹಾಡುಗಳನ್ನು ಒಳಗೊಂಡಿದೆ ಎಂದ ಅವರು ಸುಮಾರು ಒಂದು ಕೋಟಿ .ರೂ ಬಂಡವಾಳದಲ್ಲಿ ಚಿತ್ರ ನಿರ್ಮಾ ಮಾಡಲಾಗಿದ್ದು ಬಹುತೇಕ ಚಿತ್ರಿಕರಣ ಸಿಂಧನೂರು ಭಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದ ಅವರು ರಾಜ್ಯಾದ್ಯಂತ ಫೆ.೨೪ ಕ್ಕೆ ೬೦ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆ ಹೊಂದಲಿದ್ದು ರಾಯಚೂರಿನಲ್ಲಿ ಮಿರಾಜ್ ಚಿತ್ರ ಮಂದಿರದಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಣೆ ಮಾಡಬಹುದೆಂದರು.


 ಈ ಸಂದರ್ಭದಲ್ಲಿ ಚಿತ್ರ ತಂಡದ ಪವನ್, ಸುನೀಲ್, ರಾಘವೇಂದ್ರ, ಸುದೀಪ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ