ರಾಷ್ಟ್ರೀಯ ಸಂಘಟನೆಗಳೊಂದಿಗೆ ಕೆಲಸ ಮಾಡೋಣ -ಡಾ ಶ್ರೀಕಾಂತ್ ಶೆಟ್ಟಿ .
ರಾಷ್ಟ್ರೀಯ ಸಂಘಟನೆಗಳೊಂದಿಗೆ ಕೆಲಸ ಮಾಡೋಣ - ಡಾ ಶ್ರೀಕಾಂತ್ ಶೆಟ್ಟಿ .
ರಾಯಚೂರು,ಫೆ.20- ಉಡುಪಿ ಮತ್ತು ಮಂಗಳೂರಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಎನ್.ಎಂ.ಓ ಘಟಕಗಳನ್ನು ಉದ್ಘಾಟಿಸಲಾಯಿತು. ಕರ್ನಾಟಕ ದಕ್ಷಿಣ ಸಂಘಟನಾ ಕಾರ್ಯದರ್ಶಿ ಡಾ.ಶ್ರೀಕಾಂತ್ ಶೆಟ್ಟಿ ಮತ್ತು ತಂಡವು ವಿವಿಧ ವೈದ್ಯರನ್ನು ಆಹ್ವಾನಿಸಿ ಎನ್.ಎಂ.ಓ ಕುರಿತು ಮಾಹಿತಿ ನೀಡಿದರು.
ಎನ್.ಎಂ.ಓ ಕರ್ನಾಟಕ ದಕ್ಷಿಣ ಅಧ್ಯಕ್ಷ ಡಾ.ಸತೀಶ್, ಕಾರ್ಯದರ್ಶಿ ಡಾ.ಶ್ರೀಧರ್ ಎನ್.ಎಂ.ಓ ಕಾರ್ಯದ ಕುರಿತು ವಿವರ ನೀಡಿದರು.
ಡಾ.ಶ್ರೀಕಾಂತ್ ಶೆಟ್ಟಿ ಅವರು ಮಾತನಾಡಿ ಎನ್.ಎಂ.ಓ ವೈದ್ಯರ ಸೇವಾ ಸಂಸ್ಥೆಯಾಗಿದೆ ಎಂದು ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ವೈದ್ಯ ಸಮುದಾಯ ರಾಷ್ಟ್ರ ನಿರ್ಮಾಣ ಶಕ್ತಿಗಳೊಂದಿಗೆ ಕೆಲಸ ಮಾಡುವಂತೆ ಕೇಳಿಕೊಂಡ ಅವರು ಇದರಿಂದ ಸಾರ್ವಜನಿಕ ಮತ್ತು ವೈದ್ಯರ ಸಂವಹನ ಅಂತರವು ಕಡಿಮೆಯಾಗುತ್ತದೆ ಮತ್ತು ಸಮಾಜ ಮತ್ತು ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದರು.
ಉಡುಪಿ ಮತ್ತು ಮಂಗಳೂರಿನ ಹಲವು ವೈದ್ಯರು , ಸಮಾಜ ಸೇವಕರು ಉಪಸ್ಥಿತರಿದ್ದರು .
Comments
Post a Comment